• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

By ಪ್ರಖರ್ ಗುಪ್ತಾ
|

ನವದೆಹಲಿ, ಸೆಪ್ಟೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು 2015ರ ಏಪ್ರಿಲ್‌ನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಅವರೊಂದಿಗೆ ನಡೆಸಿದ ಮಾತುಕತೆ ಬಳಿಕ 36 ರಫೇಲ್ ಜೆಟ್‌ ಖರೀದಿಯನ್ನು ಪ್ರಕಟಿಸಿದ್ದರು.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

2016ರ ಜನವರಿಯಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಲು ಒಲಾಂಡ್ ನವದೆಹಲಿಗೆ ಆಗಮಿಸಿದ್ದಾಗ ಈ ಒಪ್ಪಂದವನ್ನು ಅಂತಿಮಗೊಳಿಸಲಾಗಿತ್ತು.

ರಫೇಲ್ ಡೀಲ್ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಹೇಳಿದ ಸ್ಫೋಟಕ ಸಂಗತಿ

ಇದಕ್ಕೂ ಮುನ್ನ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಫ್ರಾನ್ಸ್‌ನ ದಸಾಲ್ಟ್ ಏವಿಯೇಷನ್ ಕಂಪೆನಿಯೊಂದಿಗೆ ವ್ಯವಹಾರ ನಡೆಸಿ 126 ಯುದ್ಧ ವಿಮಾನಗಳಿಗೆ ಒಪ್ಪಂದ ನಡೆಸಿತ್ತು. ಇವುಗಳಲ್ಲಿ 18 ವಿಮಾನಗಳು ಹಾರಾಟಕ್ಕೆ ಸಿದ್ಧವಾದ ಸ್ಥಿತಿಯಲ್ಲಿ ಪೂರೈಕೆಯಾಗುವುದಾದರೆ, ಇನ್ನು 108 ಯುದ್ಧ ವಿಮಾನಗಳನ್ನು ಎಚ್ಎಎಲ್ ಸಹಭಾಗಿತ್ವದೊಂದಿಗೆ ತಯಾರಿಸುವುದಾಗಿ ಒಪ್ಪಿಕೊಳ್ಳಲಾಗಿತ್ತು.

ಅಂದಿನಿಂದಲೂ ಕಾಂಗ್ರೆಸ್, ಮೋದಿ ಸರ್ಕಾರದ ವಿರುದ್ಧ ವಿವಿಧ ಆರೋಪಗಳು ಮಾಡುತ್ತಲೇ ಬಂದಿದೆ. ಯುದ್ಧ ವಿಮಾನಗಳ ಪ್ರಮಾಣವನ್ನು ಕಡಿಮೆ ಮಾಡುವುದರ ಮೂಲಕ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎನ್ನುವುದು ಒಂದು ಆರೋಪವಾದರೆ, ಎಚ್‌ಎಎಲ್ ಬದಲು ಅನಿಲ್ ಅಂಬಾನಿಗೆ ನೆರವು ಮಾಡಿಕೊಡಲು ರಿಲಯನ್ಸ್ ಡಿಫೆನ್ಸ್ ಕಂಪೆನಿ ಪರ ಲಾಬಿ ನಡೆಸಿತ್ತು ಎನ್ನುವುದು ಮತ್ತೊಂದು ಆರೋಪ.

ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ?

ಇತ್ತೀಚೆಗೆ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ನೀಡಿರುವ ಹೇಳಿಕೆ ಹಾಗೂ ಫ್ರಾನ್ಸ್ ಸರ್ಕಾರದ ನಿರಾಕರಣೆ ಈ ವಿವಾದವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಈ ವಿಚಾರವಾಗಿ ಇರುವ ಆರು ಪ್ರಶ್ನೆಗಳು ಗೊಂದಲಕ್ಕೆ ಉತ್ತರ ನೀಡಬಲ್ಲವು.

ವಿಮಾನಗಳ ಸಂಖ್ಯೆ ಬದಲಾವಣೆ

ವಿಮಾನಗಳ ಸಂಖ್ಯೆ ಬದಲಾವಣೆ

* ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿಕೊಂಡಿದ್ದ 126 ರಫೇಲ್ ಖರೀದಿ ಒಪ್ಪಂದವನ್ನು ಮೋದಿ ಸರ್ಕಾರ 36ಕ್ಕೆ ಇಳಿಸಿದ್ದೇಕೆ?

ಮೋದಿ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ದಸಾಲ್ಟ್ ಮತ್ತು ಎಚ್‌ಎಎಲ್ ನಡುವೆ ಸಹಮತ ವ್ಯಕ್ತವಾಗದ ಕಾರಣ ರಫೇಲ್ ವ್ಯವಹಾರ ಸ್ಥಗಿತಗೊಂಡಿತ್ತು.

ಭಾರತದ ವಾಯುಪಡೆಗೆ 42 ಯುದ್ಧ ವಿಮಾನಗಳ ಅನುಮೋದನೆ ನೀಡಲಾಗಿತ್ತು. ಆದರೆ, ಅದರ ಬಳಿ ಇದ್ದಿದ್ದು 33 ಮಾತ್ರ. ಅದರ ಸಂಖ್ಯೆ ಈಗ 31ಕ್ಕೆ ಇಳಿದಿದೆ. ಇನ್ನೂ ಕೆಲವು ವಿಮಾನಗಳು ಸಾಮರ್ಥ್ಯ ಕಳೆದುಕೊಳ್ಳುವ ಹಂತದಲ್ಲಿವೆ. ಹೀಗಾಗಿ ವಾಯುಪಡೆಗೆ ತುರ್ತಾಗಿ ಯುದ್ಧ ವಿಮಾನಗಳು ಬೇಕಿವೆ.

ತಂತ್ರಜ್ಞಾನದ ವರ್ಗಾವಣೆ ಮತ್ತು ಭಾರತದಲ್ಲಿ ಯುದ್ಧ ವಿಮಾನಗಳ ತಯಾರಿಯ ಒಪ್ಪಂದ ವ್ಯವಹಾರ ಮುಂದುವರಿಸುವುದು ಸುದೀರ್ಘ ಸಮಯ ತೆಗೆದುಕೊಳ್ಳಬಹುದು.

ಒಂದು ವೇಳೆ, ಅಂತಹ ಒಪ್ಪಂದ ಕುದುರಿದರೂ, ಎಚ್‌ಎಎಲ್‌ನಲ್ಲಿ ವಿಮಾನ ತಯಾರಿಸಲು ಸೂಕ್ತವಾದ ಮೂಲಸೌಕರ್ಯದ ಅಭಿವೃದ್ಧಿಪಡಿಸುವುದು ಅಗತ್ಯವಾಗಲಿದೆ. ಇದಕ್ಕೂ ಹೆಚ್ಚು ಸಮಯ ಬೇಕಾಗಲಿದೆ. ಇವೆಲ್ಲವೂ ವಿಳಂಬ ಪ್ರಕ್ರಿಯೆಯಾದ ಕಾರಣ ಸರ್ಕಾರ ಕೂಡಲೇ 36 ರಫೇಲ್ ಜೆಟ್‌ಗಳ ಖರೀದಿಗೆ ಮುಂದಾಗಿದೆ.

ಇದರಾಚೆಗೆ ವಾಯುಪಡೆ ಹೆಚ್ಚುವರಿ ವಿಮಾನಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸಹ ಆರಂಭಿಸಿದೆ. ಇದರಲ್ಲಿ ಹೆಚ್ಚಿನವು ಸ್ವದೇಶಿ ನಿರ್ಮಿತ.

ವಿಮಾನದ ದುಬಾರಿ ವೆಚ್ಚದ ಕಾರಣದಿಂದಾಗಿ 126 ರಫೇಲ್‌ಗಳನ್ನು ಖರೀದಿಸುವ ಸರ್ಕಾರದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಕೂಡ ಎದ್ದಿದ್ದವು. ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ. ಆಂಟನಿ, 126 ರಫೇಲ್‌ಗಳ ಖರೀದಿಗೆ ಸರ್ಕಾರದ ಬಳಿ ಸಾಕಷ್ಟು ಹಣವಿಲ್ಲ ಎಂದು ಒಮ್ಮೆ ಹೇಳಿದ್ದರು.

ಮೇಕ್ ಇನ್ ಇಂಡಿಯಾ ಭಾಗವಲ್ಲ

ಮೇಕ್ ಇನ್ ಇಂಡಿಯಾ ಭಾಗವಲ್ಲ

* ಒಪ್ಪಂದದ ಭಾಗವಾಗಿ ಎಚ್‌ಎಎಲ್‌ಅನ್ನು ಏಕೆ ಪರಿಗಣಿಸಲಿಲ್ಲ?

ಈ ಒಪ್ಪಂದ 'ಮೇಕ್ ಇನ್ ಇಂಡಿಯಾ' ಷರತ್ತಿಗೆ ಒಳಪಡದ ಕಾರಣ, ಎಚ್‌ಎಎಲ್‌ ಒಪ್ಪಂದದ ಭಾಗವಾಗಿಲ್ಲ. ಒಮ್ಮೆಗೆ ಅಷ್ಟು ವಿಮಾನಗಳನ್ನು ವಿದೇಶದಿಂದ ತರಿಸಿಕೊಳ್ಳಲು ಸರ್ಕಾರ ನಿರ್ಧರಿಸಲು ಕಾರಣ ಕಡಿಮೆ ಸಂಖ್ಯೆಯ ಯುದ್ಧ ವಿಮಾನಗಳನ್ನು ತಯಾರಿಸುವುದು ಆರ್ಥಿಕವಾಗಿ ಹೊರೆಯಾಗಲಿದೆ ಎನ್ನುವುದು.

ಎಚ್‌ಎಎಲ್‌ ಒಪ್ಪಂದದ ಭಾಗವಾಗದೆ ಇದ್ದರೂ, ಅದು ರಿಲಯನ್ಸ್ ಮತ್ತು ಇತರೆ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಕಂಪೆನಿಗಳೊಂದಿಗೆ ಬಿಡಿ ಭಾಗಗಳ ತಯಾರಿಗೆ ದಸಾಲ್ಟ್‌ನ ಪಾಲುದಾರನಾಗಿಯೇ ಇರುತ್ತದೆ.

ಎಚ್‌ಎಎಲ್‌ ಮತ್ತು ದಸಾಲ್ಟ್‌ಗಳ ನಡುವೆ ಉಂಟಾದ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಾಧ್ಯವಾಗದ ಕಾರಣ ಒಪ್ಪಂದ ಸ್ಥಗಿತಗೊಂಡಿತ್ತು ಎಂದು ವಾಯುದಳದ ಅಧಿಕಾರಿಯೊಬ್ಬರು ತಿಳಿಸಿದ್ದರು.

ವಿಮಾನಕ್ಕೆ ನೀಡುವ ವೆಚ್ಚ ದುಬಾರಿಯಲ್ಲ

ವಿಮಾನಕ್ಕೆ ನೀಡುವ ವೆಚ್ಚ ದುಬಾರಿಯಲ್ಲ

* ರಫೇಲ್ ದುಬಾರಿ ವೆಚ್ಚ ನ್ಯಾಯೋಚಿತವೇ?

ಭದ್ರತಾ ತಜ್ಞ ಅಭಿಜಿತ್ ಅಯ್ಯರ್ ಮಿತ್ರ ಉಲ್ಲೇಖಿಸಿದಂತೆ ಒಂದು ವಿಮಾನಕ್ಕೆ ಕತಾರ್ 292 ಮಿಲಿಯನ್ ಡಾಲರ್ ತೆತ್ತಿದ್ದರೆ, ಈಜಿಪ್ಟ್ ಅದೇ ವಿಮಾನಕ್ಕೆ 246 ಮಿಲಿಯನ್ ಡಾಲರ್ ವೆಚ್ಚಮಾಡಿತ್ತು. ಭಾರತ ಒಂದು ವಿಮಾನಕ್ಕೆ 243 ಮಿಲಿಯನ್ ಡಾಲರ್ ನೀಡಿದೆ. ಈ ವ್ಯತ್ಯಾಸವನ್ನು ಗಮನಿಸಬೇಕು.

ಮುಖ್ಯವಾಗಿ ಭಾರತದ ಒಪ್ಪಂದವು ಅದರ ನಿರ್ವಹಣಾ ನೆರವು, ಶಸ್ತ್ರಾಸ್ತ್ರ ಮತ್ತು ತರಬೇತಿ ಮಾತ್ರವಲ್ಲದೆ, ಯುದ್ಧ ವಿಮಾನದಲ್ಲಿ ನಿರ್ದಿಷ್ಟ ಸವಲತ್ತುಗಳನ್ನು ಕೂಡ ಪಡೆದುಕೊಂಡಿದೆ. ವಾಯುಪಡೆಯ ಬೇಡಿಕೆಗಳಿಗೆ ಅನುಗುಣವಾಗಿ ಈ ಮಾರ್ಪಾಡುಗಳನ್ನು ಮಾಡಲಾಗಿದೆ. ಇದು ಕೂಡ ವೆಚ್ಚದ ಹೆಚ್ಚಳಕ್ಕೆ ಕಾರಣ. ಕತಾರ್ ಮತ್ತು ಈಜಿಪ್ಟ್‌ಗೆ ಮಾರಾಟ ಮಾಡಿದ ರಫೇಲ್‌ಗಳಲ್ಲಿ ಈ ಮಾರ್ಪಾಡುಗಳಿಲ್ಲ. ಆದರೂ ಅವುಗಳ ವೆಚ್ಚ ಹೆಚ್ಚು.

ಈ ಒಪ್ಪಂದದಲ್ಲಿ ಶೇ 50ರಷ್ಟು ಆಫ್‌ಸೆಟ್ ಒಳಗೊಂಡಿದೆ. ಅದರ ಅರ್ಥ ದಸಾಲ್ಟ್ ಪಡೆದುಕೊಳ್ಳುವ ಶೇ 50ರಷ್ಟು (59,000 ಕೋಟಿ ರೂ.) ಲಾಭವನ್ನು ಭಾರತದಲ್ಲಿ ಮರುಹೂಡಿಕೆ ಮಾಡಲಿದೆ. ಇದರಿಂದ ಸ್ಥಳೀಯ ರಕ್ಷಣಾ ಉತ್ಪಾದನೆಗೆ ಉತ್ತೇಜನ ದೊರಕಲಿದೆ.

ನ್ಯಾಯಬದ್ಧ ಹಣಕ್ಕೆ ಅನುಗುಣವಾಗಿ ರಫೇಲ್ ಖರೀದಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪ ಸತ್ಯವಲ್ಲ. ಏಕೆಂದರೆ, 2000ನೇ ಇಸವಿಯಲ್ಲಿ ರಫೇಲ್ ತಯಾರಕ ಕಂಪೆನಿ ಹೇಳಿದ್ದ ವೆಚ್ಚವನ್ನೇ ಕಾಂಗ್ರೆಸ್ ಹೇಳಿಕೊಂಡು ಬರುತ್ತಿದೆ. ಹಣದುಬ್ಬರ ಮತ್ತು ಅದರ ನಿರ್ಮಾಣ ವೆಚ್ಚದ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಳ್ಳಲು ಅದು ಸಿದ್ಧವಿಲ್ಲ. ಇದನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ವಿವರಿಸಿದ್ದಾರೆ.

ಎಚ್‌ಎಎಲ್‌ಗೆ ಸಿಗದ ಅವಕಾಶ: ಸಚಿವೆ ನಿರ್ಮಲಾ ಸುಳ್ಳು ಹೇಳಿದರೇ?

ಬೇರೆ ಅನುಮೋದನೆ ಬೇಕಾಗಿಲ್ಲ

ಬೇರೆ ಅನುಮೋದನೆ ಬೇಕಾಗಿಲ್ಲ

* ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಮೋದಿ ಸಂಪುಟ ಸಮಿತಿ ಮತ್ತು ಇತರೆ ರಕ್ಷಣಾ ಖರೀದಿ ಸಂಬಂಧಿತ ಇಲಾಖೆಗಳನ್ನು ಕಡೆಗಣಿಸಿದ್ದರೇ?

ಯುಪಿಎ ಸರ್ಕಾರ ಸಿದ್ಧಪಡಿಸಿದ 2013ರ ರಕ್ಷಣಾ ಉತ್ಪಾದನಾ ನೀತಿಗೆ (ಡಿಪಿಪಿ) ಅನುಗುಣವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ವರದಿಯಂತೆ ಅಂತರ್ ಸರ್ಕಾರಿ ಒಪ್ಪಂದಗಳಲ್ಲಿ ರಕ್ಷಣಾ ಉತ್ಪಾದನಾ ಮಂಡಳಿ, ರಕ್ಷಣಾ ಖರೀದಿ ಸಮಿತಿ (ಡಿಎಸಿ) ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಯ ಅನುಮೋದನೆ ಪಡೆದುಕೊಳ್ಳುವ ಅಗತ್ಯವಿಲ್ಲ.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ಆರೋಪಕ್ಕೆ ಸಾಕ್ಷಿಯೇ ಇಲ್ಲ

* ರಿಲಯನ್ಸ್ ಈ ಒಪ್ಪಂದದ ಭಾಗವಾಗಿದ್ದು ಹೇಗೆ? ಅನಿಲ್ ಅಂಬಾನಿ ಅವರ ರಿಲಯನ್ಸ್‌ಗೆ ಲಾಭ ಮಾಡಿಕೊಡಲು ಮೋದಿ ಸರ್ಕಾರ ಸ್ವಜನಪಕ್ಷಪಾತ ಮಾಡಿತೇ?

ಕಾಂಗ್ರೆಸ್ ಆರೋಪಿಸುವಂತೆ ಎಚ್‌ಎಎಲ್ ಸ್ಥಾನವನ್ನು ರಿಲಯನ್ಸ್ ಆಕ್ರಮಿಸಿಲ್ಲ. ಅದನ್ನು ಆಯ್ಕೆ ಮಾಡಿರುವುದು ದಸಾಲ್ಟ್. ಒಪ್ಪಂದದ ಅನ್ವಯ ಭಾರತದಲ್ಲಿನ ತನ್ನ ಪಾಲುದಾರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅದಕ್ಕೆ ನೀಡಲಾಗಿದೆ. ಮತ್ತೊಂದು ವಿಷಯವೆಂದರೆ, ವಿಮಾನದ ಭಾಗಗಳ ತಯಾರಿಕೆಗೆ ರಫೇಲ್ ಉತ್ಪಾದಕರು ರಿಲಯನ್ಸ್ ಅನ್ನು ಮಾತ್ರ ಆಯ್ದುಕೊಂಡಿಲ್ಲ. ವರದಿಗಳ ಪ್ರಕಾರ ಸರ್ಕಾರಿ ಸ್ವಾಮ್ಯದ ಡಿಆರ್‌ಡಿಒ, ಎಚ್‌ಎಎಲ್‌ ಅಲ್ಲದೆ, ಇತರೆ ಖಾಸಗಿ ಕಂಪೆನಿಗಳನ್ನೂ ಅದರ ಭಾಗವನ್ನಾಗಿಸಿಕೊಳ್ಳಲಾಗಿದೆ.

ಅನಿಲ್ ಅಂಬಾನಿ ಪರ ಮೋದಿ ಸರ್ಕಾರ ಲಾಬಿ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ವರದಿಯ ಪ್ರಕಾರ, ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ದಸಾಲ್ಟ್‌ ಜತೆ ಮುಕೇಶ್ ಅಂಬಾನಿ ಅವರ ರಿಲಯನ್ಸ್ ರಕ್ಷಣಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿತ್ತು. 2014ರ ಬಳಿಕ ಮುಕೇಶ್ ಅಂಬಾನಿ ಅವರ ಕಂಪೆನಿ ರಕ್ಷಣಾ ಸಾಮಗ್ರಿಗಳ ವ್ಯವಹಾರ ಮುಂದುವರಿಸದ ಕಾರಣ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಏರೋಸ್ಪೇಸ್ ಟೆಕ್ನಾಲಜೀಸ್ ಕಂಪೆನಿ ದಸಾಲ್ಟ್ ಜತೆ ಒಪ್ಪಂದ ಮಾಡಿಕೊಂಡಿತು.

ಹಾಗಾದರೆ 2012ರಲ್ಲಿ ನಡೆದ ಒಪ್ಪಂದದಂತೆಯೇ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಂಪೆನಿಯೇ ಮುಂದುವರಿದಿದ್ದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಸ್ವಜನ ಪಕ್ಷಪಾತ ನಡೆಸಿದೆ ಎಂದು ಆರೋಪಿಸಬಹುದಾಗಿತ್ತೇ?

ಮುಖ್ಯವಾಗಿ ಗಟ್ಟಿಯಾದ ಪುರಾವೆಗಳಿಲ್ಲದೆ ಈ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವೇ ಆಗಿಲ್ಲ.

ಒಲಾಂಡ್ ಹೇಳಿಕೆಯ ಗೊಂದಲ

ಒಲಾಂಡ್ ಹೇಳಿಕೆಯ ಗೊಂದಲ

* ಫ್ರಾನ್ಸ್ ಮಾಜಿ ಅಧ್ಯಕ್ಷ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದೇಕೆ?

ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಅವರ ಗೆಳತಿ, ನಟಿ ಜೂಲಿ ಗಯೆಟ್ ಅವರ ನಿರ್ಮಾಣದ ಸಿನಿಮಾದಲ್ಲಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಬಂಡವಾಳ ಹೂಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಆಗಸ್ಟ್‌ನಲ್ಲಿ ಪ್ರಕಟವಾದ ವರದಿ ಆರೋಪಿಸಿತ್ತು.

ಈ ಕುರಿತ ಒಪ್ಪಂದವು ಒಲಾಂಡ್ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸಿ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿಯೇ ನಡೆದಿತ್ತು ಎನ್ನಲಾಗಿದೆ.

ಭಾರತದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಈ ವರದಿ, ಫ್ರಾನ್ಸ್‌ನಲ್ಲಿಯೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಒಲಾಂಡ್ ಹೇಳಿಕೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಆರೋಪವಿದ್ದರೂ ರಿಲಯನ್ಸ್ ಜತೆ ಯಾವುದೇ ಹಿತಾಸಕ್ತಿ ಸಂಘರ್ಷ ಇರುವುದನ್ನು ನಿರಾಕರಿಸಿದ್ದರು. ಫ್ರಾನ್ಸ್ ಸರ್ಕಾರ ಮತ್ತು ದಸಾಲ್ಟ್ ಈ ಆರೋಪವನ್ನು ನಿರಾಕರಿಸಿದ್ದವು. ಈ ವಿಚಾರದ ಬಗ್ಗೆ ದಸಾಲ್ಟ್ ಮಾತ್ರವೇ ಪ್ರತಿಕ್ರಿಯೆ ನೀಡಬಹುದು ಎಂದು ಬಳಿಕ ಒಲಾಂಡ್ ಕೂಡ ಸ್ಪಷ್ಟೀಕರಣ ನೀಡಿದ್ದರು.

ಪ್ರಖರ್ ಗುಪ್ತಾ ಸ್ವರಾಜ್ಯದ ಹಿರಿಯ ಉಪ ಸಂಪಾದಕ

English summary
Rafale deal: Six things you need to know. The facts and figures of rafale deal and answer to congress allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X