ಕೇಜ್ರಿವಾಲ್ ಮೇಲಿನ ಆರೋಪದ ಬಗ್ಗೆ ರಾಹುಲ್ ಹೇಳಿದ್ದೇನು?
ಇತ್ತೀಚೆಗೆಷ್ಟೇ, ದೆಹಲಿ ಮಂತ್ರಿ ಮಂಡಲದಿಂದ ಹೊರದಬ್ಬಲ್ಪಟ್ಟ ಕಪಿಲ್ ಮಿಶ್ರಾ ಅವರು, ಅರವಿಂದ್ ಕೇಜ್ರಿವಾಲ್ ವಿರುದ್ಧ ನೀರಿನ ಟ್ಯಾಂಕರ್ ಹಗರಣದ ಆರೋಪ ಮಾಡಿದ್ದರು.
ನವದೆಹಲಿ, ಮೇ 8: ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಳಿಬಂದಿರುವ ಹಗರಣಗಳ ಆರೋಪದ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವ ಅವರು, ''ಸತ್ಯಕ್ಕೆ ಬಚ್ಚಿಟ್ಟುಕೊಳ್ಳುವ ಗುಣವಿರುವುದಿಲ್ಲ. ಕೆಲ ಕಾಲ ಅದು ಕೆಲವರ ಷಡ್ಯಂತ್ರಗಳಿಂದ ಮುಚ್ಚಿಡಲ್ಪಟ್ಟರೂ ಕೆಲ ಕಾಲ ಕಳೆದ ಮೇಲೆ ಒಂದಿಲ್ಲೊಂದು ದಿನ ಅದು ಹೊರಗೆ ಬಂದೇ ಬರುತ್ತದೆ'' ಎಂದಿದ್ದಾರೆ.[ಕೇಜ್ರಿವಾಲ್ ವಿರುದ್ಧ ಮತ್ತೊಂದು ಹಗರಣದ ಆರೋಪ]

ಇತ್ತೀಚೆಗೆಷ್ಟೇ, ದೆಹಲಿ ಮಂತ್ರಿ ಮಂಡಲದಿಂದ ಹೊರದಬ್ಬಲ್ಪಟ್ಟ ಕಪಿಲ್ ಮಿಶ್ರಾ ಅವರು, ಅರವಿಂದ್ ಕೇಜ್ರಿವಾಲ್ ವಿರುದ್ಧ ನೀರಿನ ಟ್ಯಾಂಕರ್ ಹಗರಣದ ಆರೋಪ ಮಾಡಿದ್ದರು. ಆಪ್ ಸರ್ಕಾರದ ಮತ್ತೊಬ್ಬ ಸಚಿವರಾದ ಸತ್ಯೇಂದ್ರ ಜೈನ್ ಅವರಿಂದ ಕೇಜ್ರಿವಾಲ್ 2 ಕೋಟಿ ರು. ಲಂಚ ಪಡೆದಿದ್ದಾರೆಂದು ಆರೋಪಿಸಿದ್ದರು.[ಏನಿದು ಎಎಪಿ ಸರಕಾರವನ್ನೇ ನಡುಗಿಸಿದ 'ವಾಟರ್ ಟ್ಯಾಂಕರ್ ಸ್ಕ್ಯಾಮ್'?]
The thing I like about the truth is, it has a habit of coming outhttps://t.co/ktaWgvJDRN
— Office of RG (@OfficeOfRG) May 8, 2017












Click it and Unblock the Notifications