Watch This Video: ರೈಲ್ವೆ ಕೆಲಸಗಾರನಿಂದಲೇ ರೈಲಿನಿಂದ ಹಳಿಗೆ ಕಸ ಎಸೆತ: ವಿಡಿಯೋ ವೈರಲ್
Video Viral: ಸಾರಿಗೆ ಸಂಪರ್ಕ ಸೇವೆಯಲ್ಲಿ ಕ್ರಾಂತಿ ಉಂಟು ಮಾಡುತ್ತಿರುವ ರೈಲ್ವೆ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದೆ. ಆದರೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು, ಸ್ವತಃ ಇಲಾಖೆ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗೆ ಸ್ವಚ್ಛತೆಯ ಅರಿವು ಮೂಡಿದಂತಿಲ್ಲ. ಸಲೀಸಾಗಿ ರೈಲಿನ ಒಳಗೆ ಸಂಗ್ರಹಿಸಲಾದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಟ್ರ್ಯಾಕ್ಗೆ ಬಿಸಾಡಿದ ಘಟನೆ ನಡೆದಿದೆ. ಈ ಕುರಿತು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೌದು, ಮಧ್ಯ ರೈಲ್ವೆ, ರೈಲ್ವೆ ಸಚಿವಾಲಯ, ನೈಋತ್ಯ ರೈಲ್ವೆ ಸೇರಿದಂತೆ ಎಲ್ಲ ವಲಯಗಳ ರೈಲು ವಿಭಾಗಗಳು ಸ್ವಚ್ಛತೆ ಆದ್ಯತೆ ನೀಡುತ್ತವೆ. ಆಗಾಗ ಸಿಬ್ಬಂದಿಯಿಂದ ಸ್ವಚ್ಛತಾ ಅಭಿಯಾನ ಸಹ ಕೈಗೊಂಡು, ಟ್ರ್ಯಾಕ್ ಮೇಲೆ, ನಿಲ್ದಾಣಗಳ ನೈರ್ಮಲ್ಯ ಕಾಪಾಡಲಾಗುತ್ತದೆ. ಆದರೆ ರೈಲ್ವೆ ಸಿಬ್ಬಂದಿಯೊಬ್ಬರೇ ಸಹನೀಯವಾಗಿ ವರ್ತಿಸಿದ ವಿಡಿಯೋ ಜನಾಕ್ರೋಶಕ್ಕೆ ಕಾರಣವಾಗಿದೆ.

ರೈಲ್ವೆ ಸಿಬ್ಬಂದಿ ಯೂನಿಫಾರ್ಮ್ ಧರಿಸಿರುವ ವ್ಯಕ್ತಿಯೊಬ್ಬರು ಚಲಿಸುವ ರೈಲಿನಿಂದ ಕಸದ ಚೀಲವನ್ನು ನೇರವಾಗಿ ಹಳಿಗಳಿಗೆ ಎಸೆಯುತ್ತಿರುವುದು ವಿಡಿಯೋದನ್ನು ಕಾಣಬಹುದು. ಈತನ ರೈಲ್ವೆ ಕೆಲಸಗಾರನೇ ಎಂದು ತಿಳಿದು ಬಂದಿದೆ. ರೈಲ್ವೆ ಒಳಗೆ ಪ್ರಯಾಣಿಕರಿಂದ ಉತ್ಪತ್ತಿಯಾದ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡದೇ ನೇರವಾಗಿ ಚಳಿಸುವ ರೈಲಿನಿಂದ ಹಳಿಗೆ ಬೀಸಾಕಿದ್ದಾರೆ. ಅದೇ ಬೋಗಿಯ ಪ್ರಯಾಣಿಕರೊಬ್ಬರು ವಿಡಿಯೋ ಸೇರೆ ಹಿಡಿದಿದ್ದಾರೆ. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ವಚ್ಛ ಭಾರತ್ ಮಷಿನ್ ಅಡಿ ಸಾಕಷ್ಟು ಕಾರ್ಯಕ್ರಮ ಕೇಂದ್ರ ಸರ್ಕಾರ ಹಮ್ಮಿಕೊಳ್ಳುತ್ತಿದೆ. ರೈಲ್ವೆ ಇಲಾಖೆಯು ಈ ಬಗ್ಗೆ ಅರಿವು ಕಾರ್ಯಕ್ರಮ ನಡೆಸುತ್ತಿದೆ. ಒಂದು ಕಡೆ ರೈಲ್ವೆ ಸ್ವಚ್ಛವಾಗಿಡಲು ಉದ್ದೇಶ ಹೊಂದಲಾಗಿದೆ. ಆದರೆ ಅಲ್ಲಿನ ಕೆಲಸಗಾರನೇ ಈ ರೀತಿ ಬೆಜವಾಬ್ದರಿಯಾಗಿ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆ ಎದ್ದಿದೆ. ದೇಶವಾಗಲಿ, ರೈಲಾಗಲಿ, ರೈಲು ನಿಲ್ದಾಣಗಳ ಸ್ವಚ್ಛತೆಯಾಗಲಿ ಅದು ಕೇವಲ ಕಾಗದದ ಮೇಲೆ ಇದ್ದರಷ್ಟೇ ಸಾಲದು. ಅದು ಅನುಷ್ಠಾನಕ್ಕೂ ಬರಬೇಕು ಎಂಬುದು ಜನರ ಆಶಯವಾಗಿದೆ. ಸದ್ಯ ಈ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿದೆ.
High-tech garbage disposal of the Indian Railways. pic.twitter.com/cCRebQW0Gl
— Jayant Bhandari (@JayantBhandari5) November 8, 2025
ರೈಲಿನಿಂದ ಕಸ ಎಸೆದ ವ್ಯಕ್ತಿ ವಜಾ, ಸ್ವಚ್ಛತೆಗೆ ಸೂಚನೆ
ರೈಲಿನಿಂದ ಕಸ ಎಸೆಯುವ ದೃಶ್ಯ ಇದೇ ಮೊದಲೇನಲ್ಲ. ಈ ಹಿಂದೆಯು ರೈಲಿನ ಸಿಬ್ಬಂದಿ (IRCTC) ಬೋಗಿ ಒಳಗೆ, ಡೋರ್ ಪಕ್ಕದಲ್ಲಿ ಕಸ ಹಾಕಲು ಇರುವ ಡಬ್ಬದಿಂದ ಕಸ ಎಸೆದಿದ್ದರು. ಚಲಿಸುವ ರೈಲಿನಿಂದ ನೇರವಾಗಿ ಆಚೆ ಎಸೆಯುವ ದೃಶ್ಯ ವೈರಲ್ ಆಗಿತ್ತು. ಆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದ ರೈಲ್ವೆ ಇಲಾಖೆಯು, ಕೆಲಸದಿಂದ ಸಿಬ್ಬಂದಿ ವಜಾಗೊಳಿಸಿದ್ದಾಗಿ ತಿಳಿಸಿತ್ತು.
ಈ ಕೃತ್ಯ ನೋಡಿದ್ದ ಪ್ರಯಾಣಿಕರು ಹತಾಶ ವ್ಯಕ್ತಪಡಿಸಿದ್ದರು. ಕೂಡಲೇ ಪ್ರತಿಕ್ರಿಯಿಸಿದ್ದ ರೈಲ್ವೆ ಇಲಾಖೆಯು, ಈ ರೀತಿ ನಿಯಮ ಉಲ್ಲಂಘನೆ ಆಗಿದೆ. ಸಿಬ್ಬಂದಿ ಮೇಲೆ ದಂಡ ವಿಧಿಸಲಾಗಿದ್ದು, ರೈಲು ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿತ್ತು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications