ದೀಪಾವಳಿ ಕೊಡುಗೆ : ರೈಲು ಹೊರಡುವ ಅರ್ಧ ತಾಸು ಮುನ್ನ ಬುಕ್ಕಿಂಗ್

ನವದೆಹಲಿ, ನ.11: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗೆ ದೀಪಾವಳಿ ಕೊಡುಗೆಯನ್ನು ನೀಡಿದೆ. ರೈಲು ಹೊರಡುವುದಕ್ಕೂ 30 ನಿಮಿಷ ಮೊದಲು ಪ್ರಯಾಣಿಕರು ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ಘೋಷಿಸಲಾಗಿದೆ. ಹೊಸ ವ್ಯವಸ್ಥೆ ನವೆಂಬರ್ 12ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ,

ಈ ಮೊದಲು ರೈಲು ಹೊರಡುವುದಕ್ಕೂ ಮುನ್ನ ಒಂದು ಬಾರಿ ಮಾತ್ರ ಕಾಯ್ದಿರಿಸಿದ ಆಸನಗಳ ಮಾಹಿತಿ ಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಎರಡು ಬಾರಿ ಸಿದ್ದಪಡಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ.[ಸಿಟಿ ರೈಲ್ವೆ ನಿಲ್ದಾಣಕ್ಕೆ ಸ್ವಯಂ ಚಾಲಿತ ಟಿಕೆಟ್ ಯಂತ್ರ]

Good News: Railways Deepavali Gift; Book train tickets 30 minutes before train departure

ಕಾಯ್ದಿರಿಸಿದ ಆಸನಗಳ ಮೊದಲ ಮಾಹಿತಿ ಪಟ್ಟಿಯನ್ನು ರೈಲು ಹೊರಡುವುದಕ್ಕಿಂತ ನಾಲ್ಕು ಗಂಟೆ ಮೊದಲು ಸಿದ್ದಪಡಿಸಲಾಗುವುದು, ಆ ನಂತರ ಅಂತಿಮವಾಗಿ ಇನ್ನೊಂದು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಅಂತಿಮ 30 ನಿಮಿಷಗಳಿಗಿಂತ ಮೊದಲು ಆನ್​ಲೈನ್ ಅಥವಾ ಕೌಂಟರ್​ನಲ್ಲಿ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. [ರೈಲ್ವೆ ಇ-ಟಿಕೆಟ್ ಬುಕಿಂಗ್‌ಗೆ 15 ನಿಮಿಷ ಹೆಚ್ಚುವರಿ ಅವಕಾಶ]

ಸೀಟು, ಬರ್ತ್ ಲಭ್ಯತೆ ಆಧಾರದ ಮೇಲೆ ಆನ್ ಲೈನ್ ಮೂಲಕ ಅಥವಾ ರಿಸರ್ವೇಷನ್ ಕೌಂಟರ್ ಗಳ ಮೂಲಕ ಟಿಕೆಟ್ ಬುಕ್ಕಿಂಗ್ ಸಾಧ್ಯವಿದೆ. ಆಸನಗಳ ಮೊದಲ ಮಾಹಿತಿ ಪಟ್ಟಿ ಪ್ರಕಟಗೊಂಡ ಬಳಿಕ ಕೂಡಾ ಸೀಟು ಕಾಯ್ದಿರಿಸಬಹುದು. ಅಲ್ಲದೆ, ಅಕ್ರಮ ಟಿಕೆಟ್ ಮಾರಾಟ ದಂಧೆಗೂ ಕಡಿವಾಣ ಹಾಕಲು ಸಾಧ್ಯ ಎಂದು ಇಲಾಖೆ ಹೇಳಿದೆ. ಐಆರ್ ಸಿಟಿಸಿ ವೆಬ್ ತಾಣಕ್ಕೆ ಹೋಗಲು ಇಲ್ಲಿದೆ ಲಿಂಕ್.(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+