ಯಾವ ಪ್ರಶ್ನೆಗೂ ಈಗ ಉತ್ತರಿಸಲಾರೆ: ರಜನಿಕಾಂತ್
ಹೃಷಿಕೇಶ, ಮಾರ್ಚ್ 14: ಪ್ರತಿ ವರ್ಷ ಅಧಾತ್ಮ ಪ್ರವಾಸ ಕೈಗೊಳ್ಳುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಈ ವರ್ಷವೂ ಉತ್ತರ ಭಾರತದ ಕೆಲವೆಡೆ ಪ್ರವಾಸ ಆರಂಭಿಸಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಂದು(ಮಾ.14) ಉತ್ತರಾಖಂಡದ ಸ್ವಾಮಿ ದಯಾನಂದ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ ರಜನಿಕಾಂತ್, ಅವರಿಗಾಗಿ ಹೊರಗೆ ಕಾದು ನಿಂತಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ತಾವು ಅಧ್ಯಾತ್ಮ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಜಕೀಯ ಪಕ್ಷ ಕಟ್ಟುವ ಕುರಿತು ಯಾವುದೇ ಪ್ರಶ್ನೆಗಳಿಗೆ ನಾನು ಉತ್ತರಿಸಲು ಇಷ್ಟಪಡುವುದಿಲ್ಲ. ನಾನು ಹಿಮಾಲಯ ಪ್ರವಾಸಕ್ಕೆ ಹೊರಟಿದ್ದೇನೆ. ದಯವಿಟ್ಟು ಯಾವುದೇ ಪ್ರಶ್ನೆ ಕೇಳಬೇಡಿ ಎಂದು ಮನವಿ ಮಾಡಿದರು.












Click it and Unblock the Notifications