Ram mandir: ಪ್ರಾಣ ಪ್ರತಿಷ್ಠಾನದ ವೇಳೆ ರಾಮ ಮಂದಿರದ ಮೇಲೆ ಹದ್ದು ಹಾರಾಟ, ವಿಡಿಯೋ ಭಾರೀ ವೈರಲ್
ಅಯೋಧ್ಯೆ, ಜನವರಿ, 23: ಬರೀ ಭಾರತ ಅಲ್ಲದೆ ಇಡೀ ವಿಶ್ವವೇ ನಿನ್ನೆ (ಜನವರಿ 22) ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾನದ ಕ್ಷಣವನ್ನು ಕಣ್ತುಂಬಿಕೊಂಡಿದೆ. ಅಲ್ಲದೆ ಈ ಸಮಾರಂಭವು ದೈವಿಕ ದೃಶ್ಯಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಹದ್ದು ದೇವಾಲಯದ ಮೇಲೆ ಸುತ್ತುತ್ತಿರುವುದು ಕಂಡುಬಂದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಸಮಾರಂಭದಲ್ಲಿ ಹದ್ದಿನ ಉಪಸ್ಥಿತಿಯನ್ನು ದೈವಿಕ ಆಶೀರ್ವಾದದ ಸಂಕೇತವಾಗಿ ಮತ್ತು ಭಗವಾನ್ ರಾಮನ ಉಪಸ್ಥಿತಿಯ ಸಂಕೇತವಾಗಿ ನೋಡಲಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಹದ್ದುಗಳು ವಿಷ್ಣುವಿನ ವಾಹನಗಳು ಎಂದು ನಂಬಲಾಗಿದೆ. ಅದರಲ್ಲಿ ರಾಮನ ಅವತಾರವೆಂತಳು ಪರಿಗಣಿಸಲಾಗುತ್ತದೆ ಎನ್ನುವ ಉಲ್ಲೇಖಗಳು ಇವೆ.

ಹದ್ದಿನ ದರ್ಶನವು ರಾಮಲಲ್ಲಾ ಪ್ರತಿಷ್ಠಾಪನೆಗೆ ನಿಗೂಢ ಸ್ಪರ್ಶವನ್ನು ನೀಡಿದೆ ಮತ್ತು ಸಮಾರಂಭದಲ್ಲಿ ಹಾಜರಿದ್ದ ಭಕ್ತರಲ್ಲಿ ವಿಸ್ಮಯ ಮತ್ತು ಆಶ್ಚರ್ಯದ ಭಾವನೆಯನ್ನು ಸೃಷ್ಟಿಸಿದೆ. ವಾತಾವರಣವು ಭಕ್ತಿ ಮತ್ತು ಆಧ್ಯಾತ್ಮಿಕತೆಯ ಪ್ರಜ್ಞೆಯಿಂದ ತುಂಬಿರುವುದರಿಂದ ಇದು ಅದೃಷ್ಟದ ಸಂಕೇತ ಮತ್ತು ದೇವಾಲಯದ ಭವಿಷ್ಯಕ್ಕೆ ಸಕಾರಾತ್ಮಕ ಶಕುನ ಎಂದು ಅನೇಕರು ನಂಬುತ್ತಾರೆ.
What the devout will surely see as an auspicious affirmation, an eagle circled the skies over the Ram Mandir at the exact moment the Pran Pratishta was performed. Many would say Garuda’s blessings! pic.twitter.com/WLKHPfiq8Y
— Malini Parthasarathy (@MaliniP) January 22, 2024
ಮಾಲಿನಿ ಪಾರ್ಥಸಾರಥಿ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವೇಳೆ ಶಂಖದ ದೈವಿಕ ಶಬ್ದವು ಮೊಳಗಿದಾಗ ಹದ್ದು ದೇವಾಲಯದ ಸುತ್ತಲೂ ಸುತ್ತುತ್ತಿರುವುದನ್ನು ಕಂಡುಬಂದಿದೆ. ಅಲ್ಲದೆ ಇದೀಗ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications