ಚೀನಾಕ್ಕೆ ಸಹಾಯ ಮಾಡುತ್ತಿರುವ ಸಿಂಗ್‌ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ರಾಹುಲ್ ಗಾಂಧಿ
ನವದೆಹಲಿ, ಫೆಬ್ರವರಿ 9: ಚೀನಾದೊಂದಿಗಿನ ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಅವರನ್ನು ಕೇಂದ್ರದ ಸಚಿವ ಸ್ಥಾನದಿಂದ ಕಿತ್ತು ಹಾಕುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ವಿ.ಕೆ ಸಿಂಗ್ ಅವರು ಭಾರತದ ವಿರುದ್ಧವೇ ಚೀನಾಕ್ಕೆ ನೆರವು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸಿಂಗ್ ಹೇಳಿಕೆಗೆ ಚೀನಾ ಪ್ರತಿಕ್ರಿಯೆ ಇರುವ ಪತ್ರಿಕಾ ವರದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, 'ಭಾರತದ ವಿರುದ್ಧವಾಗಿ ಬಿಜೆಪಿ ಸಚಿವರು ಚೀನಾಕ್ಕೆ ಏಕೆ ನೆರವು ನೀಡುತ್ತಿದ್ದಾರೆ? ಅವರನ್ನು ಕಿತ್ತು ಹಾಕಬೇಕು. ಅವರನ್ನು ಕಿತ್ತು ಹಾಕದೆ ಇರುವುದು ಎಂದರೆ ಭಾರತದ ಪ್ರತಿ ಯೋಧರನ್ನೂ ಅವಮಾನಿಸಿದಂತೆ' ಎಂದು ಟ್ವೀಟ್ ಮಾಡಿದ್ದಾರೆ.
ಅರಿಯದೆ ತಪ್ಪೊಪ್ಪಿಕೊಂಡ ಭಾರತ: ವಿಕೆ ಸಿಂಗ್ ಹೇಳಿಕೆಗೆ ಚೀನಾ ಎದಿರೇಟು
ಕಳೆದ ಭಾನುವಾರ ಮಧುರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್, ಚೀನಾಕ್ಕಿಂತಲೂ ಹೆಚ್ಚು ಬಾರಿ ಭಾರತದ ಸೇನೆಯು ಎಲ್‌ಎಸಿ ಗಡಿಯನ್ನು ದಾಟಿ ಅತಿಕ್ರಮಣ ಮಾಡಿದೆ ಎಂದು ಹೇಳಿಕೆ ನೀಡಿದ್ದರು. ಮುಂದೆ ಓದಿ.

ವಿಕೆ ಸಿಂಗ್ ಹೇಳಿದ್ದೇನು?
'ಚೀನಾ ಎಲ್‌ಎಸಿ ಕುರಿತಾದ ತನ್ನದೇ ಗ್ರಹಿಕೆಯೊಂದಿಗೆ ಅನೇಕ ಬಾರಿ ಅತಿಕ್ರಮಣ ಮಾಡಿದೆ. ಅದೇ ರೀತಿ ನಮ್ಮ ಗ್ರಹಿಕೆಗೆ ಅನುಗುಣವಾಗಿ ನಾವು ಕೂಡ ಅನೇಕ ಬಾರಿ ಮಾಡಿದ್ದೇವೆಯೋ ನಿಮಗೆ ತಿಳಿದಿಲ್ಲ. ಚೀನಾದ ಮಾಧ್ಯಮಗಳು ಇದನ್ನು ವರದಿ ಮಾಡುವುದಿಲ್ಲ. ನಿಮಗೆ ಭರವಸೆ ನೀಡುತ್ತೇನೆ, ಚೀನಾ ಹತ್ತು ಬಾರಿ ಗಡಿ ದಾಟಿ ಬಂದಿದ್ದರೆ, ನಾವು ಕನಿಷ್ಠ 50 ಬಾರಿ ಅದನ್ನು ಮಾಡಿರುತ್ತೇವೆ' ಎಂದು ವಿಕೆ ಸಿಂಗ್ ತಿಳಿಸಿದ್ದರು.
|
ಭಾರತೇ ಮೂಲ ಕಾರಣ
'ಇದು ಭಾರತದ ಕಡೆಯಿಂದ ಅರಿವಿಲ್ಲದೆ ಮಾಡಿರುವ ತಪ್ಪೊಪ್ಪಿಗೆ. ಬಹಳ ಕಾಲದಿಂದ ಭಾರತವು ಚೀನಾದ ಭಾಗಗಳನ್ನು ಅತಿಕ್ರಮಿಸುವ ಪ್ರಯತ್ನವಾಗಿ ಗಡಿಯನ್ನು ದಾಟಿ ಬರುವ ಕೃತ್ಯಗಳನ್ನು ಮಾಡಿದೆ. ಈ ಮೂಲಕ ನಿರಂತರವಾಗಿ ವಿವಾದ ಹಾಗೂ ಘರ್ಷಣೆಗಳನ್ನು ಸೃಷ್ಟಿಸುತ್ತಲೇ ಇದೆ. ಇದು ಚೀನಾ-ಭಾರತ ಗಡಿ ವಿವಾದಕ್ಕೆ ಮೂಲ ಕಾರಣ' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಪ್ರತಿಕ್ರಿಯೆ ನೀಡಿದ್ದರು.
ಅರಿಯದೆ ತಪ್ಪೊಪ್ಪಿಕೊಂಡ ಭಾರತ: ವಿಕೆ ಸಿಂಗ್ ಹೇಳಿಕೆಗೆ ಚೀನಾ ಎದಿರೇಟು

ಭಾರತ ಒಪ್ಪಂದ ಪಾಲಿಸಲಿ
'ಚೀನಾದೊಂದಿಗೆ ಮಾಡಿಕೊಂಡಿರುವ ಒಮ್ಮತ, ಒಪ್ಪಂದಗಳು ಹಾಗೂ ಕರಾರುಗಳನ್ನು ಭಾರತ ಪಾಲಿಸಬೇಕು ಮತ್ತು ಪ್ರಬಲ ಕ್ರಿಯೆಯ ಮೂಲಕ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಎತ್ತಿಹಿಡಿಯಬೇಕು' ಎಂದು ಅವರು ಆಗ್ರಹಿಸಿದ್ದರು.

ಗಡಿಯಲ್ಲಿ ಶಾಂತಿ ಇಲ್ಲ
ಚೀನಾ ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಗಡಿಯಲ್ಲಿ ಶಾಂತಿಯೇ ಇಲ್ಲದಂತಾಗಿದೆ. ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆಯ ಯಥಾಸ್ಥಿತಿ ಬದಲಿಸುವ ಚೀನಾ ಯತ್ನವು ಗಡಿಯಲ್ಲಿ ನೆಮ್ಮದಿಯನ್ನು ಕದಡಿದೆ. ಭಾರತೀಯ ಸೇನೆಯು ಇದಕ್ಕೆ ತಕ್ಕ ಉತ್ತರವನ್ನು ನೀಡಿದೆ, ಯಥಾಸ್ಥಿತಿಯನ್ನು ಬದಲಿಸುವ ಯಾವುದೇ ಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಹೇಳಿದ್ದರು.