ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್ ಕಾರು ಅಪಘಾತ

ಚಿತ್ತೋರಗಢ, ಫೆಬ್ರವರಿ 07: ರಾಜಸ್ಥಾನದ ಬರಾನ್ ನಿಂದ ಗುಜರಾತಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅವರ ಕಾರು ಅಪಘಾತಕ್ಕೀಡಾದ ಘಟನೆ ಇಂದು(ಫೆ.7) ನಡೆದಿದೆ.

ಅಪಘಾತದಿಂದ ಜಶೋದಾಬೆನ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಇಲ್ಲಿನ ಚಿತ್ತೋರಗಢ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಜಶೋದಾಬೆನ್ ಅವರೊಂದಿಗಿದ್ದ ಸಂಬಂಧಿ ವಸಂತ್ ಬೆನ್ ಎಂಬುವವರು ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ. . ಸದ್ಯಕ್ಕೆ ಜಶೋದಾಬೆನ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬರಾನ್ ಜಿಲ್ಲೆಯ ಕೊಟಾ ಎಂಬಲ್ಲಿಗೆ ಸಂಬಂಧಿಗಳನ್ನು ಭೇಟಿ ಮಾಡಲು ತೆರಳಿದ್ದ ಜಶೋದಾಬೆನ್ ಗುಜರಾತಿಗೆ ಮರಳುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಅವರು ಪ್ರಯಾಣಿಸುತ್ತಿದ್ದ ಇನ್ನೊವಾ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದ್ದು, ಕಾರಿನಲ್ಲಿ ಒಟ್ಟು ಏಳು ಜನರಿದ್ದರು ಎಂದು ತಿಳಿದುಬಂದಿದೆ.

ಜಶೋದಾಬೆನ್ ಅವರು ತಮ್ಮ ಸಹೋದರ ಅಶೋಕ್ ಮೋದಿ ಅವರೊಂದಿಗೆ ವಾಸಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+