• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೈಡನ್ ಸರ್ಕಾರದೊಂದಿಗೆ ಭಾರತದ ಮೊದಲ ಮಾತುಕತೆ: ಅಧಿಕಾರಿಗಳ ಜತೆ ದೋವಲ್, ರಾಜನಾಥ್ ಚರ್ಚೆ

|

ನವದೆಹಲಿ, ಜನವರಿ 28: ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಬಳಿಕ ಭಾರತ-ಅಮೆರಿಕ ನಡುವಣ ರಕ್ಷಣಾ ಮಾತುಕತೆ ಮತ್ತೆ ಆರಂಭವಾಗಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ದೂರವಾಣಿ ಮಾತುಕತೆ ನಡೆಸಿದರು.

ಇನ್ನೊಂದೆಡೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಜನರಲ್ (ನಿವೃತ್ತ) ಲಾಯ್ಡ್ ಆಸ್ಟಿನ್ ಅವರಿಂದ ಪರಿಚಯಾತ್ಮಕ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದರು. ಈ ದೂರವಾಣಿ ಸಂಭಾಷಣೆಗಳು ಜೋ ಬೈಡನ್ ಆಡಳಿತದೊಂದಿಗೆ ಭಾರತ ಸರ್ಕಾರದ ಮೊದಲ ಉನ್ನತ ಮಟ್ಟದ ಮಾತುಕತೆಗಳಾಗಿವೆ.

ವೈಟ್‌ಹೌಸ್ ಕಚೇರಿ ಡಿಸೈನ್ ಚೇಂಜ್ ಮಾಡಿಸಿದ ಜೋ ಬೈಡನ್..!ವೈಟ್‌ಹೌಸ್ ಕಚೇರಿ ಡಿಸೈನ್ ಚೇಂಜ್ ಮಾಡಿಸಿದ ಜೋ ಬೈಡನ್..!

ನೂತನ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರಿಗೆ ರಾಜನಾಥ್ ಸಿಂಗ್ ಅಭಿನಂದನೆ ತಿಳಿಸಿದರು. 'ಭಾರತ-ಅಮೆರಿಕ ರಕ್ಷಣಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ನಮ್ಮ ದೃಢ ಬದ್ಧತೆಯನ್ನು ಪುನರುಚ್ಚರಿಸಿದೆವು. ನಮ್ಮ ಕಾರ್ಯತಂತ್ರ ಸಹಭಾಗಿತ್ವವನ್ನು ಬಲಪಡಿಸಲು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡೆವು' ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಸಚಿವರ ಮಟ್ಟದ ಮಾತುಕತೆಯಲ್ಲಿ ಚೀನಾ ಕುರಿತು ಸಹ ಚರ್ಚೆ ನಡೆಯಿತು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಕಾರ್ಯತಂತ್ರ ಹಿತಾಸಕ್ತಿಗಳ ಸಂಬಂಧ ಮತ್ತು ಭೂ-ರಾಜಕೀಯ ಬೆಳವಣಿಗೆಗಳ ಕುರಿತು ವಿಸ್ತೃತ ಮಾತುಕತೆ ನಡೆಯಿತು ಎಂದು ವರದಿಯಾಗಿದೆ.

ಕೋವಿಡ್ ಪ್ರಯಾಣ ನಿರ್ಬಂಧ ಮತ್ತೆ ಜಾರಿಗೊಳಿಸಿದ ಜೋ ಬೈಡನ್ಕೋವಿಡ್ ಪ್ರಯಾಣ ನಿರ್ಬಂಧ ಮತ್ತೆ ಜಾರಿಗೊಳಿಸಿದ ಜೋ ಬೈಡನ್

ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವುದು ಕಡಲು ಭದ್ರತೆ, ಸೈಬರ್ ಭದ್ರತೆ, ಇಂಡೋ-ಪೆಸಿಫಿಕ್ ಪ್ರದೇಶ ಹಾಗೂ ಅದರಾಚೆಗೆ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರಗಳಲ್ಲಿ ಭಾರತ-ಅಮೆರಿಕಗಳು ಜತೆಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಎನ್‌ಎಸ್‌ಎ ಅಜಿತ್ ದೋವಲ್ ಅವರು ಜೇಕ್ ಸುಲ್ಲಿವನ್ ಜತೆ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

English summary
Defence Minister Rajnath Singh and US Secretary of Defence Lloyd Austin, NSA Ajit Doval and US NSA Jake Sullivan talks held for first time with Joe Biden administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X