ಏಕಾಂತದಲ್ಲಿರುವಾಗ ದಂಪತಿ ಮೇಲೆ ಫೆವಿಕ್ವಿಕ್ ಸುರಿದು ಕೊಂದ ಮಾಂತ್ರಿಕ
ಉದಯ್‌ಪುರ, ನವೆಂಬರ್ 23: ರಾಜಸ್ಥಾನದ ಉದಯ್‌ಪುರದ ಕೆಲಬಾವಾಡಿಯ ಅರಣ್ಯ ಪ್ರದೇಶದಲ್ಲಿ ದಂಪತಿಯನ್ನು ಮಾಂತ್ರಿಕನೊಬ್ಬ ಕೊಂದಿರುವುದು ಬೆಳಕಿಗೆ ಬಂದಿದೆ. ನವೆಂಬರ್ 18ರಂದು ಅರಣ್ಯದಲ್ಲಿ ಬೆತ್ತಲೆ ಶವಗಳು ಪತ್ತೆಯಾಗಿದ್ದವು. ಶವ ಪತ್ತೆಯಾಗಿ ಮೂರು ದಿನಗಳ ಬಳಿಕ 55 ವರ್ಷದ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಶವ ಪತ್ತೆಯಾದ ದಿನ ದಂಪತಿಯ ಜಾತಿಯನ್ನು ಗಮನಿಸಿ ಇದು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಪೊಲೀಸರು ಮಾಂತ್ರಿಕರನ್ನು ಬಂಧಿಸಿದ ನಂತರ ಪ್ರಕರಣದ ವಿವರಗಳು ತಿಳಿದುಬಂದಿದೆ. ಆತ ದಂಪತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯಾದವರನ್ನು ದಂಪತಿ ಎಂದು ಹೇಳಲಾಗಿತ್ತು. ಆದರೆ, ಬಲಿಪಶುಗಳಿಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದರು. ಇಬ್ಬರಿಬ್ಬರಿಗೂ ಪ್ರತ್ಯೇಕ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.
ಮೃತರನ್ನು 30 ವರ್ಷದ ಶಿಕ್ಷಕ ರಾಹುಲ್ ಮೀನಾ ಮತ್ತು 28 ವರ್ಷದ ಸೋನು ಕುವರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ರಾಹುಲ್ ಮತ್ತು ಸೋನು ಇಬ್ಬರೂ ಅನೈತಿಕ ಸಂಬಂಧ ಹೊಂದುವ ಮುನ್ನ ಬೇರೆಯವರನ್ನು ಮದುವೆಯಾಗಿದ್ದಾರೆ. ಇವರಿಬ್ಬರು ಶೇಷನಾಗ್ ಭಾವಜಿ ಮಂದಿರದಲ್ಲಿ ತಾಂತ್ರಿಕರನ್ನು ಭೇಟಿ ಮಾಡುತ್ತಿದ್ದರು. ಈ ವೇಳೆ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು.

ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ಬಾಯಿಬಿಟ್ಟ ಮಾಂತ್ರಿಕ
ಯಾವಾಗ ರಾಹುಲ್ ಸೋನು ಜೊತೆ ಸಂಬಂಧ ಬೆಳಸಿದನೋ ಆಗ ತನ್ನ ಸ್ವಂತ ಹೆಂಡತಿಯೊಂದಿಗೆ ಆಗಾಗ್ಗೆ ಜಗಳವಾಡಲು ಪ್ರಾರಂಭಿಸಿದ್ದ. ಆಗ ಆತನ ಪತ್ನಿ ಭಾಲೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಸಹಾಯ ಕೋರಿದ್ದಾರೆ. ಈ ವೇಳೆ ಭಾಲೇಶ್ ಕುಮಾರ್ ರಾಹುಲ್ ಮತ್ತು ಸೋನು ಸಂಬಂಧವನ್ನು ಬಿಚ್ಚಿಟ್ಟಿದ್ದಾನೆ. ತಕ್ಷಣ ತಂತ್ರಿ ತನ್ನ ಮತ್ತು ಸೋನು ಸಂಬಂಧದ ಬಗ್ಗೆ ತನ್ನ ಹೆಂಡತಿಗೆ ಹೇಳಿದ್ದಾನೆ ಎಂದು ರಾಹುಲ್‌ಗೆ ಗೊತ್ತಾಗಿದೆ. ಬಳಿಕ ಸುಳ್ಳು ಕಿರುಕುಳ ಪ್ರಕರಣ ದಾಖಲಿಸಿ ಮಾನಹಾನಿ ಮಾಡುತ್ತಿರುವುದಾಗಿ ರಾಹುಲ್ ಹಾಗೂ ಸೋನು ಇಬ್ಬರು ತಂತ್ರಿಗೆ ಬೆದರಿಕೆ ಹಾಕಿದ್ದಾರೆ.
ಭಾಲೇಶ್ ಕಳೆದ ಏಳೆಂಟು ವರ್ಷಗಳಿಂದ ಇಲ್ಲಿ ವಾಸವಾಗಿದ್ದು ಜನರಿಗೆ ತಾಯಿತ ತಯಾರಿಸುತ್ತಿದ್ದರು. ಹಲವು ವರ್ಷಗಳಿಂದ ತನಗಾಗಿ ಕಟ್ಟಿಕೊಂಡಿದ್ದ ಕೀರ್ತಿಯನ್ನು ಕಳೆದುಕೊಳ್ಳಬಹುದೆಂಬ ಭಯದಿಂದ ತಂತ್ರಿಯು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ಹೂಡಿದನು.

ಏಕಾಂತದಲ್ಲಿದ್ದ ದಂಪತಿಯನ್ನು ಕೊಲೆ
ತಾಂತ್ರಿಕರು ಸುಮಾರು 50 ಟ್ಯೂಬ್‌ಗಳ ಸೂಪರ್‌ಗ್ಲೂ ಖರೀದಿಸಿ ಬಾಟಲಿಗೆ ಸುರಿದನು. ರಾಹುಲ್ ಹಾಗೂ ಸೋನುಗೆ ಮಂಕುಬುದ್ಧಿ ಎರಚಿ ನಂಬಿಸಿ ಕಾಡಿಗೆ ಕರೆದುಕೊಂಡನು. ನವೆಂಬರ್ 15ರ ಸಂಜೆ ಅವರು ರಾಹುಲ್ ಮತ್ತು ಸೋನು ಅವರನ್ನು ಕಾಡಿನಲ್ಲಿ ಏಕಾಂತ ಪ್ರದೇಶಕ್ಕೆ ಕರೆದು ತನ್ನ ಮುಂದೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿದನು. ಇದರಿಂದ ತಮ್ಮ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಿಸಿದ್ದಾನೆ.
ಪೊಲೀಸರ ಪ್ರಕಾರ, ಇಬ್ಬರು ಏಕಾಂತದಲ್ಲಿದ್ದಾಗ ತಾಂತ್ರಿಕ, ಫೆವಿಕ್ವಿಕ್ ಬಾಟಲಿಯನ್ನು ಅವರ ಮೇಲೆ ಸುರಿದಿದ್ದಾನೆ. ಇಬ್ಬರನ್ನೂ ಕೊಲ್ಲುವುದು ಮಾಂತ್ರಿಕನ ಉದ್ದೇಶವಾಗಿತ್ತು. ಮಾಂತ್ರಿಕ ಅವರ ಮೇಲೆ ಫೆವಿಕ್ವಿಕ್ ಸುರಿದ ನಂತರ, ರಾಹುಲ್ ಮತ್ತು ಸೋನು ಸ್ವಲ್ಪ ಸಮಯದವರೆಗೆ ಪರಸ್ಪರ ಅಂಟಿಕೊಂಡಿದ್ದರು. ಅವರಿಬ್ಬರು ತಪ್ಪಿಸಿಕೊಂಡು ಓಡಲು ಸಾಧ್ಯವಾಗದಿರಲು ಮಾಂತ್ರಿಕ ಈ ಪ್ಲ್ಯಾನ್ ಮಾಡಿದ್ದ. ವಾಸ್ತವವಾಗಿ, ಒಬ್ಬರನ್ನೊಬ್ಬರು ಎಳೆಯುವ ಪ್ರಯತ್ನದಲ್ಲಿ ಅವರ ಚರ್ಮವು ಕಿತ್ತುಹೋಗಲು ಪ್ರಾರಂಭಿಸಿತು ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆ ಬಳಿಕ ಮಾಟಗಾರ ಪರಾರಿ
ಈ ವೇಳೆ ರಾಹುಲ್ ಮತ್ತು ಸೋನು ಇಬ್ಬರ ಮೇಲೂ ಮಾಂತ್ರಿಕ ಹಲ್ಲೆ ನಡೆಸಿದ್ದಾನೆ. ರಾಹುಲ್‌ನ ಕತ್ತು ಸೀಳಿ ಸೋನುವನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಶವಗಳನ್ನು ಪತ್ತೆ ಮಾಡಿದ ನಂತರ, ಅವರು ಪ್ರದೇಶದ ಸುತ್ತಮುತ್ತಲಿನ 50 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಿದರು. ಸುಮಾರು 200 ಜನರನ್ನು ವಿಚಾರಣೆ ಮಾಡಿದರು.

ಮೂರು ದಿನಗಳ ಕಾಲ ಮಾಂತ್ರಿಕ ಪೊಲೀಸ್ ಕಸ್ಟಡಿಗೆ
ತನಿಖೆಯ ವೇಳೆ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ, ದಂಪತಿಯ ಸಾವಿನಲ್ಲಿ ಭಾಲೇಶ್ ಕುಮಾರ್ ಅವರ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಆತ ಒಪ್ಪಿಕೊಂಡಿದ್ದಾನೆ.
ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮಹಿಳೆಯೊಂದಿಗೆ ಭಾಲೇಶ್ ಕುಮಾರ್ ಫೋನ್‌ನಲ್ಲಿ ಮಾತನಾಡಿರುವ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದ್ದು, ಈ ಸಂಬಂಧ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರಕರಣದಲ್ಲಿ ತ್ರಿಕೋನದಲ್ಲೂ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಿಕಾಸ್ ಕುಮಾರ್ ಹೇಳಿದರು.












Click it and Unblock the Notifications