ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಕೊರೊನಾ ಲಸಿಕೆ; ಕೇಂದ್ರಕ್ಕೆ ರಾಹುಲ್ ಗಾಂಧಿ ಪ್ರಶ್ನೆ

|
Google Oneindia Kannada News

ನವದೆಹಲಿ, ಮೇ 18: ಮಕ್ಕಳಲ್ಲಿನ ಕೊರೊನಾ ಸೋಂಕು ನಿಭಾಯಿಸಲು ಕೇಂದ್ರ ಸರ್ಕಾರ ಏನೇನು ತಯಾರಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದು, ಈ ಕುರಿತು ಅಗತ್ಯ ನಿಯಮಾವಳಿಗಳನ್ನು ಸರ್ಕಾರ ಈಗಾಗಲೇ ಜಾರಿಗೆ ತರಬೇಕಿತ್ತು ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಕೊರೊನಾ ಸೋಂಕಿನಿಂದ ಮಕ್ಕಳನ್ನು ರಕ್ಷಿಸುವ ತುರ್ತು ಇದೆ. ಈ ನಿಟ್ಟಿನಲ್ಲಿ ಮಕ್ಕಳ ತಜ್ಞರ ಸೇವೆ ಹಾಗೂ ಲಸಿಕೆ, ಚಿಕಿತ್ಸೆ ಕುರಿತು ಕೇಂದ್ರ ಈಗಾಗಲೇ ನಿಯಮಾವಳಿಗಳನ್ನು ರೂಪಿಸಬೇಕಿತ್ತು" ಎಂದಿದ್ದಾರೆ.

ಅಗತ್ಯವಿರುವಾಗಲೇ ಪ್ರಧಾನಿ ಮೋದಿ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿಅಗತ್ಯವಿರುವಾಗಲೇ ಪ್ರಧಾನಿ ಮೋದಿ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿ

ಭಾರತದ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಸರ್ಕಾರ ವ್ಯವಸ್ಥೆಯನ್ನು ನಿದ್ದೆಯಿಂದ ಎಚ್ಚರಿಸಬೇಕಿದೆ ಎಂದು ಹೇಳಿದ್ದಾರೆ.

Rahul Gandhi Questions Corona Vaccine Protocol for Children

ಮಕ್ಕಳಿಗೆ ಕೊರೊನಾ ಲಸಿಕೆಗೆ ಅನುಮೋದನೆ ನೀಡಲು ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಚರ್ಚೆ ನಡೆಸುತ್ತಿದ್ದು, ಭಾರತದಲ್ಲಿಯೂ ಮಕ್ಕಳಿಗೆ ಕೊರೊನಾ ಲಸಿಕೆ ಕೊಡುವ ಅಗತ್ಯ ತಯಾರಿ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದಾರೆ.

ಅಮೆರಿಕದಲ್ಲಿ ಈಗಾಗಲೇ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ದೊರೆತಿದೆ. 12-15 ವಯಸ್ಸಿನ ಮಕ್ಕಳಿಗೆ ಮೇ 14ರಿಂದ ಲಸಿಕೆ ನೀಡಲು ಆರಂಭಿಸಲಾಗಿದೆ. ಅಮೆರಿಕಕ್ಕೂ ಮೊದಲು ಕೆನಡಾ ಮಕ್ಕಳಿಗೆ ಫೈಜರ್ ಬಯೋ ಎನ್‌ಟೆಕ್ ಲಸಿಕೆ ನೀಡಲು ಆರಂಭಿಸಿದೆ. ಯುರೋಪಿಯನ್ ಮೆಡಿಕಲ್ ಏಜೆನ್ಸಿ ಕೂಡ ಮಕ್ಕಳಿಗೆ ಫೈಜರ್ ನೀಡುವತ್ತ ಚಿಂತನೆ ನಡೆಸಿದೆ.

ಭಾರತದಲ್ಲಿಯೂ ಈ ಕುರಿತು ಚರ್ಚೆ ನಡೆದಿದ್ದು, 2 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಪ್ರಯೋಗ ನಡೆಸಲು ಕೋವ್ಯಾಕ್ಸಿನ್, ಭಾರತ್ ಬಯೋಟೆಕ್‌ಗೆ ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಶಾಲೆ, ಕಾಲೇಜುಗಳು ತೆರೆಯುವುದರಿಂದ 18 ವರ್ಷದ ಒಳಗಿನವರಿಗೂ ಲಸಿಕೆ ನೀಡುವ ಅಗತ್ಯವನ್ನು ತಜ್ಞರು ಎತ್ತಿ ತೋರಿದ್ದಾರೆ.

English summary
Congress leader Rahul Gandhi questions central government on the country’s preparedness in tackling Covid-19 in children through vaccination
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X