• search

'ನಮೋ ಆ್ಯಪ್' ದತ್ತಾಂಶ ಸೋರಿಕೆಗೆ ರಾಹುಲ್ ಗಾಂಧಿ ಟೀಕೆ

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಮಾರ್ಚ್ 26: ಪ್ರಧಾನಿಯವರ ಅಧಿಕೃತ ಆ್ಯಪ್, ನಮೋ ಆ್ಯಪ್ ನಿಂದ ನಡೆದಿದೆ ಎನ್ನಲಾದ ದತ್ತಾಂಶ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

  ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಅನಾಲಿಟಿಕ್ಸ್ ಗಾಗಿ ಮಾತ್ರ ಮಾಹಿತಿಯನ್ನು ಬಳಸಿಕೊಳ್ಳಲಾಗಿದೆ ಅಷ್ಟೆ. ಮೂರನೇ ವ್ಯಕ್ತಿಗೆ ಈ ಅನಾಲಿಟಿಕ್ಸ್ ತಯಾರಿಸಲು ನೀಡಲಾಗಿತ್ತು ಅಷ್ಟೇ ಎಂದಿದೆ.

  ನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರು

  ಬಳಕೆದಾರರಿಗೆ ಸೂಕ್ತವಾದ ಮಾಹಿತಿಯನ್ನು ನೀಡುವ ಉದ್ದೇಶದಿಂದ ಬಳಕೆದಾರರ ಮಾಹಿತಿಯ ಮೇಲೆ ಅನಾಲಿಟಿಕ್ಸ್ ತಯಾರಿಸಲಾಗಿದೆ ಎಂದಿದೆ.

  Rahul Gandhi slams PM Modi for NaMo‘data theft’

  ಈ ಕುರಿತು ಭಾನುವಾರ ಟ್ಟೀಟ್ ಮಾಡಿದ್ದ ರಾಹುಲ್ ಗಾಂಧಿ, "ಹಾಯ್! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಮಂತ್ರಿ. ನೀವು ನನ್ನ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆಗುತ್ತಿದ್ದಂತೆ ನಿಮ್ಮೆಲ್ಲಾ ಮಾಹಿತಿಗಳನ್ನು ನಾನು ಅಮೆರಿಕಾದ ಕಂಪನಿಗಳಲ್ಲಿರುವ ನನ್ನ ಗೆಳೆಯರಿಗೆ ನೀಡುತ್ತೇನೆ," ಎಂದು ಟ್ಟೀಟ್ ಮಾಡಿದ್ದರು.

  ಇದಕ್ಕೆ ಬಿಜೆಪಿಯ ಟ್ಟಿಟ್ಟರ್ ಖಾತೆಯಿಂದ ತಕ್ಷಣ ಪ್ರತ್ಯುತ್ತರ ನೀಡಲಾಗಿದೆ. "ಉಳಿದ ಆ್ಯಪ್ ಗಳಿಗಿಂತ ನರೇಂದ್ರ ಮೋದಿ ಆ್ಯಪ್ ವಿಭಿನ್ನವಾಗಿದೆ. ಇದೊಂದು ವಿಶಿಷ್ಟ ಆ್ಯಪ್. ಯಾವುದೇ ಪರ್ಮಿಷನ್ ಮತ್ತು ಬಳಕೆದಾರರ ಮಾಹಿತಿ ನೀಡದೆ 'ಗೆಸ್ಟ್ ಮೋಡ್' ನಲ್ಲಿಯೂ ಬಳಸಬಹುದು. ಅಗತ್ಯವಿರುವ ಅನುಮತಿಗಳನ್ನು ಸಂದರ್ಭೋಚಿತ ಮತ್ತು ನಿರ್ದಿಷ್ಟ ಕಾರಣಕ್ಕೆ ಮಾತ್ರ ಕೇಳಲಾಗುತ್ತದೆ. ರಾಹುಲ್ ನ ಸುಳ್ಳುಗಳಿಗೆ ವಿರುದ್ಧವಾಗಿ, ಗೂಗಲ್ ಅನಾಲಿಟಿಕ್ಸ್ ನಂತೆಯೇ ಮೂರನೇ ವ್ಯಕ್ತಿಯ ಸೇವೆಗಳನ್ನು ಡೇಟಾ ವಿಶ್ಲೇಷಣೆಗಾಗಿ ಬಳಸಲಾಗುತ್ತಿದೆ. ಬಳಕೆದಾರರಿಗೆ ಹೆಚ್ಚು ಸೂಕ್ತವಾದ ವಿಷಯವನ್ನು ಒದಗಿಸುವುದಕ್ಕಾಗಿ ಮಾಹಿತಿಗಳ ವಿಶ್ಲೇಷಣೆ ಮಾಡಲಾಗುತ್ತದೆ ಎಂದು ಹೇಳಿದೆ.

  20 ವರ್ಷದ ಯುವತಿಯರಿಗೆ ಅರ್ಥವಾಗಿದ್ದು, ಪ್ರಧಾನಿಗೆ ಅರ್ಥವಾಗಿಲ್ಲ: ರಾಹುಲ್

  "ಈ ರೀತಿ ಮಾಡುವುದರಿಂದ ಬಳಕೆದಾರರು ಆ್ಯಪ್ ನಲ್ಲಿ ಅತ್ಯುತ್ತಮ ಅನುಭವವನ್ನು ಪಡೆಯುತ್ತಾರೆ. ತನ್ನ ಭಾಷೆಯಲ್ಲಿ ಮತ್ತು ಆಸಕ್ತಿಕರವಾದ ವಿಷಯಗಳನ್ನು ಪಡೆಯಲು ಬಳಕೆದಾರರಿಗೆ ಸಹಾಯವಾಗುತ್ತದೆ. ಕೃಷಿ ಸಂಬಂಧಿತ ಮಾಹಿತಿಯನ್ನು ನೋಡುವ ವ್ಯಕ್ತಿಯು ಕೃಷಿ ಸಂಬಂಧಿತ ವಿಷಯವನ್ನು ಸುಲಭವಾಗಿ ಪಡೆಯಬಹುದು," ಎಂದು ಬಿಜೆಪಿಯ ಟ್ಟಿಟರ್ ಖಾತೆ ಮೂಲಕ ಸ್ಪಷ್ಟನೆ ನೀಡಲಾಗಿದೆ.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಇದೇ ವೇಳೆ ಬಿಜೆಪಿ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದು, "ರಾಹುಲ್ ಗಾಂಧಿ ಈ ದಿನಗಳಲ್ಲಿ ಭವ್ಯ ರೂಪದಲ್ಲಿದ್ದಾರೆ. ಎಮ್ಆರ್ ಐ ಮತ್ತು ಎನ್ ಸಿಸಿಯ ನಂತರ, ಇವರು ತಂತ್ರಜ್ಞಾನದ ಬಗೆಗಿನ ತಮ್ಮ ಅತ್ಯುತ್ತಮ ಜ್ಞಾನವನ್ನು ಬಹಿರಂಗಪಡಿಸಿದ್ದಾರೆ. ಕೇಂಬ್ರಿಜ್ ಅನಾಲಿಟಿಕಾ ಹಗರಣ ಹೊರಬಿದ್ದ ನಂತರ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಅವರು ದಿನನಿತ್ಯ ಯತ್ನಿಸುತ್ತಿದ್ದಾರೆ," ಎಂದು ಬಿಜೆಪಿ ಟೀಕಿಸಿದೆ.

  ಜತೆಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ತಂತ್ರಜ್ಞಾನದ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲ ಎಂದು ಬಿಜೆಪಿ ಕಿಡಿಕಾರಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  AICC President Rahul Gandhi on Sunday took to Twitter and attack on Prime Minister Narendra Modi over alleged data theft through the official NaMo App. The BJP hit back, accusing Rahul of lying.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more