ಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್: ರಾಹುಲ್ ಗಾಂಧಿ ವಾಗ್ದಾಳಿ

ಜಿಎಸ್ ಟಿ ಅಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎನ್ನುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರ ಕೈಗೊಂಡಿರುವ ರಾಹುಲ್ ಗಾಂಧಿ ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ.

* ಬಿಜೆಪಿ ಹಾಕಿರುವ ಜಿಎಸ್ ಟಿ ಅಂದರೆ ಅದು ಗಬ್ಬರ್ ಸಿಂಗ್ ಟ್ಯಾಕ್ಸ್.

* ಸರಕಾರವು ಜಿಎಸ್ ಟಿಯನ್ನು ಸರಳ ಮಾಡಬೇಕು.

Rahul Gandhi attacks BJP, says GST is Gabbar Singh Tax

* ಜಿಎಸ್ ಟಿ ಜಾರಿಗೆ ಮುನ್ನ ಅದರ ಪರೀಕ್ಷಾರ್ಥ ಪ್ರಯೋಗ ಆಗಬೇಕು, ಇಲ್ಲದಿದ್ದರೆ ಇದರಿಂದ ನಷ್ಟವಾಗುತ್ತದೆ ಎಂದು ಸರಕಾರಕ್ಕೆ ಹೇಳಿದ್ದೆವು.

* ಕಾಂಗ್ರೆಸ್ ಮೆದುಳಿನಿಂದ ಹುಟ್ಟಿದ ಕೂಸು ಜಿಎಸ್ ಟಿ. ಐದು ಸ್ಲ್ಯಾಬ್ ಬೇಡ ಎಂದು ಬಿಜೆಪಿಗೆ ತಿಳಿಸಿದ್ದೆವು. ಆದರೆ ಜಿಎಸ್ ಟಿ ಜಾರಿ ವಿಚಾರದಲ್ಲಿ ಕೇಂದ್ರ ಸರಕಾರ ಹಠಮಾರಿ ಧೋರಣೆ ತಳೆಯಿತು.

* ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಮಾಡುತ್ತಾರೆ. ನಾನಿವತ್ತು ಗುಜರಾತ್ ನ ಮನ್ ಕೀ ಬಾತ್ ಹೇಳುತ್ತಿದ್ದೀನಿ.

* ಪ್ರತಿ ಸಲ ನೀವು ಸೆಲ್ಫಿ ತೆಗೆದುಕೊಳ್ತೀರಲ್ಲಾ, ಆಗೆಲ್ಲ ಚೀನಾದ ಯುವಕ/ಯುವತಿ ಕೆಲಸ ಪಡೆಯುತ್ತಾರೆ.

* ನ್ಯಾನೋ ಉತ್ಪಾದನೆ ಮಾಡುವ ಕಂಪನಿಗೆ ಅವರು ಮೂವತ್ತರಿಂದ ಮೂವತ್ತೈದು ಕೋಟಿ ನೀಡಿದ್ದಾರೆ. ಆ ಮೊತ್ತವೇ ಸಾಕಿತ್ತು, ರೈತರ ಸಾಲ ಮನ್ನಾ ಮಾಡಬಹುದಿತ್ತು.

* ಈ ದೇಶದಲ್ಲಿ ಶ್ರೀಮಂತರ ಸಾಲ ಮನ್ನಾ ಆಗುತ್ತದೆ, ರೈತರು ಕಷ್ಟ ಅನುಭವಿಸುತ್ತಾರೆ.

* ಈ ಸರಕಾರವು ಗುಜರಾತ್ ನ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ.

* ಗುಜರಾತ್ ಜನರನ್ನು ನೀವು ಖರೀದಿಸಲು ಸಾಧ್ಯವಿಲ್ಲ. ಇಡೀ ಜಗತ್ತಿನ ಹಣವನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದರೂ ಅದು ಸಾಧ್ಯವಿಲ್ಲ.

* ಕಳೆದ ಇಪ್ಪತ್ತೆರಡು ವರ್ಷಗಳಿಂದ ಐದಾರು ಕೈಗಾರಿಕೋದ್ಯಮಿಗಳು ಗುಜರಾತ್ ಸರಕಾರವನ್ನು ನಡೆಸುತ್ತಿದ್ದಾರೆ.

* ಈ ಸಲ ಗುಜರಾತ್ ನಲ್ಲಿ ಕಾಂಗ್ರೆಸ್ ಸರಕಾರ ಬರುತ್ತದೆ. ನಾವು ನೂರಿಪ್ಪತ್ತೈದಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+