ಪ್ರಾಣಿಗಳ ಬದಲು ಮನುಷ್ಯರ ಮೇಲೆಯೇ ಔಷಧ ಪ್ರಯೋಗಿಸಿದ ಕಂಪೆನಿ

ಬಿದಾಸರ್ (ರಾಜಸ್ಥಾನ): ವಿದೇಶಿ ಮೂಲದ ಔಷಧ ಕಂಪೆನಿಯೊಂದು ತನ್ನ ಔಷಧಗಳನ್ನು ಪ್ರಾಣಿಗಳ ಮಲೆ ಪ್ರಯೋಗಿಸುವ ಬದಲು ಮನುಷ್ಯರ ಮೇಲೆಯೇ ಪ್ರಯೋಗಿಸಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿರುವ ಸುಮಾರು 16 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

ಕಂಪೆನಿಯೊಂದ ಬಡ ಕಾರ್ಮಿಕರಿಗೆ ದಿನಕ್ಕೆ 500 ರೂಪಾಯಿ ಆಮಿಷವೊಡ್ಡಿ ಅವರ ಮೇಲೆ ಔಷಧ ಪ್ರಯೋಗ ಮಾಡಿದೆ. ಎರಡು ಮೂರು ದಿನ ಔಷಧ ಪಡೆದ ಕಾರ್ಮಿಕರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಚುರು ಜಿಲ್ಲೆಯ ಜಲ್ಪಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಪ್ರಿಲ್ 18ರಂದು ಬಂದ ಕಂಪೆನಿಯವರು ನಮಗೆ ಹಣ ನೀಡುವುದಾಗಿ ಹೇಳಿದವರು. ಅದಕ್ಕೆ ನಾವು ಒಪ್ಪಿಕೊಂಡೆವು. ಔಷಧ ಪಡೆದುಕೊಂಡ ಬಳಿಕ ನಮಗೆ ನಿದ್ದೆಬಂದ ಹಾಗೆ ಆಗುತ್ತಿತ್ತು. ಔಷಧ ಪಡೆದುಕೊಂಡ 21 ಮಂದಿ ಪೈಕಿ 16 ಜನರು ಅಸ್ವಸ್ಥರಾಗಿದ್ದಾರೆ ಎಂದು ಕಾರ್ಮಿಕರು ತಿಳಿಸಿದರು.

Rajasthan: Medicines tested on humans instead of animal

ಈ ಬಗ್ಗೆ ಪ್ರತಿಕ್ರಿಯಸಿರುವ ರಾಜಸ್ಥಾನ ಆರೋಗ್ಯ ಸಚಿವ ಕಾಳಿ ಚರಣ್ ಸರಫ್, ಪ್ರಕರಣದ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+