ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ಯಾತ್ರೆ: ರಾಹುಲ್‌ಗೆ ಸಾಥ್ ನೀಡುತ್ತಾರಾ ಉದ್ಧವ್ ಠಾಕ್ರೆ?

|
Google Oneindia Kannada News

ಮುಂಬೈ, ನ.07: ಸುಮಾರು ಎರಡು ತಿಂಗಳ ಕಾಲ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಸಂಚರಿಸಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸೋಮವಾರ ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಪ್ರವೇಶಿಸಲಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಸೋಮವಾರ ನಾಂದೇಡ್ ಮೂಲಕ ಮಹಾರಾಷ್ಟ್ರ ಪ್ರವೇಶಿಸಲು ಸಿದ್ಧವಾಗಿದೆ.

Himachal Pradesh Elections 2022: ರಾಹುಲ್ ಗಾಂಧಿ ಪ್ರಚಾರHimachal Pradesh Elections 2022: ರಾಹುಲ್ ಗಾಂಧಿ ಪ್ರಚಾರ

ಮಹಾರಾಷ್ಟ್ರದಲ್ಲಿ ಈಗಾಗಲೇ ಯಾತ್ರೆ ಬಗ್ಗೆ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಎನ್‌ಸಿಪಿ ನಾಯಕ ಶರ್ ಪವಾರ್ ರಾಹುಲ್ ಜೊತೆಗೆ ಹೆಜ್ಜೆ ಹಾಕುವುದಾಗಿ ತಿಳಿಸಿದ್ದಾರೆ. ಆದರೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಭಾರತ್ ಜೋಡೋನಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಇನ್ನೂ ತಿಳಿದು ಬಂದಿಲ್ಲ.

ಭಾರತ್ ಜೋಡೋ ಯಾತ್ರೆ ಸೋಮವಾರ ಬೆಳಗ್ಗೆ ತೆಲಂಗಾಣದ ಕಾಮರೆಡ್ಡಿಯಿಂದ ಹೊರಟಿದೆ. ಸಂಜೆ ವೇಳೆಗೆ ಯಾತ್ರೆಯು ತೆಲಂಗಾಣದ ಗಡಿಯಲ್ಲಿರುವ ನಾಂದೇಡ್ ಜಿಲ್ಲೆಯ ಮದ್ನೂರ್ ನಾಕಾವನ್ನು ತಲುಪಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಐದು ರಾಜ್ಯಗಳನ್ನು ಸುತ್ತಿರುವ ಭಾರತ್ ಜೋಡೋ ಯಾತ್ರೆ

ಐದು ರಾಜ್ಯಗಳನ್ನು ಸುತ್ತಿರುವ ಭಾರತ್ ಜೋಡೋ ಯಾತ್ರೆ

'ಭಾರತ್ ಜೋಡೋ ಯಾತ್ರೆ' ತಮಿಳುನಾಡಿನಿಂದ ಪ್ರಾರಂಭವಾಗಿದ್ದು, ಮಹಾರಾಷ್ಟ್ರವನ್ನು ಪ್ರವೇಶಿಸುವ ಮುನ್ನ ದಕ್ಷಿಣ ಭಾರತದ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಮೂಲಕ ಸಾಗಿದೆ. ಯಾತ್ರೆಯ ವೇಳೆ ರಾಹುಲ್ ಗಾಂಧಿಯವರಿಗೆ ಬೃಹತ್ ಜನಸಮೂಹ ಸಾಥ್ ನೀಡಿದೆ. ಮಹಾರಾಷ್ಟ್ರದಲ್ಲಿಯೂ ಇದೇ ರೀತೀಯ ಜನ ಸೇರುವ ನಿರೀಕ್ಷೆಯಿದೆ.

ತೆಲಂಗಾಣದ ದೇಗ್ಲೂರ್ ಪಟ್ಟಣದ ಗಿರಣಿ ಮೈದಾನದಲ್ಲಿ ರಾತ್ರಿ ವಿಶ್ರಾಂತಿ ಪಡೆದ ನಂತರ, ರಾಹುಲ್ ಗಾಂಧಿ ಅವರು ಮಂಗಳವಾರ ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯಲಿರುವ ಯಾತ್ರೆಯ ವೇಳೆ ರಾಹುಲ್, ಆರು ಲೋಕಸಭೆ ಮತ್ತು 15 ವಿಧಾನಸಭಾ ಕ್ಷೇತ್ರಗಳ ಮೂಲಕ 381 ಕಿ.ಮೀ. ಪಾದಯಾತ್ರೆ ಮಾಡಲಿದ್ದಾರೆ.

ಫಿಟ್‌ನೆಸ್, ವಿನಯವಂತಿಕೆಯಿಂದ ಮೆಚ್ಚುಗೆ ಗಳಿಸಿರುವ ರಾಹುಲ್

ಫಿಟ್‌ನೆಸ್, ವಿನಯವಂತಿಕೆಯಿಂದ ಮೆಚ್ಚುಗೆ ಗಳಿಸಿರುವ ರಾಹುಲ್

ರಾಜ್ಯದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ರಾಹುಲ್ ಗಾಂಧಿ ಭಾರತ್ ಜೋಡೋವನ್ನು ಮುನ್ನಡೆಸಲಿದ್ದಾರೆ. ಪ್ರತಿದಿನ ಬೆಳಗ್ಗೆ 6 ರಿಂದ ನಾಲ್ಕು ಗಂಟೆಗಳ ಬೆಳಗಿನ ವೇಳಾಪಟ್ಟಿ ಮತ್ತು ಸಂಜೆ 4.30 ರಿಂದ ಮೂರು ಗಂಟೆಗಳ ವೇಳಾಪಟ್ಟಿಯನ್ನು ತಯಾರಿಸಲಾಗಿದೆ. ಸುಮಾರು 22-25 ಕಿ.ಮೀ. ಮಾರ್ಗದಲ್ಲಿ ಗ್ರಾಮಗಳು, ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳಲ್ಲಿ ಸಂಚರಿಸಲಿದ್ದಾರೆ.

ಸಂಸದರು ಈಗಾಗಲೇ ತಮ್ಮ ಸೌಮ್ಯ ಸ್ವಭಾವ, ವಿನಯವಂತಿಕರ, ಒಳ್ಳೆ ಫಿಟ್‌ನೆಸ್ ಮತ್ತು ಚುರುಕಾದ ನಡಿಗೆಯ ಶೈಲಿಗೆಗೆ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಪಾದಯಾತ್ರೆ ಮಾರ್ಗದಲ್ಲಿ ವಿವಿದ ಸ್ಥಳಗಳಲ್ಲಿ ಎರಡು ಪ್ರಮುಖ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಗಳಲ್ಲಿ ರಾಜ್ಯದಾದ್ಯಂತ ಹಲವಾರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಠಾಕ್ರೆ ಬಣದಿಂದ ಯಾತ್ರೆಗೆ ತೆರಳಲಿರುವ ಹಲವು ಪ್ರಮುಖ ನಾಯಕರು

ಠಾಕ್ರೆ ಬಣದಿಂದ ಯಾತ್ರೆಗೆ ತೆರಳಲಿರುವ ಹಲವು ಪ್ರಮುಖ ನಾಯಕರು

ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಶಿವಸೇನೆಯನ್ನು ಒಳಗೊಂಡಿರುವ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ನಾಯಕರು ವಿವಿಧ ಹಂತಗಳಲ್ಲಿ ಭಾರತ್ ಜೋಡೋ ಯಾತ್ರೆಗೆ ಸೇರಲಿದ್ದಾರೆ.

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಗಾಂಧಿಯವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬದ್ಧರಾಗಿದ್ದರೂ, ಈಗ ಅವರ ಸೂಕ್ಷ್ಮ ಆರೋಗ್ಯ ಸ್ಥಿತಿಯನ್ನು ಗಮನಿಸಿದರೆ ಪಾದಯಾತ್ರೆಗೆ ಸೇರುವ ಸಾಧ್ಯತಯಿಲ್ಲ. ಆದರೆ ಶಿವಸೇನಾ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಯಾತ್ರೆಯನ್ನು ಸ್ವಾಗತಿಸಲು ಹಿರಿಯ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಮಾಡಬಹುದು ಎನ್ನಲಾಗಿದೆ.

ಶಿವಸೇನೆಯ ಉಧವ್ ಬಾಳಾಸಾಹೇಬ್ ಠಾಕ್ರೆ ಬಣದಿಂದ ಅರವಿಂದ್ ಸಾವಂತ್ ಮತ್ತು ಮನೀಶಾ ಕಾಯಂದೆ ಯಾತ್ರೆಗೆ ಸೇರಲಿದ್ದಾರೆ.

ನಾನಾ ಪಟೋಲೆ, ಬಾಳಾಸಾಹೇಬ್ ಥೋರಟ್, ಭೈಜಗ್ತಾಪ್, ಅಶೋಕ್ ಚವ್ಹಾಣ್ ಸೇರಿದಂತೆ ಹಲವು ದೊಡ್ಡ ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಗೆ ಸೇರಲಿದ್ದಾರೆ.

ರಾಹುಲ್‌ಗೆ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಮುಖಂಡರ ಸಾಥ್

ರಾಹುಲ್‌ಗೆ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಮುಖಂಡರ ಸಾಥ್

ಭಾರತ್ ಜೋಡೋ ಯಾತ್ರೆಗೆ ದೇಶಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ದಿನದಿಂದ ದಿನಕ್ಕೆ ಪ್ರತಿಕ್ರಿಯೆ ಹೆಚ್ಚುತ್ತಿದೆ. ಮಹಾರಾಷ್ಟ್ರದಲ್ಲಿಯೂ ಎನ್‌ಸಿಪಿ ಮತ್ತು ಶಿವಸೇನೆ (ಠಾಕ್ರೆ ಬಣ) ಯಾತ್ರೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದು, ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ.

ನಾಂದೇಡ್, ಹಿಂಗೋಲಿ, ವಾಶಿಮ್, ಅಕೋಲಾ ಮತ್ತು ಬುಲ್ಧಾನ ಜಿಲ್ಲೆಗಳ ಮೂಲಕ ನಡೆದ ಯಾತ್ರೆ ನಂತರ, ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ. ಆದರೂ ಸ್ಥಳೀಯ ನಾಯಕರ ಬೇಡಿಕೆಗಳ ನಂತರ ವೇಳಾಪಟ್ಟಿಯನ್ನು ತಿರುಚಲು ಮತ್ತು ಮಹಾರಾಷ್ಟ್ರದಲ್ಲಿ ಇನ್ನೂ ಮೂರು ದಿನಗಳನ್ನು ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಯಾಗಿದೆ.


ನವೆಂಬರ್ 10 ರಂದು ನಾಂದೇಡ್ ಮತ್ತು ನವೆಂಬರ್ 18 ರಂದು ಬುಲ್ಧಾನದಲ್ಲಿ ರಾಹುಲ್ ಗಾಂಧಿ ಎರಡು ದೊಡ್ಡ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಲ್ಲದೆ ಪಾದಯಾತ್ರೆ ಸಮಯದಲ್ಲಿ ರಾಹುಲ್ ಗಾಂಧಿ ದೈನಂದಿನ ಸಣ್ಣ ಸಭೆಗಳನ್ನು ನಡೆಸುತ್ತಾರೆ. ಸ್ಥಳೀಯ ಜನರೊಂದಿಗೆ ವೈಯಕ್ತಿಕ ಸಂವಾದಗಳು, ಪೂರ್ವಸಿದ್ಧತೆಯಿಲ್ಲದ ಬೀದಿ ಸಭೆಗಳು, ಜನಸಾಮಾನ್ಯರೊಂದಿಗೆ ಬೆರೆಯುವುದು, ಅವರ ಕಾಳಜಿಗಳನ್ನು ಚರ್ಚಿಸುವುದು, ಹಣದುಬ್ಬರ, ನಿರುದ್ಯೋಗ, ಏರುತ್ತಿರುವ ಇಂಧನ ಬೆಲೆಗಳು, ಮಹಿಳೆಯರ ಸುರಕ್ಷತೆ, ಇತ್ಯಾದಿ ವಿಷಯಗಳ ಬಗ್ಗೆ ಮಾತನಾಡುತ್ತಾರೆ.

English summary
Congress's Bharat Jodo Yatra to enter Maharashtra Nanded Monday, suspense continues over Shiv Sena chief Uddhav Thackery's participation. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X