ಪ್ರಧಾನಿ ಮೋದಿ ಚುನಾವಣೆ ನಿಯಂತ್ರಿಸುತ್ತಾರೆ: "ರಾಗಾ' ಸೇನಾಧ್ಯಕ್ಷನ ಗಂಭೀರ ಆರೋಪ
ನವದೆಹಲಿ, ನವೆಂಬರ್ 14: ಬಿಹಾರ ರಾಜ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ಗೊತ್ತಿದೆ. ರಾಹುಲ್ ಗಾಂಧಿ ಅವರು ಮತಗಳ್ಳತನ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇನಾ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಜಗದೀಶ್ ಶರ್ಮಾ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರದಲ್ಲಿ ಎರಡು ಹಂತಗಳಲ್ಲಿ 243 ಸೀಟುಗಳಿಗೆ ಚುನಾವಣೆ ನಡೆದಿದೆ. ಇಂದು ಅಂತಿಮ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಮಧ್ಯ ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಆಯಿತು. ಅದರಲ್ಲಿ ರಾಜ್ಯದಲ್ಲಿ ಎನ್‌ಡಿಎ ಗೆಲ್ಲಲಿದೆ. ಇಂಡಿಯಾ ಮೈತ್ರಿ ಕೂಟ ಅಧಿಕಾರದಿಂದ ದೂರ ಉಳಿಯಲಿದೆ ಎಂದು ಹೇಳಲಾಗಿದೆ. ಇದರ ಹಿಂದೆ ಬಿಜೆಪಿ ಇದೆ ಎನ್ನುವಂತೆ ಆರೋಪಗಳು ಕೇಳೀ ಬಂದಿವೆ.

ಜಗದೀಶ್ ಶರ್ಮಾ ಎಕ್ಸ್ ಪೋಸ್ಟ್ ಮಾಡಿದ್ದು. "ನಮ್ಮ ತೋರ್ಪಡಿಕೆಗಳು ಭಾರತದ ಭಾವನೆಗಳಾಗುತ್ತವೆ. ಚುನಾವಣೆಯಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಪ್ರಧಾನಿ ಮೋದಿಜಿ ಬಯಸಿದ್ದೇ ನಡೆಯುತ್ತದೆ. ಮೋದಿ ಜಿ, ಅಮಿತ್ ಶಾ ಮತ್ತು ಚುನಾವಣಾ ಆಯೋಗವು ಬಿಹಾರದಲ್ಲಿ ಯಾರು ಗೆಲ್ಲುತ್ತಾರೆ ಮತ್ತು ಯಾರು ಸೋಲುತ್ತಾರೆಂದು ತಿಳಿದಿದೆ. ಹರಿಯಾಣದಲ್ಲಿ, ನಾವು ಎಕ್ಸಿಟ್ ಪೋಲ್‌ಗಳ ಫಳಿತಾಂಶದಲ್ಲಿ ಗೆಲ್ಲುತ್ತೇವೆ ಎಂದು ಹೇಳಲಾಗಿತ್ತು. ಆದರೆ ಕೊನೆಗೆ ನಾವು ಸೋತೆವು. ಇದೀಗ ಎನ್‌ಡಿಗೆ ಗೆಲ್ಲುತ್ತದೆ ಎಂದು ಹೇಳಲಾಗಿದೆ. ಈ ಫಲಿತಾಂಶ ನಮಗ್ಯಾರಿಗೂ ತಿಳಿಯುವುದಿಲ್ಲ ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ವೋಟ್ ಚೋರ್ ಗಡ್ಡಿ ಛೋಡ್' ಎಂಬ ಘೋಷಣೆ ನೀಡಿ ನಾಯಕ ರಾಹುಲ್ ಗಾಂಧಿ ಬಿಜೆಪಿಯನ್ನು ಬಟಾ ಬಯಲು ಮಾಡಿದ್ದಾರೆ ಎಂದು ನನಗನಿಸುತ್ತದೆ. ಇದರಿಂದ ಬಿಜೆಪಿ ಆತಂಕಕ್ಕೊಳಗಾಗಿದೆ ಮತ್ತು ಮೋದಿ ಜಿ ಫಿಕ್ಸ್ ಮಾಡಿಕೊಂಡಿದ್ದಾರೆ. ಅವರು ಚದುರಂಗ ಆಡುತ್ತಿದ್ದಾರೆ. ಅವರು ಗೆದ್ದರೆ, ರಾಹುಲ್ ಗಾಂಧಿ ಹೇಳುತ್ತಿರುವುದು ಸರಿ. ವೋಟ್ ಚೋರಿ ನಿಜಕ್ಕೂ ನಡೆಯುತ್ತಿದೆ ಎಂದರ್ಥ. ಮೋದಿಯವರು ಸೋತರೆ, ರಾಹುಲ್ ಗಾಂಧಿ ಹೇಳುತ್ತಿರುವುದು ಸುಳ್ಳು ಎಂದು ಅವರು ವಿವರಿಸಿದರು.
#WATCH | Rahul Priyanka Gandhi Sena national president Jagdish Sharma says, "Our placards are the sentiments of India. What Modi ji wants, happens. There is no meaning in elections. Modi ji, Amit Shah and EC know who will win and who will lose in Bihar. In Haryana, we were… https://t.co/uMvzU05J1a pic.twitter.com/D9Y2ZVqESq
— ANI (@ANI) November 14, 2025
ಚುನಾವಣೆಯಲ್ಲಿ ಗೆಲ್ಲವು ಕುರಿತು ಸರ್ಕಾರ ಫಿಕ್ಸ್ ಮಾಡಿಕೊಂಡಂತಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಇಡೀ ಭಾರತ ರಾಹುಲ್ ಗಾಂಧಿ ಜೊತೆಗಿದೆ. ಕಾಂಗ್ರೆಸ್ ಅನ್ನು ಭಾರತ ಬಯಸುತ್ತದೆ - "ಮೋದಿಜಿಗೆ ಜನ ಬೈ ಬೈ ಹೇಳಲಿದ್ದಾರೆ. ನೀವು ವಿಫಲರು, ನಿಮ್ಮ ಸರ್ಕಾರ ವಿಫಲವಾಗಿದೆ. ನಿಮ್ಮ ಏಜೆನ್ಸಿಗಳು ವಿಫಲವಾಗಿದೆ ಎಂದು ಅವರು ಗುಡುಗಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ











Click it and Unblock the Notifications