Rajasthan result 2023: ಮತ್ತೆ ಸಿಎಂ ಆಗುತ್ತಾರಾ ವಸುಂಧರಾ ರಾಜೇ?
ಜೈಪುರ, ಡಿಸೆಂಬರ್ 3: ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವ ಲಕ್ಷಣಗಳು ಬರುವ ಸಾಧ್ಯತೆ ಇದ್ದು, ಸರ್ಕಾರ ರಚನೆಯ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಬಹುಮತ ಬಂದರೆ ಮತ್ತೆ ವಸುಂಧರಾ ರಾಜೇ ಅವರು ಸಿಎಂ ಆಗುತ್ತಾರಾ ಎಂದು ಪ್ರಶ್ನೆ ಎದ್ದಿದೆ.
ಚುನಾವಣಾ ಫಲಿತಾಂಶಕ್ಕೂ ಮುನ್ನ 70 ವರ್ಷ ವಯಸ್ಸಿನ ಎರಡು ಬಾರಿ ಸಿಎಂ ವಸುಂಧರಾ ರಾಜೇ ಕೆಲವು ದಿನಗಳಲ್ಲಿ ದೌಸಾದ ಮೆಹಂದಿಪುರ ಬಾಲಾಜಿ ದೇವಸ್ಥಾನ ಮತ್ತು ಜೈಪುರದ ಮೋತಿ ದೂಂಗಾರಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು. ರಾಜಸ್ಥಾನ ಚುನಾವಣೆಯ ಪ್ರಚಾರದ ಸಮಯದಲ್ಲಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಲಿಲ್ಲ. ರಾಜ್ಯದಲ್ಲಿ ವಸುಂಧರಾ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಬಿಡಲಿಲ್ಲ.

ಈ ನಿಟ್ಟಿನಲ್ಲಿ ಮತ್ತೆ ಅವರಿಗೆ ಮುಖ್ಯಮಂತ್ರಿ ಮಾಡಲಾಗುತ್ತದೆಯೇ ಎಂದು ಅನುಮಾನಗಳು ಬರುತ್ತಿವೆ. ಕಳೆದ ಕೆಲವು ವರ್ಷಗಳಿಂದ ರಾಜಸ್ಥಾನದ ಬಿಜೆಪಿಯಲ್ಲಿ ರಾಜೇ ಅವರ ಪ್ರಾಬಲ್ಯವು ಕೆಲವರಿಗೆ ಸಹಿಸಲಾಗುತ್ತಿಲ್ಲ. ಪಕ್ಷದೊಳಗೆ ಅವರ ಹಲವಾರು ಪ್ರತಿಸ್ಪರ್ಧಿಗಳು ರಾಜ್ಯದಲ್ಲಿ ಪಕ್ಷದ ಮುಖವಾಗಿ ಹೊರಹೊಮ್ಮಲು ನೋಡುತ್ತಿದ್ದಾರೆ.
ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ರಾಜೇ ಅವರು ಸಿಎಂ ರೇಸಿನಲ್ಲಿ ಸದ್ಯ ಉಳಿಯುತ್ತಾರೆ ಎಂಬ ಸಂಕೇತಗಳನ್ನು ವಾಡಿಕೆಯಂತೆ ಕೇಳಿಬರುತ್ತಿವೆ. ಆದರೆ ರಾಜೇ ಅವರು ಮಾತ್ರ ಮೂರನೇ ಬಾರಿಗೆ ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಇತರ ಪಕ್ಷದ ಆಕಾಂಕ್ಷಿಗಳನ್ನು ಮುಖ್ಯಮಂತ್ರಿ ಕುರ್ಚಿಯ ರೇಸ್‌ನಲ್ಲಿರುವುದರಿಂದ ಈಗ ಅವರಿಗೆ ಬಹುದೊಡ್ಡ ಸವಾಲು ಎದುರಾಗಿದೆ.
ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಿದಂತೆ ಅಲ್ಲೂ ಅದೇ ಪ್ರಯೋಗ ಮಾಡಲಾಗಿತ್ತು. ಪ್ರಸಕ್ತ ಚುನಾವಣೆಯಲ್ಲಿ ಆರಂಭದಲ್ಲಿ ಹಲವು ಸಂಸದರನ್ನು ಕಣಕ್ಕಿಳಿಸಿದ ಬಿಜೆಪಿ ಹಲವು ಕ್ಷೇತ್ರಗಳಿಂದ ರಾಜೇ ನಿಷ್ಠಾವಂತರನ್ನು ಕಣಕ್ಕಿಳಿಸುವ ಮೂಲಕ ಮತ್ತೆ ಅವರ ಬಳಿಗೆ ಹೋಯಿತು. ಈಗ ಅವರ ಕೆಲವು ನಿಷ್ಠಾವಂತರು ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿಯೂ ಸ್ಪರ್ಧಿಸುತ್ತಿದ್ದಾರೆ. ಒಂದು ವೇಳೆ ಅವರೂ ಗೆದ್ದರೇ ಸಿಎಂ ಸ್ಥಾನದ ಅವರ ಆಸೆ ಮತ್ತಷ್ಟು ಬಲವಾಗುತ್ತದೆ.












Click it and Unblock the Notifications