• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ವಿರುದ್ಧ ಹರಿಹಾಯ್ದು, ಮ.ಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕೆ ರಾಹುಲ್ ಚಾಲನೆ

|
   ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ | Oneindia Kannada

   ಚಿತ್ರಕೂಟ (ಮಧ್ಯಪ್ರದೇಶ), ಸೆಪ್ಟೆಂಬರ್ 27: ವಿಧಾನಸಭೆ ಚುನಾವಣೆ ಸಮೀಪದಲ್ಲಿರುವ ಮಧ್ಯಪ್ರದೇಶ ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದು, ಅಲ್ಲಿಯೂ ಸಹ ರಫೆಲ್‌ ಸೇರಿದಂತೆ ಹಲವು ವಿಷಯವನ್ನಿಟ್ಟುಕೊಂಡು ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

   ರಾಹುಲ್ ಅವರು ಎರಡು ದಿನಗಳ ಕಾಲ ಮಧ್ಯಪ್ರದೇಶದಲ್ಲಿ ಇರಲಿದ್ದು, ಮೊದಲ ದಿನವಾದ ಇಂದು ಚಿತ್ರಕೂಟದ ಕಮಡಗಿರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರು ಅವರ ಜತೆ ಇದ್ದರು.

   ಚಿತ್ರಕೂಟದಲ್ಲಿ ಬೃಹತ್ rally ಉದ್ದೇಶಿಸಿ ಮಾತನಾಡಿದ ರಾಹುಲ್, ಚೀನಾದ ಯುವಕನೋರ್ವ ತನ್ನ ಮೊಬೈಲ್‌ನಿಂದ ಸೆಲ್ಫಿ ತೆಗೆದುಕೊಂಡು, ಮೊಬೈಲ್ ತಿರುಗಿಸಿ ನೋಡಿದರೆ ಅಲ್ಲಿ ಬರೆದಿರುವ 'ಮೇಡ್ ಇನ್ ಚಿತ್ರಕೂಟ' ಹೆಸರು ನೋಡಿ ಆಶ್ಚರ್ಯ ಪಡಬೇಕು, ಅಂತಹಾ ದಿನಗಳನ್ನು ನೋಡಲು ನಾನು ಕಾಯುತ್ತಿದ್ದೇನೆ ಎಂದು ಅವರು ಹೇಳಿದರು.

   ತೆಲಂಗಾಣ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಅಗ್ನಿ ಪರೀಕ್ಷೆ

   ಭಾರತದ ಯುವಕರಿಗೆ ಅವಕಾಶಗಳು ಕಡಿಮೆ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮೋದಿ ಸರ್ಕಾರದ ನೀತಿಗಳಿಂದ ವಿದೇಶದ ಯುವಕರಿಗೆ ಅವಕಾಶ ಸಿಗುತ್ತಿದೆಯೇ ಹೊರತು ನಮ್ಮ ಯುವಕರಿಗಲ್ಲ ಎಂದು ಅವರು ಹೇಳಿದರು.

   ಮೋದಿ ಅವರು ನಿರ್ಮಿಸುತ್ತಿರುವ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆ ಇಂದಲೂ ಸಹ ಚೀನಾಕ್ಕೆ ಲಾಭವಾಗುತ್ತಿದೆಯೇ ಹೊರತು ನಮಗಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆಯನ್ನು ಚೀನಾ ನಿರ್ಮಿಸುತ್ತಿದೆ ಎಂದು ಅವರು ಹೊಸ ವಿಷಯವೊಂದರ ಬಗ್ಗೆ ಗಮನ ಸೆಳೆದರು.

   ಅಲುಗಾಡುತ್ತಿದ್ದ ಕುಮಾರಸ್ವಾಮಿ ಸರ್ಕಾರಕ್ಕೆ ಟಾನಿಕ್ ಆದ ದೇವೇಗೌಡರ ಟೆಕ್ನಿಕ್

   ರಫೆಲ್‌ ಡೀಲ್‌ ಬಗ್ಗೆ ಮತ್ತೆ ಅಬ್ಬರಿಸಿದ ರಾಹುಲ್ ಗಾಂಧಿ ಮೋದಿ ಅವರು ನಮ್ಮ ದೇಶದ ಯುವಕರಿಗೆ ಬಡವರಿಗೆ ಸೇರಬೇಕಿದ್ದ ಹಣವನ್ನು ತೆಗೆದುಕೊಂಡು ಹೋಗಿ ಅನಿಲ್ ಅಂಬಾನಿಯ ಜೇಬಿನಲ್ಲಿರಿಸಿದ್ದಾರೆ ಎಂದರು. ಮೋದಿ ಅವರು ಅವರ ಮೇಲೆ ದೇಶ ಇಟ್ಟಿದ್ದ ನಂಬಿಕೆಯನ್ನು ಮುರಿದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

   ಮಧ್ಯಪ್ರದೇಶದಲ್ಲಿ ಸೃಷ್ಠಿಯಾಗಿರುವ ಕೃಷಿ ಬಿಕ್ಕಟ್ಟಿನ ಬಗ್ಗೆಯೂ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು 70000 ಕೋಟಿ ಮೊತ್ತದ ಕೃಷಿ ಸಾಲಮನ್ನಾ ಮಾಡಿತು. ಆದರೆ ಮೋದಿ ಅವರು ಕೃಷಿಕರಿಗಾಗಿ, ಬಡವರಿಗಾಗಿ, ನಿರುದ್ಯೋಗಿಗಳಿಗಾಗಿ ಏನನ್ನೂ ಮಾಡಲಿಲ್ಲ ಎಂದರು.

   ಬಡವರ, ಕೃಷಿಕರ, ಯುವಕರ ಖಾತೆಗೆ 15 ಲಕ್ಷ ಹಣ ಹಾಕುತ್ತಾರೆ ಎಂತಲೋ, ಉದ್ಯೋಗಗಳನ್ನು ಸೃಷ್ಠಿಸುತ್ತಾರೆ ಎಂತಲೋ ದೇಶದ ಜನ ಮೋದಿಗೆ ಮತ ಹಾಕಿದರು ಆದರೆ ಅವರು ಜನರ ವಿಶ್ವಾಸ ಉಳಿಸಿಕೊಳ್ಳಲಿಲ್ಲ ಎಂದು ಅವರು ಹೇಳಿದರು.

   English summary
   AICC president Rahul Gandhi lambasted n Narendra Modi in Madya Pradesh's Chitrakut. He said Modi breaks trust of country. He said Youth of the nation not getting anything from the government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X