Rahul Gandhi: ಸುಪ್ರೀಂ ಕೊರ್ಟ್ ಆದೇಶ ಬೆನ್ನಲ್ಲೆ 'ರಾಗಾ' ಲೋಕಸಭಾ ಅನರ್ಹತೆ ಆದೇಶ ವಾಪಾಸ್
ಬೆಂಗಳೂರು, ಆಗಸ್ಟ್ 07: ಮೋದಿ ಸರ್‌ನೇಮ್ ವಿವಾದದಿಂದಾಗಿ ಹೊರಡಿಸಲಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹತೆ ಆದೇಶವನ್ನು ಸಚಿವಾಲಯ ಸೋಮವಾರ ವಾಪಾಸ್ ಪಡೆದಿದೆ. ಈ ಮೂಲಕ ರಾಹುಲ್ ಗಾಂಧಿ ಅವರು ಸಂಸದರಾಗಿ ಮುಂದುವರಿಯಲಿದ್ದಾರೆ.
Lok Sabha Secretariat restores membership of Wayanad MP Rahul Gandhi after the Supreme Court on Friday (August 4) stayed his conviction in the ‘Modi’ surname remark case.
— ANI (@ANI) August 7, 2023
He was disqualified from the lower house in March 2023. pic.twitter.com/UBE3FvCGEN
ಭಾಷಣವೊಂದರಲ್ಲಿ ಪ್ರಧಾನಿ ಮೋದಿಯವರು ಸರ್‌ನೇಮ್ ಕುರಿತು ರಾಹುಲ್ ಗಾಂಧಿ ಅವರು ಟೀಕಿಸಿದ್ದರು. ಈ ಪ್ರಕರಣ ಸೂರತ್ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ರಾಜಕೀಯ ಕಾವು ಪಡೆದುಕೊಂಡಿತು. ಬಳಿಕ ತೀರ್ಪಿನ ಮೇರೆಗೆ ಅವರಿಗೆ ಸಚಿವಾಲಯವು ಲೋಕಸಭಾ ಸದಸ್ಯ ಸ್ಥಾನಕ್ಕೆ ಅನರ್ಹರು ಎಂದು ಹೇಳಿ ಆದೇಶ ಹೊರಡಿಸಿತು. ರಾಹುಲ್ ಗಾಂಧಿ ಶಿಕ್ಷೆಗೂ ಗುರಿಯಾದರು.

ಈ ಶಿಕ್ಷೆ ಆದೇಶಿ ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಸೂರತ್ ಹೈಕೋರ್ಟ್ ನೀಡಿದ್ದ ಜೈಲು ಶಿಕ್ಷೆ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಇದರಿಂದ ರಾಹುಲ್ ಗಾಂಧಿ ಬಿಗ್ ರಿಲೀಫ್ ಸಿಕ್ಕಂತಾಯಿತು. ಇದರ ಬೆನ್ನಲ್ಲೆ ಅವರ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ರದ್ದು ಮಾಡುವಂತೆ ಆಗ್ರಹ ಕೇಳಿ ಬಂದಿತ್ತು. ಅದರಂತೆ ಕೇಂದ್ರ ಸಚಿವಾಲಯವು ಸೋಮವಾರ ತನ್ನ ಅರ್ಹತೆ ಆದೇಶವನ್ನು ವಾಪಸ್ ಪಡೆದಿದೆ.
ಅರ್ಹತೆ ಆದೇಶ ವಾಪಾಸ್ ಪಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ (ಟ್ವಿಟ್ಟರ್ X ನಲ್ಲಿ) #Rahul is Back ಎಂದು ಟ್ರೆಂಡ್ ಸೃಷ್ಟಿಯಾಗಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ಕರ್ನಾಟಕದ ನಾಯಕರ ಆದಿಯಾಗಿ ದೆಹಲಿ ಹೈಕಮಾಂಡ್ ವರೆಗೂ ಅನೇಕ ನಾಯಕರು ಆದಷ್ಟು ಶೀಘ್ರವೇ ರಾಹುಲ್ ಗಾಂಧಿಯವರ ಅನರ್ಹತೆ ಆದೇಶ ವಾಪಾಸಾತಿಗೆ ಒತ್ತಾಯಿಸಿದ್ದರು. ಇದೆಲ್ಲ ಬೆಳವಣಿಗೆಯಿಂದ ಕೇಂದ್ರ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.












Click it and Unblock the Notifications