ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ ಕನ್ನ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 30: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸ್ ಬುಧವಾರ ಕನ್ನ ಹಾಕಿದ್ದಾರೆ. ಹ್ಯಾಕ್ ಮಾಡಿದ ಮೇಲೆ ನಿಂದನಾತ್ಮಕ ಟ್ವೀಟ್‌ ಪೋಸ್ಟ್ ಮಾಡಿದ ಘಟನೆ ನಡೆದಿತ್ತು.

ರಾಹುಲ್‌ ಗಾಂಧಿ ಅವರ ಕುಟುಂಬದ ಬಗ್ಗೆ ಕೆಲ ನಿಂದನಾತ್ಮಕ ಟ್ವೀಟ್ ಮಾಡಲಾಗಿತ್ತು. ರಾಹುಲ್ ಗಾಂಧಿ ಟ್ವೀಟರ್‌ ಬಳಸಿ "ನನ್ನ ಕುಟುಂಬ ಭ್ರಷ್ಟ" ಎಂದು ಬರೆಯಲಾಗಿತ್ತು.

Rahul Gandhi Twitter hacked

ಜತೆಗೆ 'We are legion' ಎಂದು ಬರೆಯಲಾಗಿತ್ತು. ಇದಾದ ಬಳಿಕ ನಿಂದನಾತ್ಮಕ ಟ್ವೀಟ್ ಗಳನ್ನು ಡಿಲೀಟ್ ಮಾಡಿ ಖಾತೆಯನ್ನು ಪುನಃ ಸಮಸ್ಥಿತಿಗೆ ತರಲಾಗಿದೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ(@OfficeofRG) ಸುಮಾರು 1.21 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

Rahul Gandhi's Twitter account hacked, obscene tweets removed

ಟ್ವಿಟ್ಟರ್ ಫ್ರೊಫೈಲ್ ಫೋಟೋ ಕೂಡಾ ತೆಗೆದು ಹಾಕಲಾಗಿತ್ತು. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಕಾಂಗ್ರೆಸ್ ನ ಪ್ರಣವ್ ಝಾ ಹೇಳಿದ್ದಾರೆ.

ರಾಹುಲ್ ಗಾಂಧಿ ಖಾತೆ ಕನ್ನ ಹಾಕುತ್ತಾರೆ ಎಂದರೆ ಡಿಜಿಟಲ್ ಸುರಕ್ಷತೆ ಬಗ್ಗೆ ಯೋಚಿಸಬೇಕಿದೆ. ಎಲ್ಲಾ ಡಿಜಿಟಲ್ ಮಾಹಿತಿ ಕಳ್ಳರ ಪಾಲಾಗುತ್ತದೆ ಎಂದರೆ ಕಷ್ಟ ಎಂದು ರಣದೀಪ್ ಬರೆದಿದ್ದಾರೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress vice president Rahul Gandhi's Twitter account was allegedly hacked on Wednesday night and a series of abusive and obscene tweets were sent from the account.
Please Wait while comments are loading...