ಗಾಯಗೊಂಡ ಹಿಂದೂ ನಾಗರಿಕತೆಗೆ ಹೊಸ ಹುರುಪು ತಂದ ರಾಮ ಮಂದಿರ- ಹೀಗೊಂದು ವಿಶ್ಲೇಷಣೆ

ರಾಮ ಪ್ರಾಣ ಪ್ರತಿಷ್ಠಾಪನೆಯನ್ನು ಕರ್ನಾಟಕದಾದ್ಯಂತ ಸಂಭ್ರಮಸಲಾಯಿತು. ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಹಿಂದೂ ಸಮಯದಾಯದ ಜನರು ತಮ್ಮ ಭಕ್ತಿಯನ್ನು ಮೆರೆದರು. ಸಿಹಿ ಹಾಗೂ ಪ್ರಸಾದ ಹಂಚುವ ಮೂಲಕ ಸಂತಸವನ್ನು ಹಂಚಿಕೊಂಡರು. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ಪಟಾಕಿ ಸಿಡಿಸಿ ರಾಮ ಪ್ರಾಣ ಪ್ರತಿಷ್ಠಾಪನೆಯನ್ನು ಅತ್ಯಂತ ವಿಂಜೃಂಭನೆಯಿಂದ ಆಚರಿಸಲಾಯಿತು.

ಕರ್ನಾಟಕದ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬೆಂಗಳೂರಿನ ಹಿರಂಡಹಳ್ಳಿಯಲ್ಲಿರುವ ರಾಮಮಂದಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ದೇಗುಲ ಉದ್ಘಾಟನೆಯ ಜೊತೆಗೆ 33 ಅಡಿ ಉದ್ದದ ಹನುಮಾನ್ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು.

Ram Mandir brought new zeal and vigor to a Wounded Civilization- What does this mean?

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರಾಮಭಕ್ತರು ಲಕ್ಷಾಂತರ ಲಡ್ಡುಗಳನ್ನು ವಿತರಿಸಿ ಸಂಭ್ರಮಿಸಿದರು. ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದಲ್ಲಿ 111 ಅಡಿ ಉದ್ದದ ಅಗರಬತ್ತಿಯನ್ನು ಬೆಳಗಿಸಿ ಪೂಜೆ ಸಲ್ಲಿಸಿರುವುದು ವಿಶೇಷವಾಗಿತ್ತು.

ಹನುಮಂತ ಜನಿಸಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ರಾಮನ ವಿಗ್ರಹವನ್ನು ಸ್ಥಾಪಿಸಲಾಯಿತು. ರಾಮನ ವಿಗ್ರಹವು ಒಂಬತ್ತು ಅಡಿ ಎತ್ತರವಿದ್ದು, 500 ಕೆಜಿ ತೂಕವಿದೆ. ಇದು ಐದು ಲೋಹಗಳ ಸಂಯೋಜನೆಯಿಂದ ತಯಾರಿಸಲ್ಪಟ್ಟಿದೆ. ಅಂಜನಾದ್ರಿ ಬೆಟ್ಟವು ಹನಮಂತನ ಜನ್ಮ ಸ್ಥಳವೆಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯಲ್ಲಿರುವ ಮಂತ್ರಾಲಯದಲ್ಲಿ 36 ಅಡಿಯ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಕಲಬುರಗಿ, ಗದಗ ಸೇರಿದಂತೆ ರಾಜ್ಯದಾದ್ಯಂತ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ವಿಜೃಂಭನೆಯಿಂದ ಆಚರಿಸಲಾಗಿದೆ.

Ram Mandir brought new zeal and vigor to a Wounded Civilization- What does this mean?

ಹಿಂದೂ ಜಾಗೃತಿಯ ಸಂಕೇತವೇ?

ಕರ್ನಾಟಕದಾದ್ಯಂತ ಆಚರಿಸಲಾದ ರಾಮ ಪ್ರಾಣ ಪ್ರತಿಷ್ಠಾಪನೆಯನ್ನು ಹಿಂದೂ ಜಾಗೃತಿಯೆಂದು ರಾಮಭಕ್ತರು ಬಣ್ಣಿಸಿದರು. ಹಲವಾರು ಶತಮಾನಗಳ ಕಾಲ ಮುಸ್ಲಿಮ್‌ ದೊರೆಗಳು ಹಾಗೂ ಬ್ರಿಟಿಷರಿಂದ ಗಾಯಗೊಂಡಿದ್ದ ಹಿಂದು ನಾಗರಿಕತೆ ಮತ್ತೆ ಮುನ್ನೆಲೆಗೆ ಬಂದಿದೆ ಎಂಬ ಭಾವವನ್ನು ಭಕ್ತರು ವ್ಯಕ್ತಪಡಿಸಿದರು. ಈ ನಾಗರಿಕತೆ ಮತ್ತೆ ಮುನ್ನೆಲೆಗೆ ಬಂದಿರುವುದು ಪ್ರಧಾನಿ ಮೋದಿ ಅವರ ಕಾರಣದಿಂದಾಗಿ ಎಂದು ಭಕ್ತರು ಹೇಳಿದರು.

ರಾಜಕೀಯ ನಾಯಕನಿಂದ ರಾಷ್ಟ್ರ ನಾಯಕನಾಗುವತ್ತ ಮೋದಿ

ರಾಮ ಮಂದಿರ ನಿರ್ಮಾಣದ ಮೂಲಕ ಪ್ರಧಾನಿ ಮೋದಿ ಅವರ ಜನಪ್ರಿಯತೆ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ. 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ ಹಿಂದುತ್ವದ ಪ್ರತಿಪಾದಕರಾಗಿ ಗುರುತಿಸಲ್ಪಟ್ಟಿದ್ದಾರೆ. ರಾಷ್ಟೀಯ ಸ್ವಯಂ ಸೇವಕ ಸಂಘದಿಂದ ಬಂದಿರುವ ಅವರು ಹಿಂದು ರಾಷ್ಟ್ರವಾದಿಯಾಗಿ ಪ್ರಸಿದ್ದಿಗೆ ಬಂದವರು. ರಾಮ ಜನ್ಮಭೂಮಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Ram Mandir brought new zeal and vigor to a Wounded Civilization- What does this mean?

ರಾಷ್ಟ್ರವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಮೋದಿ ರಾಜಕೀಯ ನಾಯಕನಾಗಿ ಭಾರೀ ಯಶಸ್ಸು ಕಂಡವರು. ಹಲವಾರು ವರ್ಷಗಳಿಂದ ವಿವಾದದ ಕೇಂದ್ರಬಿಂದುವಾಗಿದ್ದ ರಾಮ ಮಂದಿರವನ್ನು ಸ್ಥಾಪಿಸುವ ಮೂಲಕ ಮೋದಿ ಅವರ ಜನಪ್ರಿಯತೆ ರಾಜಕೀಯ ನಾಯಕನಿಂದ ರಾಷ್ಟ್ರೀಯ ನಾಯಕನಾಗಿ ಬದಲಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸುಬಹುದಾಗಿದೆ.

ಗಾಯಗೊಂಡ ನಾಗರಿಕತೆಗೆ ಹೊಸ ಹುರುಪು

ಗಾಯಗೊಂಡಿದ್ದ ನಾಗರಿಕತೆಯೊಂದು ಹೊಸ ಹುರುಪಿನೊಂದಿಗೆ ಮತ್ತೆ ವಿಜೃಂಭಿಸತೊಡಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಮಮಂದಿರ ಸ್ಥಾಪನೆಯ ಮೂಲಕ ಹಿಂದೂ ನಾಗರಿಕತೆಯು ವಿನೂತನ ಚೈತ್ಯನ್ಯದೊಂದಿಗೆ ಸಂಭೃಸಲ್ಪಡುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ, ರಾಮ ಮಂದಿರ ಸ್ಥಾಪನೆಯು ಬಹುತೇಕ ಹಿಂದೂಗಳಿಗೆ ಮರೆಯಲಾಗದ ಸ್ಮರಣೆಯಾಗಿ ಉಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+