ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಅವರ ಪ್ರೇಯಸಿ ಜೂಲಿ ಗಯೆಟ್ ಅವರ ನಿರ್ಮಾಣದ ಫ್ರೆಂಚ್ ಸಿನಿಮಾ 'ಟೌಟ್ ಲಾ ಹೌಟ್'ಗೆ ಶೇ 15ರಷ್ಟು ಬಂಡವಾಳ ಹೂಡಿರುವುದು ನಿಜ ಎಂದು ಅನಿಲ್ ಅಂಬಾನಿ ಅವರ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಹೇಳಿದೆ.

ತನ್ನ ಪಾಲುದಾರರಲ್ಲಿ ಒಂದಾದ ಫ್ರೆಂಚ್ ಹಣಕಾಸು ಸಂಸ್ಥೆ ವಿಸ್‌ವಿರೆಸ್ ಕ್ಯಾಪಿಟಲ್ ಮೂಲಕ ಸಿನಿಮಾದ ನಿರ್ಮಾಣಕ್ಕೆ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ 1.48 ಮಿಲಿಯನ್ ಯುರೋಗಳನ್ನು ನೀಡಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ಖಚಿತಪಡಿಸಿದೆ.

 ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ? ರಫೇಲ್, ರಿಲಯನ್ಸ್, ಫ್ರೆಂಚ್ ಸಿನಿಮಾ: ಏನಿದು ರಾಹುಲ್ ಆರೋಪ?

ವಿಸ್‌ವಿರೆಸ್ ಕ್ಯಾಪಿಟಲ್‌ಗೆ 2017ರ ಡಿಸೆಂಬರ್‌ 5ರಂದು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಕೇವಲ 1.48 ಮಿಲಿಯನ್ ಯುರೊಗಳನ್ನು ಪಾವತಿಸಿದೆ. 2017ರ ಡಿಸೆಂಬರ್‌ 20ರಂದು ಸಿನಿಮಾ ಬಿಡುಗಡೆಯಾಗುವ ಎರಡು ವಾರಗಳ ಮುಂಚೆಯಷ್ಟೇ ನೀಡಲಾಗಿತ್ತು ಎಂದು ತಿಳಿಸಿದೆ.

ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ

rafale deal reliance anil ambani confirms investment in french cinema

ಸಿನಮಾವಲ್ಲದೆ ವಿಸ್ ವಿರೆಸ್ ಕ್ಯಾಪಿಟಲ್‌ನಲ್ಲಿ ಇಂಟರ್ ಅಲಿಯಾ ಇನ್ ಸುಲಾ ವೈನ್ಸ್ ಆಂಡ್ ಗ್ರೋವರ್ ವೈನ್‌ಯಾರ್ಡ್ಸ್ ನಲ್ಲಿಯೂ ಸಹಭಾಗಿ ಹೂಡಿಕೆ ಸೇರಿದಂತೆ ಕೆಲವು ಹೂಡಿಕೆ ಮಾಡಿದೆ.

 ರಿಲಯನ್ಸ್ ನನಗೆ ಥ್ಯಾಂಕ್ಸ್ ಹೇಳುವುದು ಬೇಡ ಎಂದ ಫ್ರಾನ್ಸ್ ಮಾಜಿ ಅಧ್ಯಕ್ಷ! ರಿಲಯನ್ಸ್ ನನಗೆ ಥ್ಯಾಂಕ್ಸ್ ಹೇಳುವುದು ಬೇಡ ಎಂದ ಫ್ರಾನ್ಸ್ ಮಾಜಿ ಅಧ್ಯಕ್ಷ!

ವಿಸ್ ವಿರೆಸ್ ಕ್ಯಾಪಿಟಲ್, ಭಾರತದ ನಂಟು ಹೊಂದಿರುವ ಸಿಂಗಪುರದ ಮೂಲದ, ಉದ್ಯಮಿ ಹಾಗೂ ಅಂಬಾನಿ ಅವರ ಸ್ನೇಹಿತರಾಗಿರುವ ರವಿ ವಿಶ್ವನಾಥನ್ ಅವರ ಒಡೆತನದ ಸಂಸ್ಥೆ.

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಜೂಲಿ ಗಯೆಟ್ ಅವರೊಂದಿಗೆ ಅಥವಾ ಅವರ ಕಂಪೆನಿಯೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಸಿನಿಮಾಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಅವರಿಗೆ ನೇರವಾಗಿ ಹಣ ನೀಡಿಲ್ಲ ಎಂದು ಹೇಳಿಕೆ ತಿಳಿಸಿದೆ.

 ರಿಲಯನ್ಸ್ ಮುಖೇಶ್ ಅಂಬಾನಿಯ ಒಂದು ದಿನದ ಆದಾಯ 300 ಕೋಟಿ ರೂ.! ರಿಲಯನ್ಸ್ ಮುಖೇಶ್ ಅಂಬಾನಿಯ ಒಂದು ದಿನದ ಆದಾಯ 300 ಕೋಟಿ ರೂ.!

ಲಡಾಕ್‌ನಲ್ಲಿನ ಕ್ಲಿಷ್ಟಕರ ಪರ್ವತ ಪ್ರದೇಶದಲ್ಲಿ ಇದೇ ಸಿನಿಮಾದ ಶೂಟಿಂಗ್ ಮಾಡಲು ಫ್ರೆಂಚ್ ನಿರ್ಮಾಪಕರಿಗೆ ಸಹಾಯ ಮಾಡಿದ್ದಕ್ಕೆ ಅವರಿಂದ 3 ಲಕ್ಷ ಯುರೋಗಳನ್ನು ಪಡೆದುಕೊಳ್ಳಲಾಗಿದೆ ಎಂದು ಕಂಪೆನಿ ವಿವರಿಸಿದೆ.

English summary
Reliance Entertainment of Anil Ambani has confirmed that, it financed 15% of the budget of the French film produced by Julie Gayet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X