ಸರ್ದಾರ್ ಪಟೇಲ್ ಪ್ರತಿಮೆಯ ಮೇಲೆ ಮೇಡ್ ಇನ್ ಚೀನಾ, ಶೇಮ್: ರಾಹುಲ್

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಠಳಿಯ ಮೇಲೆ 'ಮೇಡ್ ಇನ್ ಚೀನಾ' ಎಂದು ಬರೆಯುವುದು ನಾಚಿಕೆಗೇಡಿನ ವಿಚಾರ ಎಂದು ರಾಹುಲ್ ಗಾಂಧಿ, ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಹಮದಾಬಾದ್, ಸೆ 26: ಮೂರು ದಿನಗಳ ಗುಜರಾತ್ ಚುನಾವಣಾ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದಲ್ಲಿನ ಇಪ್ಪತ್ತು ವರ್ಷಗಳ ಬಿಜೆಪಿ ಆಡಳಿತ ಮತ್ತು ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುತ್ಠಳಿಯ ಮೇಲೆ 'ಮೇಡ್ ಇನ್ ಚೀನಾ' ಎಂದು ಬರೆಯುವುದು ನಾಚಿಕೆಗೇಡಿನ ವಿಚಾರ ಎಂದು ರಾಹುಲ್ ಗಾಂಧಿ, ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Rahul Gandhi in Gujarat: Shameful to write ‘Made in China’ on Sardar Patel statue

ಮೂರು ದಿನಗಳ ಪ್ರವಾಸದ ಎರಡನೇ ದಿನವಾದ ಮಂಗಳವಾರ (ಸೆ 26) ಸೌರಾಷ್ಟ್ರದ ಧ್ರೋಲ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಮೇಕ್ ಇನ್ ಇಂಡಿಯಾ ಎಂದು ಹೇಳುವ ಮೋದಿ ಸರಕಾರ, ಪಟೇಲ್ ಅವರ ಪುತ್ಠಳಿಯ ಮೇಲೆ, ಚೀನಾದ ಹೆಸರು ಬರೆಯಲು ಅವಕಾಶ ನೀಡಿರುವುದು ಈ ದೇಶಕ್ಕಾದ ಅವಮಾನ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗುಜರಾತ್ ಮುಖ್ಯಮಂತ್ರಿ ರೂಪಾನಿ, ತಮ್ಮ ಸರಕಾರದ ಆಡಳಿತ ಯಂತ್ರದ ರಿಮೋಟ್ ಅನ್ನು ದೆಹಲಿ ನಾಯಕರ ಕೈಗೆ ಕೊಟ್ಟಿದ್ದಾರೆ. ದೆಹಲಿ ಮುಖಂಡರ ಅಣತಿಯಂತೆ ಗುಜರಾತ್ ಸರಕಾರ ನಡೆದುಕೊಳ್ಳುತ್ತಿದೆ. ಇಪ್ಪತ್ತು ವರ್ಷದ ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದಾರೆಂದು ರಾಹುಲ್ ಹೇಳಿದ್ದಾರೆ.

ಇದಕ್ಕೂ ಮುನ್ನ ಜಮ್ನಾನಗರದಲ್ಲಿ ವ್ಯಾಪಾರಿಗಳನ್ನು ಭೇಟಿ ಮಾಡಿ ಮಾತನಾಡಿದ ರಾಹುಲ್, ರಾಜ್ಯ ಚುನಾವಣಾ ಹೊಸ್ತಿಲಲ್ಲಿದೆ. ಇಲ್ಲಿಂದ ಆಡಳಿತ ನಡೆಸುವ ಸರಕಾರ ಬೇಕೋ ಅಥವಾ ಮೋದಿ/ಅಮಿತ್ ಶಾ ಹೇಳಿದಂತೆ ಅಧಿಕಾರ ನಡೆಸುವವರು ಬೇಕೋ ಎಂದು ಜನತೆ ತೀರ್ಮಾನಿಸಬೇಕಾಗಿದೆ ಎಂದು ರಾಹುಲ್ ಹೇಳಿದರು.

ನರ್ಮದಾ ಅಣೆಕಟ್ಟಿನ ಸಮೀಪ, 182 ಮೀಟರ್ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಾಣದ ಟೆಂಡರ್ ಅನ್ನು ಗುಜರಾತ್ ಸರಕಾರ, ಎಲ್ ಎಂಡ್ ಟಿ (L&T) ಸಂಸ್ಥೆಗೆ ನೀಡಿತ್ತು. ಪುತ್ಠಳಿಯ ಕಂಚಿನ ಹೊದಿಕೆಯ ಕೆಲಸವನ್ನು L&T, ಚೀನಾ ಮೂಲದ ಸಂಸ್ಥೆಗೆ ಸಬ್ ಕಾಂಟ್ರಾಕ್ಟ್ ನೀಡಿತ್ತು.

ಅಂದಾಜು ಮೂರು ಸಾವಿರ ಕೋಟಿ ರೂಪಾಯಿಯ ಪುತ್ಠಳಿ ನಿರ್ಮಾಣ ಯೋಜನೆಯ ಕಂಚಿನ ಹೊದಿಕೆಯ ಕೆಲಸವನ್ನು ಚೀನಾದ ಟಿಕ್ಯೂ ಆರ್ಟ್ ಫೌಂಡರಿ ಸಂಸ್ಥೆಗೆ ವಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+