ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮಂಜಿನೊಂದಿಗೆ ಮಳೆ ಮುನ್ಸೂಚನೆ- ತಾಪಮಾನ ಏರಿಕೆ ಸಾಧ್ಯತೆ

|
Google Oneindia Kannada News

ದೆಹಲಿ ಜನವರಿ 12: ದೆಹಲಿ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳು ಕೆಲ ದಿನಗಳಿಂದ ತೀವ್ರ ಶೀತ ಅಲೆಗಳ ಪರಿಸ್ಥಿತಿಯನ್ನು ಎದುರಿಸಿದೆ. ಇಂದು ಬೆಳಗ್ಗೆ ದೆಹಲಿಯಲ್ಲಿ ಕೊಂಚ ಮಂಜು ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಗೋಚರತೆ ಸುಧಾರಿಸಿದೆ. ಇದರೊಂದಿಗೆ ದೆಹಲಿಯಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಕೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿನ ಮಂಜಿನ ವಾತಾವರಣ ಪರಿಸ್ಥಿತಿ ಸುಧಾರಣೆಯಾಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಇನ್ನೂ ದಟ್ಟ ಮಂಜಿನಿಂದಾಗಿ ಭಾರತೀಯ ರೈಲ್ವೇ ಉತ್ತರ ಪ್ರದೇಶಗಳಲ್ಲಿ ಅನೇಕ ರೈಲುಗಳನ್ನು ರದ್ದುಗೊಳಿಸಿದೆ. ಆದರೆ ಸುಮಾರು 23 ರೈಲುಗಳು ತಮ್ಮ ನಿಗದಿತ ಸಮಯಕ್ಕಿಂತ ಹೆಚ್ಚು ತಡವಾಗಿ ಸಂಚರಿಸಲಿವೆ. ಜೊತೆಗೆ ಅನೇಕ ವಿಮಾನಗಳು ತಡವಾಗಿ ಹಾರಾಟ ಮಾಡಲಿವೆ. ಇದರಿಂದಾಗಿ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ.

ದೆಹಲಿಯಲ್ಲಿ ಮಂಜಿನೊಂದಿಗೆ ಮಳೆ

ದೆಹಲಿಯಲ್ಲಿ ಮಂಜಿನೊಂದಿಗೆ ಮಳೆ

ಹವಾಮಾನ ಇಲಾಖೆ ಇಂದಿನಿಂದ ದೆಹಲಿಯಲ್ಲಿ ಹವಮಾನ ಬದಲಾವಣೆಯ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನು ಇಲಾಖೆ ಸೂಚಿಸಿದೆ. ಇದರ ಪರಿಣಾಮ ತಡರಾತ್ರಿಯಿಂದಲೇ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ನಿನ್ನೆ ತಡರಾತ್ರಿ ದೆಹಲಿಯ ಹಲವು ಪ್ರದೇಶಗಳಲ್ಲಿ ಲಘು ತುಂತುರು ಮಳೆಯಾಗಿದೆ. ಇನ್ನೂ ಹಲವೆಡೆ ದಟ್ಟವಾದ ಮೋಡ ಕವಿದ ವಾತಾವರಣವಿದೆ. IMD ಪ್ರಕಾರ, ಮಳೆಯಿಂದಾಗಿ ತಾಪಮಾನದಲ್ಲಿ ಮತ್ತಷ್ಟು ಕುಸಿತವಾಗಬಹುದು. ಇಂದು ದೆಹಲಿಯ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಆಗಿದೆ.

ದೆಹಲಿಯ ವಾಯು ಗುಣಮಟ್ಟ ಹೇಗಿದೆ?

ದೆಹಲಿಯ ವಾಯು ಗುಣಮಟ್ಟ ಹೇಗಿದೆ?

ಇಂದು ದೆಹಲಿಯಲ್ಲಿ ಮಂಜು ಸ್ವಲ್ಪ ಸುಧಾರಣೆಯಾಗಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮಂಜು ಮೊದಲಿಗಿಂತ ಸ್ವಲ್ಪ ಕಡಿಮೆಯಿದ್ದರೆ, ಬಿಹಾರದಲ್ಲಿ ದಟ್ಟವಾದ ಮಂಜು ಇದೆ. ಈ ಬಾರಿ ದಿಲ್ಲಿಯಲ್ಲಿ ಕಂಡು ಬಂದಂತಹ ವಾತಾವರಣ ಹಾಗೂ ಚಳಿಯಿಂದ ಜನರು ಕಂಗೆಟ್ಟಿರುವ ರೀತಿ ಕಳೆದ ಹತ್ತು ವರ್ಷಗಳಲ್ಲಿ ಕಂಡಿರಲಿಲ್ಲ.


ಹಾಗಾಗಿ ಚಳಿಗಾಲದ ಜೊತೆಗೆ ದೆಹಲಿಯಲ್ಲಿ ಮಾಲಿನ್ಯವೂ ಉತ್ತುಂಗದಲ್ಲಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್ (SAFAR) ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 312 ಆಗಿದ್ದು, ಇದು ತುಂಬಾ ಕಳಪೆಯಾಗಿದೆ. ಆದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ದೆಹಲಿಯ AQI ಸ್ಥಿತಿ ಇಂದು ಬೆಳಿಗ್ಗೆ ಈ ಕೆಳಗಿನಂತಿದೆ.

ದೆಹಲಿಯಲ್ಲಿ ಕಳಪೆಯಾದ ಗಾಳಿ

ದೆಹಲಿಯಲ್ಲಿ ಕಳಪೆಯಾದ ಗಾಳಿ

ಪಂಜಾಬಿ ಬಾಗ್, ದೆಹಲಿ - DPCC ಪಿತಮ್ ಪುರ 350 AQI

ಪುಸಾ, ದೆಹಲಿ - ಪಶ್ಚಿಮ ದೆಹಲಿ 384 AQI

ಶಾದಿಪುರ್, ದೆಹಲಿ - ಪಶ್ಚಿಮ ದೆಹಲಿ 365 AQI

ಮುಂಡ್ಕಾ, ದೆಹಲಿ - ಭೀಮ್ ನಗರ 371 AQI

ಪರ್ಪರ್ಗಂಜ್, ದೆಹಲಿ - 389 AQI

ಅಶೋಕ್ ವಿಹಾರ್, ದೆಹಲಿ - ಲೋಧಿ ರಸ್ತೆ 355 AQI

ಹಿಮಾಚಲ-ಕಾಶ್ಮೀರದಲ್ಲಿ ಹಿಮಪಾತ

ಹಿಮಾಚಲ-ಕಾಶ್ಮೀರದಲ್ಲಿ ಹಿಮಪಾತ

NCR ಕುರಿತು ಮಾತನಾಡುವುದಾದರೆ, ನೋಯ್ಡಾದಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಮತ್ತು ಗರಿಷ್ಠ ತಾಪಮಾನ 24 ಡಿಗ್ರಿ, ಗಾಜಿಯಾಬಾದ್‌ನಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಮತ್ತು ಗರಿಷ್ಠ ತಾಪಮಾನ 22 ಡಿಗ್ರಿ ಮತ್ತು ಗುರುಗ್ರಾಮ್‌ನಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಮತ್ತು ಗರಿಷ್ಠ ತಾಪಮಾನ 22 ಡಿಗ್ರಿ ದಾಖಲಾಗಿದೆ. ಆದ್ದರಿಂದ ದಕ್ಷಿಣದಲ್ಲಿ, ಹವಾಮಾನವು ಸದ್ಯಕ್ಕೆ ಸ್ಪಷ್ಟವಾಗಿದೆ. ಆದರೆ ಅಸ್ಸಾಂ-ಸಿಕ್ಕಿಂನಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆದರೆ ಹಿಮಾಚಲ-ಕಾಶ್ಮೀರದಲ್ಲಿ ಹಿಮಪಾತ ಇಂದಿಗೂ ಮುಂದುವರಿದಿದೆ.

English summary
Delhi and its adjoining areas have been facing severe cold wave conditions for the past few days. Met department said that fog has reduced in Delhi this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X