ವಾಹನಗಳ ವೇಗದ ಮಿತಿ ಏರಿಕೆಗೆ ಹೊಸ ನೀತಿ: ಗಡ್ಕರಿ

ನವದೆಹಲಿ, ಅಕ್ಟೋಬರ್ 08: ವಾಹನಗಳ ವೇಗದ ಮಿತಿ ಏರಿಕೆಗೆ ಶೀಘ್ರ ಹೊಸ ನೀತಿ ರೂಪಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.

ವೇಗದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೇಗದ ಮಿತಿಯನ್ನು ನಿರ್ಬಂಧಿಸುವ ವಿವಿಧ ನ್ಯಾಯಾಲಯದ ನಿರ್ಧಾರಗಳಿವೆ. ಆದರೆ, ಈಗ ವೇಗದ ಮಿತಿಗಳನ್ನು ಹೆಚ್ಚಿಸಲು ಕಾನೂನು ತರಲು ನಿರ್ಧರಿಸಿದ್ದೇವೆ ಎಂದರು.

ಎಕ್ಸ್ ಪ್ರೆಸ್ ಗಳಲ್ಲಿ ವಾಹನಗಳ ವೇಗದ ಮಿತಿಯನ್ನು ಪ್ರತಿ ಗಂಟೆಗೆ 140 ಕಿಲೋ ಮೀಟರ್ ಗೆ ಕಡಿಮೆಗೊಳಿಸಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ವಿವಿಧ ವರ್ಗಗಳ ವಾಹನಗಳ ವೇಗದ ಮಿತಿಯನ್ನು ಪರಿಷ್ಕರಿಸಿ ಶೀಘ್ರದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎದು ನಿತಿನ್ ಗಡ್ಕರಿ ತಿಳಿಸಿದರು.

Raise Speed Limits For Different Roads: Gadkari

ಇಂಡಿಯಾ ಟುಡೇ ಕಾನ್ಕ್ಲೇವ್ 2021 ರಲ್ಲಿ ಮಾತನಾಡಿದ ಸಚಿವರು, ಹೆಚ್ಚಿನ ವೇಗದಿಂದ ಅಪಘಾತಗಳು ಉಂಟಾಗುತ್ತವೆ ಎಂಬ ಗ್ರಹಿಕೆ ಇರುವುದರಿಂದ ಇನ್ನೂ ವೇಗದ ಮಿತಿಯನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದರು.

15 ವರ್ಷಗಳಿಗೂ ಹಳೆಯ ವಾಹನಗಳ ನೋಂದಣಿ ನವೀಕರಣಕ್ಕೆ ವಾಹನ ಮಾಲೀಕರು ಎಪ್ರಿಲ್ 2022ರಿಂದ ದುಬಾರಿ ಬೆಲೆ ತೆರ ಬೇಕಾಗುವುದು.

ಸದ್ಯ ಹಳೆಯ ಕಾರುಗಳ ನೋಂದಣಿ ನವೀಕರಣಕ್ಕೆ 600 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಮುಂದಿನ ವರ್ಷ ಎಪ್ರಿಲ್ ತಿಂಗಳಿನಿಂದ ವಾಹನ ಮಾಲೀಕರು 5,000 ರೂ. ತೆರಬೇಕಾಗಿ ಬರಲಿದೆ.

ಅದೇ ರೀತಿ ಸದ್ಯ 15 ವರ್ಷಗಳಿಗಿಂತ ಹಳೆಯ ದ್ವಿಚಕ್ರ ವಾಹನಗಳಿಗೆ 300 ರೂ. ನಿಗದಿ ಪಡಿಸಲಾಗಿದೆ, ಎಪ್ರಿಲ್ 2022ರ ನಂತರ 1,000 ರೂ. ಶುಲ್ಕ ತೆರಬೇಕಾಗುತ್ತದೆ.

ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಹೊರಡಿಸಿದೆ. ಗುಜರಿ ವಾಹನ ನೀತಿ ಜಾರಿ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 15 ವರ್ಷಗಳಿಗೂ ಹಳೆಯ ಲಾರಿ ಬಸ್ಸುಗಳ ನೋಂದಣಿ ನವೀಕರಣಕ್ಕೆ ಈಗಿನ ದರಕ್ಕಿಂತ 8 ಪಟ್ಟು ಹೆಚ್ಚು ಶುಲ್ಕ ತೆರಬೇಕಾಗುವುದು. ಅದರಂತೆ ಲಾರಿ ಬಸ್ಸು ಮಾಲೀಕರು ಸದ್ಯ 1,500 ಶುಲ್ಕವನ್ನು ನೋಂದಣಿ ನವೀಕರಣಕ್ಕಾಗಿ ತೆರುತ್ತಿದ್ದಾರೆ. ಮುಂದೆ ಅವರು 12,500 ತೆರಲಿದ್ದಾರೆ.

ಆಮದು ಮಾಡಿಕೊಂಡ ಬೈಕು ಮತ್ತು ಕಾರುಗಳ ನೋಂದಣಿ ನವೀಕರಣ ಶುಲ್ಕ ಕ್ರಮವಾಗಿ 10,000 ರೂ. ಮತ್ತು 40,000 ಆಗಲಿದೆ. ನೋಂದಣಿ ನವೀಕರಣ ಗಡುವು ಮೀರಿದರೆ ದಿನಕ್ಕೆ 50 ರೂ. ದಂಡವನ್ನು ಮಾಲೀಕರು ಕಟ್ತಬೇಕಾಗುತ್ತದೆ ಎಂದು ಸೂಚನೆಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+