Karnataka Rains : ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ: ಯೆಲ್ಲೋ ಅಲರ್ಟ್!

ನವದೆಹಲಿ ಅಕ್ಟೋಬರ್ 10: ಪ್ರಸ್ತುತ ದೇಶದ ಹಲವೆಡೆ ಅಕಾಲಿಕ ಮಳೆ ಅನಾಹುತವನ್ನು ಸೃಷ್ಟಿಸಿದೆ. ತೀವ್ರ ಮಳೆಯಿಂದಾಗಿ ಕರ್ನಾಟಕ, ದೆಹಲಿ, ಯುಪಿ, ಉತ್ತರಾಖಂಡ ಮತ್ತು ಬಿಹಾರದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಮೂರ್ನಾಲ್ಕು ದಿನ ಮಳೆ ಇದೇ ರೀತಿ ಮುಂದುವರಿಯಲಿದೆ ಎಂದು ಬಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ದೆಹಲಿಯಲ್ಲಿ 13 ನೇ ತಾರೀಖಿನವರೆಗೆ ಅಧಿಕ ಮಳೆಯಾಗಬಹುದು ಎಂದು ಅದು ಹೇಳಿದೆ. ಈ ಸಮಯದಲ್ಲಿ ತಾಪಮಾನ ಕಡಿಮೆಯಾಗುತ್ತದೆ. 13ರ ನಂತರವೂ ದೆಹಲಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನಾಳೆ ದೆಹಲಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಮತ್ತು ಕನಿಷ್ಠ ತಾಪಮಾನ 27 ಡಿಗ್ರಿ ಇರುತ್ತದೆ. ಈ ಅವಧಿಯಲ್ಲಿ 21 ರಾಜ್ಯಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ.

ದೆಹಲಿ ಮಾತ್ರವಲ್ಲ, ಯುಪಿ, ಬಿಹಾರ, ಮಹಾರಾಷ್ಟ್ರ ಸೇರಿದಂತೆ 21 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ ನಾಲ್ಕು ದಿನಗಳ ಕಾಲ ಹವಾಮಾನ ವೈಪರೀತ್ಯವಾಗಿರಲಿದೆ. ಈಗಾಗಲೇ ಯುಪಿಯ ನಲವತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದ್ದು, ಅಕ್ಟೋಬರ್ 14ರವರೆಗೆ ಈ ಅಲರ್ಟ್ ಮುಂದುವರೆಯಲಿದೆ.

ಉತ್ತರಾಖಂಡ ಮತ್ತು ಹಿಮಾಚಲದಲ್ಲೂ ಭಾರಿ ಮಳೆಯಗುವ ನಿರೀಕ್ಷೆ ಇದೆ. ಉತ್ತರಾಖಂಡ ಮತ್ತು ಹಿಮಾಚಲದಲ್ಲಿಯೂ ಅಧಕ ಮಳೆಯಾಗಬಹುದು. ಮತ್ತೊಂದೆಡೆ ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಲಘು ಹಿಮಪಾತವಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಬಿಹಾರದಲ್ಲಿ ಮುಂದಿನ 48 ಗಂಟೆಗಳಲ್ಲಿ 19 ಜಿಲ್ಲೆಗಳಲ್ಲಿ ತೀವ್ರ ಮಳೆಯ ಎಚ್ಚರಿಕೆ ಮುಂದುವರೆಯಲಿದೆ.

ಕೇರಳ, ಆಂಧ್ರ, ಕರ್ನಾಟಕದಲ್ಲಿ ಮಳೆ ಸಾಧ್ಯತೆ

ಕೇರಳ, ಆಂಧ್ರ, ಕರ್ನಾಟಕದಲ್ಲಿ ಮಳೆ ಸಾಧ್ಯತೆ

ಈಗಾಗಲೇ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿಂದು ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಮತ್ತೊಂದೆಡೆ ಮುಂದಿನ 24 ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆಯಾಗಬಹುದು. ಕೇರಳ, ಆಂಧ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲೂ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ.

ಐಎಂಡಿ ಹೇಳುವುದೇನು?

ಐಎಂಡಿ ಹೇಳುವುದೇನು?

ಸಾಮಾನ್ಯವಾಗಿ ಈ ಹೊತ್ತಿಗೆ ಕಳೆದ ವರ್ಷ ಮುಂಗಾರು ಕೈಕೊಟ್ಟಿತ್ತು. ಆದರೆ ಈ ಬಾರಿ ಅದು ಆಗಲಿಲ್ಲ. ಬದಲಿಗೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಎರಡೂ ತಿಂಗಳುಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದು ಜನರನ್ನು ಆತಂಕಕ್ಕೆ ದೂಡಿದೆ. ಇದು ಅಸಾಮಾನ್ಯ ಸಂಗತಿಯಲ್ಲ ಎಂದು ಐಎಂಡಿ ಹೇಳಿದೆ. ಲಾ ನಿಯೋ ಎಫೆಕ್ಟ್ ಮತ್ತು ಕಡಿಮೆ ಒತ್ತಡದ ವ್ಯವಸ್ಥೆಯ ಪರಿಣಾಮದಿಂದ ಈ ಬಾರಿ ಮಳೆಯಾಗುತ್ತಿದ್ದು, ಇವೆರಡೂ ಮುಂಗಾರು ನಿರ್ಗಮನವನ್ನು ವಿಳಂಬಗೊಳಿಸಿದೆ ಮತ್ತು ಇದರಿಂದಾಗಿ ಅಕ್ಟೋಬರ್‌ನಲ್ಲಿ ಜನರು ಭಾರಿ ಮಳೆಯನ್ನು ಎದುರಿಸುತ್ತಿದ್ದಾರೆ.

ಲಾ ನಿಯೋ ಎಫೆಕ್ಟ್ ಎಂದರೇನು?

ಲಾ ನಿಯೋ ಎಫೆಕ್ಟ್ ಎಂದರೇನು?

ಪಶ್ಚಿಮ ಪ್ರದೇಶದಲ್ಲಿ ಪೆಸಿಫಿಕ್ ಮಹಾಸಾಗರದ ನೀರು ಇದ್ದಕ್ಕಿದ್ದಂತೆ ತಣ್ಣಗಾದಾಗ, ಈ ಬಿಸಿ ಭಾಗವು ಏಷ್ಯಾದ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಬಿಸಿ ಗಾಳಿಯು ಒತ್ತಡದ ರೂಪದಲ್ಲಿ ಮೋಡಗಳನ್ನು ಹೊಡೆಯುತ್ತದೆ. ನಂತರ ಅದು ವೇಗವಾಗಿ ಮಳೆಯಾಗುತ್ತದೆ. ಇದನ್ನು ಲಾ ನಿನೋ ಎಫೆಕ್ಟ್ ಎಂದು ಕರೆಯಲಾಗುತ್ತದೆ.

ಬೆಂಗಳೂರು ಮಳೆಯಿಂದಾಗಿ ವಾಹನ ಸವಾರರು ಪರದಾಟ

ಬೆಂಗಳೂರು ಮಳೆಯಿಂದಾಗಿ ವಾಹನ ಸವಾರರು ಪರದಾಟ

ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗುತ್ತಿದೆ. ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನರು ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಯನಗರ, ಹನುಂತನಗರ, ಜೆ. ಪಿ. ನಗರ, ವಿಜಯನಗರ, ವಿದ್ಯಾಪೀಠ ವೃತ್ತ, ರಾಜಾಜಿನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗುತ್ತಿದೆ. ಭಾನುವಾರ ಸಂಜೆ ಸಹ ನಗರದಲ್ಲಿ ಸುಮಾರು ಮೂರು ತಾಸು ಮಳೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+