Vande Bharat Express: ರೈಲುಗಳ ನಿರ್ವಹಣೆಗಾಗಿ ₹ 18,000 ಕೋಟಿ ಯೋಜನೆ- ಏನೇನಿದೆ ತಿಳಿಯಿರಿ
ನವದೆಹಲಿ, ಜನವರಿ 10: ವಂದೇ ಭಾರತ್ ರೈಲುಗಳಿಗಾಗಿ ತನ್ನ ಲೋಕೋಮೋಟಿವ್ ಅಪ್‌ಕೀಪ್ ಸೇವೆಗಳನ್ನು ಹೆಚ್ಚಿಸಲು ಭಾರತೀಯ ರೈಲ್ವೇ ಸುಮಾರು ₹18,000 ಕೋಟಿಯ ಯೋಜನೆಯನ್ನು ರೂಪಿಸಿದೆ. ಸೆಮಿ-ಹೈ-ಸ್ಪೀಡ್ ರೈಲುಗಳ ನಿಯೋಜನೆಯನ್ನು ರಾಷ್ಟ್ರದ ಹೆಚ್ಚುವರಿ ಘಟಕಗಳಿಗೆ ಸಂಪರ್ಕ ಕಲ್ಪಿಸುವತ್ತ ಗಮನಹರಿಸಿದೆ.
ರಾಷ್ಟ್ರದಾದ್ಯಂತ ಸಾಕಷ್ಟು ಅಪ್‌ಕೀಪ್ ಡಿಪೋಗಳ ಕೊರತೆಯ ಇದೆ. ಬಹಳಷ್ಟು ಘಟಕಗಳಲ್ಲಿ ವಂದೇ ಭಾರತ್ ರೈಲುಗಳಿಗೆ ಅಡೆತಡೆಯಾಗಿರುವುದು ಹಳಿಗಳು. ಇದರ ಉನ್ನತೀಕರಣಕ್ಕೆ ವೇಗವನ್ನು ನೀಡಲು ಭಾರತೀಯ ರೈಲ್ವೆ ಮುಂದಾಗಿದೆ.
'ಮುಂಬರುವ ತಿಂಗಳುಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸೂಕ್ತವಾಗಿ ನಿರ್ವಹಿಸಬೇಕಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಡಿಪೋ ಸುಧಾರಣೆ ಕಾರ್ಯಗಳನ್ನು ರಾಷ್ಟ್ರದಾದ್ಯಂತ ಕೈಗೊಳ್ಳಬೇಕಿದೆ' ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು 'ಎಕನಾಮಿಕ್ಸ್ ಟೈಮ್ಸ್'ಗೆ ಮಾಹಿತಿ ನೀಡಿದ್ದಾರೆ.

2021 ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ರೈಲುಗಳು ದೇಶದ ಪ್ರತಿ ಮೂಲೆಗೂ ತಲುಪುತ್ತವೆಂದು ಘೋಷಿಸಿದರು. ಇದಾದ 12 ತಿಂಗಳ ನಂತರ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು 75 ರೈಲುಗಳನ್ನು ಆಗಸ್ಟ್ 2023 ರೊಳಗೆ ಪ್ರಾರಂಭಿಸಲಿದ್ದೇವೆ ಎಂದು ಹೇಳಿದರು.
ಪ್ರಸ್ತುತ ದೇಶದಲ್ಲಿ ಏಳು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚಿಗೆ ಡಿಸೆಂಬರ್ 30 ರಂದು ವಂದೇ ಭಾರತ್ ರೈಲನ್ನು ಉದ್ಘಾಟಿಸಲಾಯಿತು. ಈ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಸ್ತುತ ಭಾರತದಲ್ಲಿ 100 ವಂದೇ ಭಾರತ್ ರೈಲುಗಳನ್ನು ನಿರ್ವಹಿಸುವ 58 ಬೋಧನಾ ಡಿಪೋಗಳಿವೆ. ಈ ರೈಲುಗಳು ವೇಗವಾಗಿ ಚಲಿಸುತ್ತವೆ, ಇವುಗಳ ನಿರ್ವಹಣೆ ಸರಳವಾಗಿರುತ್ತವೆ. ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಿ ಚಲಿಸುತ್ತವೆ. ಕಾರ್ಯಾಚರಣೆಗಳಲ್ಲಿ ಹೆಚ್ಚು ಸರಳತೆಯನ್ನು ಹೊಂದಿರುತ್ತವೆ.
ಈ ರೈಲುಗಳನ್ನು ತಯಾರಿಸುವ ಘಟಕಗಳು ಹೆಚ್ಚಾಗಬೇಕಿದೆ. ಅಂದಾಗ ಮಾತ್ರ ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಆದಷ್ಟು ಬೇಗ ಹೆಚ್ಚಿಸಬಹುದು. ಅಗತ್ಯ ನಿರ್ವಹಣೆಗೆ ಮೂಲಸೌಕರ್ಯಗಳನ್ನು ಕಲ್ಪಿಸುಬೇಕು. ಇದನ್ನು ನಾವೀಗ ಅಭಿವೃದ್ಧಿ ಪಡಿಸಬೇಕಿದೆ' ಎಂದು ರೈಲ್ವೆ ಇಲಾಖೆಯ ತಾಂತ್ರಿಕ ಸಲಹೆಗಾರರೊಬ್ಬರು ತಿಳಿಸಿದ್ದಾರೆ.

ಸುಮಾರು 475 ವಂದೇ ಭಾರತ್ ರೈಲುಗಳ ಬಿಡುಗಡೆ ಜೊತೆಗೆ, ರೈಲ್ವೆ ನಿಲ್ದಾಣಗಳ ಮೂಲಸೌಕರ್ಯಗಳ ಸುಧಾರಣೆಗೆ ಹೆಚ್ಚು ಮಹತ್ವ ನೀಡಬೇಕಾಗಿದೆ.
ಡಿಪೋಗಳನ್ನು ಸುಧಾರಿಸಲು ಪ್ರತಿ ಡಿಪೋಗೆ ₹ 312 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಅಂದಾಜಿಸಿದೆ - ಸಿವಿಲ್‌ಗೆ ₹ 165.85 ಕೋಟಿ, ಮೆಕ್ಯಾನಿಕಲ್‌ಗೆ ₹ 131.8 ಕೋಟಿ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕಾಮಗಾರಿಗಳಿಗೆ ₹ 13.48 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ.

ಜನವರಿ 19ರಂದು ಪ್ರಧಾನಿ ಮೋದಿ ತೆಲಂಗಾಣದ ಹೈದರಾಬಾದ್‌ನಲ್ಲಿ ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ₹ 700 ಕೋಟಿ ವೆಚ್ಚದ ಸಿಕಂದರಾಬಾದ್ ರೈಲು ನಿಲ್ದಾಣದ ಆಧುನೀಕರಣ, ₹ 1,231 ಕೋಟಿ ವೆಚ್ಚದ ಸಿಕಂದರಾಬಾದ್ ಮತ್ತು ಮಹಬೂಬ್‌ನಗರ ನಡುವಿನ ರೈಲು ಮಾರ್ಗ ಸುಧಾರಣೆ ಮತ್ತು ₹ 521 ಕೋಟಿ ವೆಚ್ಚದಲ್ಲಿ ಕಾಜಿಪೇಟ್ ರೈಲ್ವೇ ಕೋಚ್ ಕೂಲಂಕುಷ ಕಾರ್ಯಾಗಾರದ ಕಾಮಗಾರಿಗಳನ್ನು ಪ್ರಧಾನ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ, 'ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಔಪಚಾರಿಕವಾಗಿ ಚಾಲನೆ ನೀಡಲಿದ್ದಾರೆ. ಇದು ಎರಡು ನಿಲ್ದಾಣಗಳ ನಡುವಿನ ಪ್ರಯಾಣದ ಸಮಯವನ್ನು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ' ಎಂದು ಸಂಜಯ್ ಹೇಳಿದ್ದಾರೆ.












Click it and Unblock the Notifications