Rahul Gandhi: ಸಾಫ್ಟ್‌ವೇರ್ ಬಳಸಿ ಕರ್ನಾಟಕದ ಈ ಕ್ಷೇತ್ರದಲ್ಲಿ 6018 ಮತದಾರರು ಡಿಲೀಟ್: ಹೊಸ ಬಾಂಬ್ ಸಿಡಿಸಿ ರಾಹುಲ್ ಗಾಂಧಿ
ನವದೆಹಲಿ, ಸೆಪ್ಟೆಂಬರ್ 18: ಭಾರತೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವವರನ್ನು ಚುನಾವಣಾ ಆಯೋಗವು ರಕ್ಷಿಸುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದ ಅಳಂದ ವಿಧಾನಸಭಾ ಕ್ಷೇತ್ರವನ್ನು ಉಲ್ಲೇಖಿಸಿ, ಅಲ್ಲಿ 6,018 ಮತಗಳನ್ನು ಡಿಲೀಟ್ ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿದರು. "ಇದು ಕೇವಲ ಊಹೆಯಲ್ಲ, ಇದಕ್ಕೆ ದೃಢವಾದ ಪುರಾವೆಗಳಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಾನು ಕೆಲ ದಾಖಲೆಗಳನ್ನ ನೀಡುತ್ತೇನೆ, ತೀರ್ಮಾನ ನಿಮ್ಮದು. ನೀವು ನಂಬುತ್ತೀರಾ..!? ಒಂದು ಕ್ಷೇತ್ರದಲ್ಲಿ (ಆಳಂದ) 2023ರ ಎಲೆಕ್ಷನ್ ವೇಳೆ 6018 ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದರು ಎಂದು ರಾಹುಲ್ ಗಾಂಧಿ ಅವರು ದೂರಿದ್ದಾರೆ.

ರಾಜ್ಯದ ಹೊರಗಿನಿಂದ ನಕಲಿ ಲಾಗಿನ್‌ಗಳು ಮತ್ತು ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಈ ಮತದಾರರ ಗುರುತಿನ ಚೀಟಿಯನ್ನು ಅಳಿಸಲಾಗಿದೆ. ಈ ಆಪಾದಿತ ಮತದಾರರ ಅಳಿಸುವಿಕೆಯನ್ನು ವ್ಯಕ್ತಿಗಳಿಂದಲ್ಲ, ಬದಲಾಗಿ ಸಾಫ್ಟ್‌ವೇರ್ ಬಳಸಿ ಮತ್ತು ಕೇಂದ್ರೀಕೃತ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ವೋಟ್‌ಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಸೂರ್ಯಕಾಂತ್ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಬಲವಾಗಿರುವ ಬೂತ್‌ಗಳನ್ನೇ ಟಾರ್ಗೆಟ್ ಮಾಡಿ ಮತಗಳ್ಳತನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
Evidence 01: The Classic Case Of Godabai pic.twitter.com/ziuCPXJjan
— Congress (@INCIndia) September 18, 2025
ಚುನಾವಣೆಯಲ್ಲಿ, ಜನರ ಗುಂಪೊಂದು ವ್ಯವಸ್ಥಿತವಾಗಿ ಭಾರತದಾದ್ಯಂತ ಲಕ್ಷಾಂತರ ಮತದಾರರನ್ನು ಅಳಿಸುವಿಕೆಗೆ ಗುರಿಯಾಗಿಸಿಕೊಂಡಿದೆ, ವಿವಿಧ ಸಮುದಾಯಗಳು, ಮುಖ್ಯವಾಗಿ ವಿರೋಧ ಪಕ್ಷಗಳಿಗೆ ಮತ ಹಾಕುತ್ತಿರುವ ಸಮುದಾಯಗಳು. ಇದಕ್ಕೆ ನಾವು 100 ಪ್ರತಿಶತ ಪುರಾವೆಯನ್ನು ಕಂಡುಕೊಂಡಿದ್ದೇವೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ನಾನು ಸಂವಿಧಾನವನ್ನು ಪ್ರೀತಿಸುತ್ತೇನೆ, ನಾನು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರೀತಿಸುತ್ತೇನೆ ಮತ್ತು ನಾನು ಆ ಪ್ರಕ್ರಿಯೆಯನ್ನು ರಕ್ಷಿಸುತ್ತಿದ್ದೇನೆ. ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಅದನ್ನು ರಕ್ಷಿಸುತ್ತಿದ್ದೇನೆ. ಶೇ.100 ರಷ್ಟು ಸತ್ಯವಲ್ಲದ ಯಾವ ವಿಚಾರವನ್ನೂ ನಾನಿಲ್ಲಿ ನಿಮಗೆ ಹೇಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಅಳಂದ ಕ್ಷೇತ್ರದಲ್ಲಿ ಯಾರೋ 6,018 ಮತಗಳನ್ನು ಅಳಿಸಲು ಪ್ರಯತ್ನಿಸಿದರು, ಆದರೆ ಕಾಕತಾಳೀಯದಿಂದಾಗಿ ಸಿಕ್ಕಿಬಿದ್ದರು ಎಂದು ರಾಹುಲ್ ಆರೋಪಿಸಿದ್ದಾರೆ. "ಬೂತ್ ಮಟ್ಟದ ಅಧಿಕಾರಿ ತನ್ನ ಚಿಕ್ಕಪ್ಪನ ಮತ ಅಳಿಸಲ್ಪಟ್ಟಿರುವುದನ್ನು ಗಮನಿಸಿದರು, ಮತ್ತು ಅವರ ನೆರೆಹೊರೆಯವರು ಅದನ್ನು ಅಳಿಸಿದ್ದಾರೆ ಎಂದು ಅವರು ಕಂಡುಕೊಂಡರು. ಆದ್ದರಿಂದ, ಅವರು ನೆರೆಹೊರೆಯವರನ್ನು ಕೇಳಿದಾಗ ಅವರು ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು.
ಕರ್ನಾಟಕ ಸಿಐಡಿ 18 ತಿಂಗಳಲ್ಲಿ 18 ಪತ್ರ ಬರೆದಿದೆ. ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಅವರು ಉತ್ತರ ನೀಡುತ್ತಿಲ್ಲ. CEC of Karnataka ದೆಹಲಿಗೆ ಪತ್ರ ಬರೆದಿದೆ. ಉತ್ತರ ಬಂದಿಲ್ಲ. ಇದು ಬಲವಾದ ಸಾಕ್ಷ್ಯ. ಜ್ಞಾನೇಶ್ ಕುಮಾರ್ ಯಾರನ್ನೋ ರಕ್ಷಣೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಉತ್ತರ ಗೊತ್ತಿದೆ. ಯಾರವರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಇದು ಹೈಡ್ರೋಜನ್ ಬಾಂಬಲ್ಲ, ಹೈಡ್ರೋಜನ್ ಬಾಂಬ್ ಬರಬೇಕಷ್ಟೇ. ಈ ದೇಶದ ಯುವಕರಿಗೆ ಚುನಾವಣೆಗಳಲ್ಲಿ ಹೇಗೆ ಅಕ್ರಮ ನಡೆಯುತ್ತಿದೆ ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.












Click it and Unblock the Notifications