ದೆಹಲಿಯ 2 ಮಸೀದಿಗಳಿಗೆ ರೈಲ್ವೇ ನೋಟಿಸ್ ಜಾರಿ ಮಾಡಿದ್ದು, 15 ದಿನ ತೆರವಿಗೆ ಗಡುವು!
ಅಕ್ರಮವಾಗಿ ಕಟ್ಟಿದ ದೆಹಲಿಯ 2 ಮಸೀದಿಗಳಿಗೆ ರೈಲ್ವೇ ನೋಟಿಸ್ ಜಾರಿ ಮಾಡಿದ್ದು, ಮಸೀದಿ ತೆರವಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ದೆಹಲಿಯ ಎರಡು ಪ್ರಮುಖ ಮಸೀದಿಗಳಾದ ಬೆಂಗಾಲಿ ಮಾರ್ಕೆಟ್ ಮಸೀದಿ ಮತ್ತು ಬಾಬರ್ ಷಾ ಟಾಕಿಯಾ ಮಸೀದಿಗಳಿಗೆ 15 ದಿನಗಳಲ್ಲಿ ತೆರವಿಗೆ ಒತ್ತಾಯಿಸಿ ಉತ್ತರ ರೈಲ್ವೇ ಆಡಳಿತ ನೋಟಿಸ್ ನೀಡಿದೆ.
ನಿಗದಿತ ಅವಧಿಯೊಳಗೆ ಒತ್ತುವರಿ ತೆರವು ಮಾಡದಿದ್ದಲ್ಲಿ ಜಮೀನು ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನೋಟಿಸ್‌ನಲ್ಲಿ ರೈಲ್ವೆ ಆಡಳಿತ ತಮ್ಮ ಭೂಮಿಯನ್ನು ಅಕ್ರಮವಾಗಿ ಮಸೀದಿಗಳು ಅತಿಕ್ರಮಿಸಿಕೊಂಡಿದೆ ಎಂದು ತಿಳಿಸಿದೆ. ಹೀಗಾಗಿ ರೈಲ್ವೆ ಅದೀನಲ್ಲಿರುವ ಆಸ್ತಿಯಲ್ಲಿ ನಿರ್ಮಿಸಲಾದ ಯಾವುದೇ ಅನಧಿಕೃತ ಕಟ್ಟಡಗಳು, ದೇವಾಲಯಗಳು, ಮಸೀದಿಗಳು ಅಥವಾ ಮಂದಿರಗಳನ್ನು ಸ್ವಯಂಪ್ರೇರಣೆಯಿಂದ ತೆಗೆದುಹಾಕುವಂತೆ ರೈಲ್ವೆ ಆಡಳಿತ ಸಂಬಂಧಪಟ್ಟವರನ್ನು ಒತ್ತಾಯಿಸಿದೆ. ನೋಟಿಸ್ ಪಾಲಿಸದಿದ್ದಲ್ಲಿ ಅತಿಕ್ರಮಣ ಭೂಮಿಯನ್ನು ವಾಪಸ್ ಪಡೆಯಲು ರೈಲ್ವೇ ಕಾಯಿದೆಗೆ ಅನುಗುಣವಾಗಿ ರೈಲ್ವೆ ಆಡಳಿತ ಕ್ರಮ ಕೈಗೊಳ್ಳಲಿದೆ.
ಜೊತೆಗೆ ನೋಟೀಸ್‌ನಲ್ಲಿ ಅತಿಕ್ರಮಣದ ಜವಬ್ದಾರಿಯನ್ನು ರೈಲ್ವೆ ಆಡಳಿತ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ. ಇದಕ್ಕೆ ಅನುಮತಿಸಿದ ಸ್ಥಳೀಯ ಆಡಳಿತಗಳೇ ಇದರ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತವೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಆದರೆ ನೋಟಿಸ್ ಬಳಿಕ ಮಾತನಾಡಿದ ಬಾಬರ್ ಶಾ ಟಕಿಯಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಗಫಾರ್, ಮಸೀದಿಯು ಸುಮಾರು 400 ವರ್ಷಗಳಷ್ಟು ಹಳೆಯದು ಎಂದು ಹೇಳಿದ್ದಾರೆ. ಹೆಚ್ಚುವರಿಯಾಗಿ ಮಲೇರಿಯಾಕ್ಕಾಗಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ನ ಪಕ್ಕದ ಕಚೇರಿಗೆ ರೈಲ್ವೆ ಅಧಿಕಾರಿಗಳು ನೋಟಿಸ್ ನೀಡಿದ್ದು, ಆವರಣವನ್ನು ತೆರವು ಮಾಡುವಂತೆ ಒತ್ತಾಯಿಸಿದ್ದಾರೆ.
ಐತಿಹಾಸಿಕ ಮಸೀದಿಗಳು ದೆಹಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಭೂದೃಶ್ಯದ ಅವಿಭಾಜ್ಯ ಅಂಗವಾಗಿದೆ. ರೈಲ್ವೆ ಅಧಿಕಾರಿಗಳು ತಮ್ಮ ಭೂಮಿಯಲ್ಲಿ ಅನುಮತಿಯಿಲ್ಲದೆ ರಚನೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದರೆ, ಮಸೀದಿ ಸಮಿತಿಯು ಈ ಪೂಜಾ ಸ್ಥಳಗಳು ಗಮನಾರ್ಹ ಐತಿಹಾಸಿಕ ಮೌಲ್ಯವನ್ನು ಹೊಂದಿವೆ ಮತ್ತು ಶತಮಾನಗಳಿಂದ ಇವೆ ಎಂದು ವಾದಿಸುತ್ತದೆ.












Click it and Unblock the Notifications