Supreme Court Relief For Rahul Gandhi: ಏನೇ ಆಗಲಿ, ಬರುವುದೆಲ್ಲ ಬರಲಿ.. ಸುಪ್ರೀಂ ರಿಲೀಫ್‌ ಬಳಿಕ ರಾಹುಲ್ ರಿಯಾಕ್ಷನ್‌

ನವದೆಹಲಿ, ಆಗಸ್ಟ್‌ 04: ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ ರಿಲೀಫ್‌ ನೀಡಿದೆ. ಈ ಪ್ರಕರಣದಲ್ಲಿ ನೀಡಲಾಗಿದ್ದ ಎರಡು ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆಯೊಡ್ಡಿದೆ. ಅನರ್ಹಗೊಂಡಿದ್ದ ಸಂಸದ ಸ್ಥಾನವನ್ನೂ ಮರುಸ್ಥಾಪಿಸಲಾಗಿದೆ. ಇದು ರಾಹುಲ್‌ ಗಾಂಧಿ ಅವರಿಗೆ ಸಿಕ್ಕಿರುವ ದೊಡ್ಡ ಮಟ್ಟದ ಜಯವೆಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಈ ವಿಚಾರವಾಗಿ ಫಸ್ಟ್‌ ರಿಯಾಕ್ಷನ್‌ ನೀಡಿರುವ ರಾಹುಲ್‌ ಗಾಂಧಿ, 'ಭಾರತದ ಪರಿಕಲ್ಪನೆಯನ್ನು ರಕ್ಷಿಸುವ ನನ್ನ ಕರ್ತವ್ಯವು ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

Rahul Gandhis first reaction after Supreme Court Relief in Modi Surname Case

ಈ ಕುರಿತು ಟ್ವೀಟ್‌ ಮಾಡಿರುವ ಅವರು, 'ಏನೇ ಆಗಲಿ, ಬರುವುದೆಲ್ಲ ಬರಲಿ.. ನನ್ನ ಕರ್ತವ್ಯ ಮಾತ್ರ ಮುಂದುವರಿಯಲಿದೆ. ಭಾರತದ ಕಲ್ಪನೆಯನ್ನು ರಕ್ಷಿಸಲು ನಾನು ಕಟಿಬದ್ಧವಾಗಿದ್ದೇನೆ' ಎಂದು ತಿಳಿಸಿದ್ದಾರೆ.

ಇದೇ ವೇಳೆ, ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ( ಎಐಸಿಸಿ ) ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಗೆ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತವನ್ನು ನೀಡಿದ್ದಾರೆ.

Rahul Gandhis first reaction after Supreme Court Relief in Modi Surname Case

2019ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿ ಅವರಿಗೆ ನೀಡಲಾಗಿದ್ದ ಶಿಕ್ಷೆಗೆ ತಡೆ ನೀಡುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಕಾಂಗ್ರೆಸ್ ಸಂಭ್ರಮಿಸುತ್ತಿದೆ.

ಸುಪ್ರೀಂ ಕೋರ್ಟ್‌ ನಿರ್ಧಾರವನ್ನು 'ಸತ್ಯದ ಬಲವಾದ ಸಮರ್ಥನೆ' ಎಂದು ಕಾಂಗ್ರೆಸ್‌ ಹೇಳಿದೆ.

ರಾಹುಲ್‌ ಗಾಂಧಿ ಪ್ರಕರಣದಲ್ಲಿ ಸಂವಿಧಾನವನ್ನು ಎತ್ತಿಹಿಡಿಯಲಾಗಿದೆ. ಬಿಜೆಪಿಯ ಪಿತೂರಿ ಈಗ ಬಹಿರಂಗವಾಗಿದೆ ಎಂದು ಪಕ್ಷ ತಿಳಿಸಿದೆ.

Rahul Gandhis first reaction after Supreme Court Relief in Modi Surname Case

'ರಾಹುಲ್‌ ಗಾಂಧಿ ಅವರ ಪ್ರಕರಣದಲ್ಲಿ ಕೆಳ ನ್ಯಾಯಾಲಯದ ತೀರ್ಪಿನ ಪ್ರಬುದ್ಧತೆಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಕಾನೂನು, ನ್ಯಾಯ, ಸತ್ಯವನ್ನು ಗಾಳಿಗೆ ತೂರಿ ರಾಹುಲ್ ಗಾಂಧಿಯವರ ವಿರುದ್ಧ ದುರುದ್ದೇಶಪೂರ್ವಕ ಷಡ್ಯಂತ್ರ ರೂಪಿಸಲಾಗಿತ್ತು. ಸುಪ್ರೀಂ ಕೋರ್ಟ್ ಇಂದು ನ್ಯಾಯವನ್ನು ಎತ್ತಿ ಹಿಡಿದಿದೆ, ಸತ್ಯದ ಪರ ನಿಂತಿದೆ' ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

'ರಾಹುಲ್ ಗಾಂಧಿಯವರ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ವಿಧಿಸಿದ್ದ ಶಿಕ್ಷೆಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಈ ತಡೆಯಾಜ್ಞೆಯು ನ್ಯಾಯದ ಮೊದಲ ಮೆಟ್ಟಿಲು, ಮೋದಿಯ ದ್ವೇಷದ ರಾಜಕಾರಣಕ್ಕೆ ಎಂದೂ ಜಯ ಸಿಗುವುದಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ ಈ ತಡೆಯಾಜ್ಞೆ. ಈ ದೇಶದ ಘೋಷವಾಕ್ಯ "ಸತ್ಯಮೇವ ಜಯತೆ" ಇಲ್ಲಿ ಸತ್ಯ ಮಾತ್ರ ಗೆಲ್ಲುತ್ತದೆ.' ಎಂದು ಕಾಂಗ್ರೆಸ್‌ ತಿಳಿಸಿದೆ.

Rahul Gandhis first reaction after Supreme Court Relief in Modi Surname Case

ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್‌ ತೀರ್ಪಿನ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ, ಸತ್ಯವೊಂದೇ ಜಯಗಳಿಸುತ್ತದೆ. ಗೌರವಾನ್ವಿತ ಸುಪ್ರೀಂ ಕೋರ್ಟ್ ರಾಹುಲ್‌ ಗಾಂಧಿ ಅವರಿಗೆ ಪರಿಹಾರ ನೀಡುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಅವರಿಗೆ ನ್ಯಾಯ ಸಿಕ್ಕಿದೆ. ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನವನ್ನು ಎತ್ತಿ ಹಿಡಿಯಲಾಗಿದೆ' ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿಯವರ ವಿರುದ್ಧ ಬಿಜೆಪಿಯ ಷಡ್ಯಂತ್ರವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದೆ. ಇದು ವಿರೋಧ ಪಕ್ಷದ ನಾಯಕರನ್ನು ದುರುದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ನಿಲ್ಲಿಸುವ ಸಮಯ. ಜನರು ನೀಡಿದ ಜನಾದೇಶವನ್ನು ಗೌರವಿಸಲು ಇದು ಸಕಾಲವಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Rahul Gandhis first reaction after Supreme Court Relief in Modi Surname Case

ಇದೇ ಸಂದರ್ಭದಲ್ಲಿ ಸಂಸತ್ತಿನ ಮುಂದೆ ಕಾಂಗ್ರೆಸ್‌ ನಾಯಕರು ರಾಹುಲ್‌ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ. ಇದು ಭಾರತಕ್ಕೆ ಹಾಗೂ ಭಾರತದ ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಗೆಲುವೆಂದು ಕಾಂಗ್ರೆಸ್‌ ನಾಯಕರು ಬಣ್ಣಿಸಿದ್ದಾರೆ. ಈ ಮೂಲು ರಾಹುಲ್‌ ಅವರನ್ನು ಸೋಮವಾರ ಸಂಸತ್ತಿನೊಳಗೆ ಬರಮಾಡಿಕೊಳ್ಳಲು ಉತ್ಸುಕರಾಗಿರುವುದಾಗಿ ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+