ರಾಜ್ಯಸಭೆಗೆ ಚುನಾವಣೆ: ಎಎಪಿ ಆಫರ್ ತಿರಸ್ಕರಿಸಿದ ರಘುರಾಮ್ ರಾಜನ್
ನವದೆಹಲಿ, ನವೆಂಬರ್ 9: ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಎಎಪಿ ನೀಡಿದ ಆಹ್ವಾನವನ್ನು ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ನಯವಾಗಿ ತಿರಸ್ಕರಿಸಿದ್ದಾರೆ.
ಈ ಸಂಬಂಧ 'ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿರುವ ರಾಜನ್, ಶಿಕಾಗೊ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ವೃತ್ತಿ ಬಿಟ್ಟು ಬರುವ ಯಾವುದೇ ಯೋಚನೆ ಇಲ್ಲ ಎಂದಿದ್ದಾರೆ.

2018ರ ಜನವರಿಯಲ್ಲಿ ಮೂರು ರಾಜ್ಯಸಭೆ ಸ್ಥಾನಗಳು ತೆರವಾಗಲಿದೆ. ದೆಹಲಿ ವಿಧಾನಸಭೆಯಲ್ಲಿ ಎಎಪಿಗೆ ಇರುವ ಸದಸ್ಯಬಲದ ಆಧಾರದ ಮೂರೂ ಸ್ಥಾನಗಳು ಆ ಪಕ್ಷದ ಪಾಲಾಗಲಿವೆ. ಹೀಗಾಗಿ ಈ ರಘುರಾಮ್ ರಾಜನ್ ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲು ಆಮ್ ಆದ್ಮಿ ಪಕ್ಷ ಮುಂದಾಗಿತ್ತು.
ಮೂರೂ ಸ್ಥಾನಗಳಿಗೆ ಪಕ್ಷದ ಹೊರಗಿನವರನ್ನು ನಾಮನಿರ್ದೇಶನ ಮಾಡಲು ಅರವಿಂದ ಕೇಜ್ರಿವಾಲ್ ಬಯಸಿದ್ದಾರೆ. ರಘುರಾಮ್ ರಾಜನ್ ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಬುಧವಾರ ವರದಿಯಾಗಿತ್ತು. ಆದರೆ ಇದೀಗ ರಾಜನ್ ರಾಜ್ಯಸಭೆ ಪ್ರವೇಶದಿಂದ ಹಿಂದೆ ಸರಿದಿದ್ದಾರೆ.
ರಾಜನ್ ಅವರು ಸದ್ಯ ಶಿಕಾಗೊ ವಿಶ್ವವಿದ್ಯಾನಿಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‍ನಲ್ಲಿ ಪ್ರಾಧ್ಯಾಪಕರಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.












Click it and Unblock the Notifications