ರಾಜಸ್ಥಾನ: ಅಕ್ರಮ ಗೋ ಸಾಗಾಟ ತಡೆಯಲು ಹೋದ ಪೊಲೀಸರ ಮೇಲೆ ಗುಂಡು

Posted By:
Subscribe to Oneindia Kannada

ರಾಜಸ್ಥಾನ, ಡಿಸೆಂಬರ್ 07 : ಗೋವುಗಳ ಅಕ್ರಮ ಸಾಗಾಟ ತಡೆಯಲೆಂದು ಹೋದ ಪೊಲೀಸರ ಮೇಲೆಯೇ ಗೋವು ಕಳ್ಳಸಾಗಾಟಗಾರರು ಗುಂಡಿನ ದಾಳಿ ನಡೆಸಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಕುಂದಾಪುರ: ಭಾರೀ ಅಕ್ರಮ ಗೋ ಸಾಗಾಟ ತಡೆದ ಪೇದೆ ಕೊಲೆಗೆ ಯತ್ನ

ಗೋ ಸಾಗಾಟಗಾರರ ಗುಂಡಿಗೆ ಪ್ರತಿದಾಳಿ ನಡೆಸಿದ ಅಲ್ವಾರ್ ಜಿಲ್ಲೆ ಪೊಲೀಸರು ಒಬ್ಬ ಅಕ್ರಮ ಸಾಗಾಟಗಾರನನ್ನು ಹೊಡೆದುರುಳಿಸಿದ್ದಾರೆ.

Rajasthan : Cow smuglers open fire on Police

ಬುಧವಾರ (ಡಿಸೆಂಬರ್ 06) ರಾತ್ರಿ ಟೆಂಪೊ ಒಂದರಲ್ಲಿ ಅಕ್ರಮವಾಗಿ ಗೋ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಅಲ್ವಾರ್ ಪೊಲೀಸರು ಬ್ಯಾರಿಕೆಡ್ ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ವಾಹನವನ್ನು ತಡೆಯಲು ಪ್ರಯತ್ನಿಸಿದರು, ಆದರೆ ಅಕ್ರಮ ಸಾಗಾಟಗಾರರು ಬ್ಯಾರಿಕೆಡ್ ಗಳನ್ನು ಗುದ್ದಿಕೊಂಡು ವಾಹನ ಚಲಾಯಿಸಲು ಪ್ರಯತ್ನಿಸಿದ್ದಾರೆ.

ದೀಪಾವಳಿಯಂದೇ ಜೀವನಾಧಾರಕ್ಕಿದ್ದ ಹಸುಗಳನ್ನು ಕಿತ್ತುಕೊಂಡ ವಿಧಿ

ಇಷ್ಟೆ ಅಲ್ಲದೆ ವಾಹನದಲ್ಲಿದ್ದ 5-6 ಮಂದಿ ಅಕ್ರಮ ಸಾಗಾಟಗಾರರು ಪೊಲೀಸರತ್ತ ಗುಂಡಿನ ದಾಳಿ ಪ್ರಾರಂಭಿಸಿದ್ದಾರೆ. ಪ್ರತಿದಾಳಿ ನಡೆಸಿದ ಪೊಲೀಸರು ಒಬ್ಬನನ್ನು ಹೊಡೆದುರುಳಿಸಿದ್ದಾರೆ. ಗೋ ಕಳ್ಳಸಾಗಾಣಿಕೆದಾರರು ಟಾಟಾ 407 ಗಾಡಿಯಲ್ಲಿ 5 ಗೋವುಗಳನ್ನು ಸಾಗಣೆ ಮಾಡುತ್ತಿದ್ದರು. ಗೋವುಗಳು ಈಗ ಪೊಲೀಸರ ವಶದಲ್ಲಿವೆ.

ಅಲ್ವಾರ್ ಜಿಲ್ಲೆಯಲ್ಲಿ ಗೋ ಕಳ್ಳಸಾಗಣೆದಾರರ ನಡುವೆ ಮತ್ತು ಗೋ ರಕ್ಷಣೆಕಾರರ ನಡುವೆ ಮಾರಾಮಾರಿ ಸಾಮಾನ್ಯ, ಇತ್ತೀಚೆಗಷ್ಟೆ ಉಮಾರ್ ಖಾನ್ ಎಂಬ ಗೋ ಅಕ್ರಮ ಸಾಗಾಣೆಕಾರ ಗೋ ರಕ್ಷಕದಳದವರಿಂದ ಹತ್ಯೆಗೊಂಡಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cow smuglers shoots on police in Rajasthan's Alwar district, in return police shoots cow smuglers one cow smuggler was dead.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ