ನನ್ನ ಮಗ ಭ್ರಷ್ಟನಲ್ಲ, ರಾಜೀನಾಮೆ ನೀಡಲು ಸಿದ್ಧ: ರಾಜನಾಥ್

ನವದೆಹಲಿ, ಆ.28: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಪುತ್ರ ಪಂಕಜ್ ಸಿಂಗ್ ವಿರುದ್ಧ ಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ಅಲ್ಲಗೆಳೆದಿದ್ದು, ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸಿ ಮನೆಯಲ್ಲಿ ಕೂರುತ್ತೇನೆ ಎಂದಿದ್ದಾರೆ.

ಪಂಕಜ್ ಸಿಂಗ್ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದ್ದು, ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಹೇಳುವಷ್ಟು ರಾಜನಾಥ್ ಮನಸ್ಸಿಗೆ ನೋವು ಮಾಡಿರುವ ಈ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ಎನ್ನುವುದೂ ಬಹಿರಂಗವಾಗಲಿ ಎಂದಿದೆ. ಈ ಮೂಲಕ ಬಿಜೆಪಿಯಲ್ಲೇ ಆಂತರಿಕ ಕಚ್ಚಾಟ ನಡೆದಿದ್ದು ಇದರ ಫಲವಾಗಿ ಪಂಕಜ್ ಸಿಂಗ್ ಲಂಚಾವತಾರ ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್ ಪಕ್ಷ ತಿವಿದಿದೆ.

ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಕಳೆದೆರಡು ವಾರಗಳಿಂದ ಹರಿದಾಡುತ್ತಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರನ ಲಂಚಾವತಾರ ವರ್ತನೆಗೆ ಸಂಬಂಧಿಸಿದ ಕಥೆ ಈಗ ಹೊಸ ತಿರುವು ಪಡೆದುಕೊಂಡಿದೆ. [ಗೃಹ ಖಾತೆ ಕಡತಗಳು ಬಿಚ್ಚಿಟ್ಟ ಇತಿಹಾಸ ತುಣುಕುಗಳು]

ಪಂಕಜ್ ಸಿಂಗ್ ವಿರುದ್ಧದ ವದಂತಿಗಳಿಗೆ ಪಕ್ಷದೊಳಗಿನ ಬಿಜೆಪಿಯೊಳಗಿನ ಅಧಿಕಾರ ಮೇಲಾಟವೇ ಕಾರಣ ಎನ್ನಲಾಗುತ್ತಿದೆ. ಮೋದಿ ಸಂಪುಟದಲ್ಲಿ ನಂ.2 ನಂತಿರುವ ರಾಜನಾಥ್ ವರ್ಚಸ್ಸಿಗೆ ಧಕ್ಕೆ ತರಲೆಂದೇ ಸಹೋದ್ಯೋಗಿಯೊಬ್ಬರು ಇಂಥ ವದಂತಿ ಹರಡುತ್ತಿದ್ದಾರೆ. ಆ ಸಚಿವರ ವಿರುದ್ಧ ಸ್ವತಃ ರಾಜನಾಥ್ ಸಿಂಗ್ ವರಿಷ್ಠರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜನಾಥ್ ಸಿಂಗ್ ಅವರಿಗೆ ಪ್ರಧಾನಿ ಸಚಿವಾಲಯ ಹಾಗೂ ಬಿಜೆಪಿ ಸಚಿವರುಗಳು ಸಾಥ್ ನೀಡಿದ್ದು, ರಾಜನಾಥ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಈ ವರದಿಗಳಿಗೆ ಸಂಬಂಧಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಆರೋಪಗಳಿಂದ ವೈಯಕ್ತಿಕವಾಗಿ ನೋವಾಗಿದೆ ಎಂದು ತಿಳಿಸಿದ್ದಾರೆ.

ಪಂಕಜ್ ಸಿಂಗ್ ಅಭ್ಯರ್ಥಿಯೊಬ್ಬರಿಂದ ಲಂಚ ಪಡೆದಿದ್ದರು

ಪಂಕಜ್ ಸಿಂಗ್ ಅಭ್ಯರ್ಥಿಯೊಬ್ಬರಿಂದ ಲಂಚ ಪಡೆದಿದ್ದರು

ಏನಿದುಪ್ರಕರಣ: ಪೊಲೀಸ್ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪಂಕಜ್ ಸಿಂಗ್ ಅಭ್ಯರ್ಥಿಯೊಬ್ಬರಿಂದ ಲಂಚ ಪಡೆದಿದ್ದರು. ಇದು ಬಿಜೆಪಿ ಹಿರಿಯ ನಾಯಕರಿಗೆ ತಿಳಿದಿದ್ದರಿಂದ ಅವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು ಎಂಬ ಸುದ್ದಿ ಹಬ್ಬಿದೆ.

ಉತ್ತರ ಪ್ರದೇಶದ ನೋಯ್ಡಾದಿಂದ ಪಂಕಜ್ ಸಿಂಗ್ ಸ್ಪರ್ಧಿಸಬಯಸಿದ್ದರು. ಲಂಚ ಸ್ವೀಕರಿಸಿದ ಆರೋಪ ಕೇಳಿ ಬಂದ ಮೇಲೆ ಪಂಕಜ್ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ನರೇಂದ್ರ ಮೋದಿ ಅವರು ಕಚೇರಿಗೆ ಕರೆಸಿಕೊಂಡು ಪಂಕಜ್ ಗೆ ಬುದ್ಧಿ ಹೇಳಿ ಹಣ ಹಿಂತಿರುಗಿಸುವಂತೆ ಸೂಚಿಸಿದ್ದರು. ಇದರಿಂದ ರಾಜನಾಥ್ ಸಿಂಗ್ ಕೂಡಾ ಭಾರಿ ಮುಜುಗರ ಅನುಭವಿಸಿದ್ದರು ಎನ್ನಲಾಗಿದೆ.

ಮೋದಿ ಕಚೇರಿಗೆ ಪಂಕಜ್ ಬಂದಿದ್ದೇ ಸುಳ್ಳಾ?

ಮೋದಿ ಕಚೇರಿಗೆ ಪಂಕಜ್ ಬಂದಿದ್ದೇ ಸುಳ್ಳಾ?

ಲಂಚ ಸ್ವೀಕರಿಸಿದ ಆರೋಪ ಕೇಳಿ ಬಂದ ಮೇಲೆ ಪಂಕಜ್ ಹಾಗೂ ಗೃಹ ಸಚಿವ ರಾಜನಾಥ್ ರನ್ನು ನರೇಂದ್ರ ಮೋದಿ ಅವರು ಕಚೇರಿಗೆ ಕರೆಸಿಕೊಂಡು ಪಂಕಜ್ ಗೆ ಬುದ್ಧಿ ಹೇಳಿ ಹಣ ಹಿಂತಿರುಗಿಸುವಂತೆ ಸೂಚಿಸಿದ್ದರು. ಇದರಿಂದ ರಾಜನಾಥ್ ಸಿಂಗ್ ಕೂಡಾ ಭಾರಿ ಮುಜುಗರ ಅನುಭವಿಸಿದ್ದರು ಎಂಬ ಸುದ್ದಿಯೇ ಸುಳ್ಳು, PMO ಬಗ್ಗೆ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.

PMO ಬಗ್ಗೆ ಸ್ಪಷ್ಟನೆ ನೀಡಿಲ್ಲ

ಲಂಚ ಸ್ವೀಕರಿಸಿದ ಆರೋಪ ಕೇಳಿ ಬಂದ ಮೇಲೆ ಪಂಕಜ್ ಹಾಗೂ ಗೃಹ ಸಚಿವ ರಾಜನಾಥ್ ರನ್ನು ನರೇಂದ್ರ ಮೋದಿ ಅವರು ಕಚೇರಿಗೆ ಕರೆಸಿಕೊಂಡರು ಎಂಬ ಸುದ್ದಿಯೇ ಸುಳ್ಳು, PMO ಬಗ್ಗೆ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.

ರಾಜನಾಥ್ ಸಿಂಗ್ ಮಗನ ಪ್ರಕರಣದ ಬಗ್ಗೆ ಟ್ವೀಟ್

ರಾಜನಾಥ್ ಸಿಂಗ್ ಮಗನ ಪ್ರಕರಣದ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಖಾನ್. ಮೋದಿ ಪ್ರಧಾನಿಯಾಗುತ್ತಿದ್ದಂತೆ ದೇಶ ಬಿಟ್ಟು ಮಾತು ಉಳಿಸಿಕೊಂಡ ಗಾಯಕ.

ಆ ಶಕುನಿಯನ್ನು ಹೊರಹಾಕಿ

ಸುಳ್ಳು ಸುದ್ದಿ ಹಬ್ಬಿಸಿರುವ ಆ ಶಕುನಿಯನ್ನು ಹೊರಹಾಕಿ, ಮೋದಿ ನಿಮ್ಮ ಜತೆ ನಾವಿದ್ದೇವೆ ಎಂದು ಟ್ವೀಟ್

ರಾಜನಾಥ್ ಸಿಂಗ್ ಮಗನ ಪ್ರಕರಣದ ಬಗ್ಗೆ PMO

ರಾಜನಾಥ್ ಸಿಂಗ್ ಮಗನ ಪ್ರಕರಣದ ಬಗ್ಗೆ ಪ್ರಧಾನಿ ಸಚಿವಾಲಯ ಟ್ವೀಟ್ ಮಾಡಿ ನೀಡಿರುವ ಸ್ಪಷ್ಟನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+