ರಾಜ್ಯಸಭಾ ಚುನಾವಣೆ; ತೀವ್ರ ಪೈಪೋಟಿ ಇರುವ ಸ್ಥಾನಗಳು
ನವದೆಹಲಿ, ಜೂ 10 : ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಗೆ ಶುಕ್ರವಾರ ಮತದಾನ ನಡೆಯುತ್ತಿದೆ. ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷಗಳು ಶಾಸಕರ ಅಡ್ಡ ಮತದಾನದ ಭೀತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಠಿಣ ಸ್ಫರ್ಧೆ ಇದೆ.
ಹಲವು ರಾಜ್ಯಗಳಲ್ಲಿ ರೆಸಾರ್ಟ್ ರಾಜಕೀಯ, ಶಾಸಕರ ಹೋಟೆಲ್ ವಾಸ್ತವ್ಯಕ್ಕೆ ರಾಜ್ಯಸಭೆ ಚುನಾವಣೆ ಸಾಕ್ಷಿಯಾಗಿದೆ. ಪ್ರಬಲ ಪೈಪೋಟಿ ಎಲ್ಲಿ ನಡೆಯುತ್ತಿದೆ? ಎಂಬ ಮಾಹಿತಿ ಇಲ್ಲಿದೆ.

ಚುನಾವಣೆಯ 9 ಅಂಶಗಳು
1. ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳಲ್ಲಿ ಒಟ್ಟು 16 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
2. ದೇಶದ ಒಟ್ಟು 15ರಾಜ್ಯಗಳಲ್ಲಿ ಖಾಲಿಇರುವ 57 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದರಲ್ಲಿ 23 ಸ್ಥಾನಗಳನ್ನು ಆಡಳಿತ ಪಕ್ಷ ಬಿಜೆಪಿ ಹೊಂದಿದ್ದರೆ, ಎಂಟು ಸ್ಥಾನಗಳು ಕಾಂಗ್ರೆಸ್ ಪಾಲಿನವು.
3. ಬಿಜೆಪಿ ಪ್ರಾಬಲ್ಯವಿಲ್ಲದ ರಾಜಾಸ್ಥಾನ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಅಭ್ಯರ್ಥಿಗಳ ಮಧ್ಯೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ಈ ಚುಣಾವಣೆ ನಿರ್ಣಾಯಕವು ಆಗಿದೆ.
4. ಉತ್ತರ ಪ್ರದೇಶದಲ್ಲಿ 11ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಲ್ಲಿ ತಲಾ 6 ಸ್ಥಾನಕ್ಕೆ ಮತದಾನ ಜಾರಿಯಲ್ಲಿದೆ.
5. ಬಿಹಾರದಲ್ಲಿ 5, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ 4 ಸ್ಥಾನ, ಮಧ್ಯಪ್ರದೇಶ ಹಾಗೂ ಓಡಿಶಾದಲ್ಲಿಯೂ ಚುನಾವಣೆ ನಡೆಯುತ್ತಿದೆ.
6. ಪಂಜಾಬ್, ಜಾರ್ಖಂಡ್, ಹರ್ಯಾಣ, ಛತ್ತೀಸ್‌ಗಢ್ ಮತ್ತು ತೆಲಂಗಾಣಗಳಲ್ಲಿ ತಲಾ ಎರೆಡೆರಡು ಸ್ಥಾನಗಳು ಹಾಗೂ ಉತ್ತರಾಖಂಡದಲ್ಲಿ ಒಂದು ಸ್ಥಾನ ಖಾಲಿ ಇದೆ.
7. ಚುನಾವಣೆ ಕಣದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್‌ನ ರಣದೀಪ್ ಸುರ್ಜೆವಾಲಾ, ಜೈರಾಮ್ ರಮೇಶ್ ಮತ್ತು ಮುಕುಲ್ ವಾಸ್ನಿಕ್ ಹಾಗೂ ಶಿವಸೇನೆಯ ಸಂಜಯ್ ರೌವತ್ ಪ್ರಮುಖರು.
8. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್, ಶಿವಸೇನೆ ಮತ್ತು ಶರದ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿ ಮೈತ್ರಿಕೂಟವಕ್ಕೆ ಹಿನ್ನಡೆಯಾಗಿದೆ. ವಿವಿಧ ಪ್ರಕರಣಗಳಲ್ಲಿ ಬಂಧಿತರಾದ ಶಾಸಕರಿಗೆ ಮತದಾನ ಮಾಡಲು ಅವಕಾಶ ಸಿಕ್ಕಿಲ್ಲ.
9. ಆಡಳಿತ ಪಕ್ಷ ಬಿಜೆಪಿಯು 1990ರಿಂದಲೂ ನಿರಂತರವಾಗಿ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ 100 ಸ್ಥಾನ ದಾಟುವಲ್ಲಿ ಯಶಸ್ವಿಯಾಗುತ್ತಾ ಬಂದಿದೆ. ಈ ವಿಚಾರದಲ್ಲಿ ಬಿಜೆಪಿ ನಿರಂತರ ಸಾಧನೆ ಮಾಡಿದೆ. ಮುಂಬರಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳಲು ಈ ಚುನಾವಣೆ ಮುಖ್ಯ ಪಾತ್ರ ನಿರ್ವಹಿಸಲಿದೆ.












Click it and Unblock the Notifications