• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಒಪ್ಪಂದ: ರಾಹುಲ್ ಆರೋಪವೇನು? ವಾಸ್ತವ ಸಂಗತಿ ಏನು?

By Avani Malnad
|

ಬೆಂಗಳೂರು, ಜನವರಿ 2: ರಫೇಲ್ ಒಪ್ಪಂದದ ಕುರಿತಂತೆ ಲೋಕಸಭೆಯಲ್ಲಿ ಬುಧವಾರ ಭಾರಿ ಚರ್ಚೆ ನಡೆದಿದೆ. ಪ್ರಧಾನಿ ಮೋದಿ ತಮ್ಮ ಆತ್ಮೀಯ ಸ್ನೇಹಿತ ಮತ್ತು ವಿಫಲ ಉದ್ಯಮಿಯ ಲಾಭಕ್ಕಾಗಿ ರಫೇಲ್ ಒಪ್ಪಂದ ಬಳಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಆದರೆ, ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ಆರೋಪಗಳು, ಅವರು ಮುಂದಿಟ್ಟ ವಾದಗಳಲ್ಲಿ ಅನೇಕ ತಪ್ಪುಗಳಿವೆ ಎನ್ನುವುದು ಬಿಜೆಪಿ ಪರ ನಿಲುವು ಹೊಂದಿರುವ ವಿಶ್ಲೇಷಕರ ಅಭಿಪ್ರಾಯ.

ಮೋದಿ ಅವರ ಮೇಲೆ ದೇಶದ ಜನ ನಂಬಿಕೆ ಇಟ್ಟರು ಆದರೆ ಅವರು, ತಮ್ಮ ಗೆಳೆಯ ಎಎ (ಅನಿಲ್ ಅಂಬಾನಿ) ಜೇಬು ತುಂಬಿಸಲು ಭಾರತದ ಅವಕಾಶಗಳನ್ನು ಕಿತ್ತುಕೊಂಡರು. ಮೋದಿ ಅವರು ಸಂಸತ್‌ಗೆ ಬರುವ ಧೈರ್ಯವೇ ಇಲ್ಲ. ಅವರು ಐದು ನಿಮಿಷ ಸಹ ರಫೇಲ್ ಬಗ್ಗೆ ಮಾತನಾಡಲಾರರು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.

ರಫೇಲ್‌: ಸಂಸತ್‌ನಲ್ಲಿ ಮೋದಿ ವಿರುದ್ಧ ಬೆಂಕಿ ಉಗುಳಿದ ರಾಹುಲ್‌

ರಾಹುಲ್ ಗಾಂಧಿ ಅವರ ಆರೋಫಗಳ ಬಗ್ಗೆ 'ಸ್ವರಾಜ್ಯ' ಮ್ಯಾಗಜೀನ್ ಪಟ್ಟಿ ಮಾಡಿರುವ ಕೆಲವು ತಪ್ಪುಒಪ್ಪುಗಳ ಪಟ್ಟಿ ಇಲ್ಲಿದೆ.

ಎಚ್‌ಎಎಲ್ ನಿರ್ಮಿಸಿದ್ದಲ್ಲ

ಎಚ್‌ಎಎಲ್ ನಿರ್ಮಿಸಿದ್ದಲ್ಲ

ಆರೋಪ: ಎಚ್‌ ಎ ಎಲ್ ಸು-30, ಮಿರಾಜ್ ವಿಮಾನ ಮತ್ತು ಎಂಐಜಿ 27ಅನ್ನು ತಯಾರಿಸಿದೆ.

ವಾಸ್ತವ: ಭಾರತವು ಡಸಾಲ್ಟ್ ಏವಿಯೇಷನ್ ನಿರ್ಮಿತ ಮಿರಾಜ್-2000ಅನ್ನು ಫ್ರಾನ್ಸ್‌ನಿಂದ ಖರೀದಿಸಿತ್ತು. ಈ ಯುದ್ಧ ವಿಮಾನವನ್ನು ಭಾರತದಲ್ಲಿ ಎಚ್‌ಎಎಲ್ ನಿರ್ಮಿಸಿದ್ದಲ್ಲ.

ಆರೋಪ: ರಿಲಯನ್ಸ್‌ಗೆ ಒಪ್ಪಂದದ ಭಾಗ ನೀಡುವಂತೆ ಮೋದಿ ಅವರೇ ಒತ್ತಾಯಿಸಿದ್ದರು ಎಂಬುದಾಗಿ ಫ್ರಾನ್ಸ್ ಮಾಜಿ ಅಧ್ಯಕ್ಷರು ಹೇಳಿದ್ದಾರೆ.

ವಾಸ್ತವ: ಭಾರತ ಸರ್ಕಾರ ರಿಲಯನ್ಸ್ ಡಿಫೆನ್ಸ್ ಹೆಸರನ್ನು ಸೂಚಿಸಿತ್ತು ಎಂದು ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಒಲಾಂಡ್ ಹೇಳಿದ್ದರೇ ಹೊರತು ನರೇಂದ್ರ ಮೋದಿ ಎಂದಲ್ಲ.

ಮೋದಿ ನನ್ನೊಂದಿಗೆ ರಫೇಲ್ ಬಗ್ಗೆ 20 ನಿಮಿಷ ಮಾತನಾಡಲಿ: ರಾಹುಲ್ ಸವಾಲು

ರಿಲಯನ್ಸ್ ಡಿಫೆನ್ಸ್ ಆರಂಭ

ರಿಲಯನ್ಸ್ ಡಿಫೆನ್ಸ್ ಆರಂಭ

ಆರೋಪ: ಫ್ರಾನ್ಸ್ ಜೊತೆ ಪ್ರಧಾನಿ ಮೋದಿ ಅವರು ರಫೇಲ್ ಒಪ್ಪಂದಕ್ಕೆ ಸಹಿ ಹಾಕುವ ಹತ್ತು ದಿನಗಳ ಮುಂಚೆಯಷ್ಟೇ ಅನಿಲ್ ಅಂಬಾನಿ ರಿಲಯನ್ಸ್ ಡಿಫೆನ್ಸ್ ಆರಂಭಿಸಿದ್ದರು.

ವಾಸ್ತವ: ಈ ಆರೋಪ ಮೊದಲು ಪ್ರಕಟವಾಗಿದ್ದು ಕಾಂಗ್ರೆಸ್ ಮುಖವಾಣಿ 'ನ್ಯಾಷನಲ್ ಹೆರಾಲ್ಡ್'ನಲ್ಲಿ. ಅದರ ವಿರುದ್ಧ ಅನಿಲ್ ಅಂಬಾನಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿಂದ ನ್ಯಾಷನಲ್ ಹೆರಾಲ್ಡ್ ತನ್ನ ಶೀರ್ಷಿಕೆಯಲ್ಲಿ ಅನಿಲ್ ಅಂಬಾನಿ ಅವರು ಮೋದಿ ರಫೇಲ್ ಒಪ್ಪಂದ ಪ್ರಕಟಿಸುವ 12 ದಿನಗಳ ಮುಂಚೆಯಷ್ಟೇ ರಿಲಯನ್ಸ್ ಡಿಫೆನ್ಸ್ ಆರಂಭಿಸಿದ್ದರು ಎಂದು ಬರೆಯಲಾಗುತ್ತಿದೆ.

'ರಫೇಲ್ ಬಗ್ಗೆ ಸಂಸತ್ ನಲ್ಲಿ ಉತ್ತರ ನೀಡುವ ಧೈರ್ಯ ಪ್ರಧಾನಿಗೆ ಇಲ್ಲ'

ರಿಲಯನ್ಸ್ ಒಪ್ಪಂದದ ಭಾಗವಲ್ಲ

ರಿಲಯನ್ಸ್ ಒಪ್ಪಂದದ ಭಾಗವಲ್ಲ

ಆರೋಪ: ಅನಿಲ್ ಅಂಬಾನಿ ಎಚ್‌ಎಎಲ್‌ನ ಒಪ್ಪಂದವನ್ನು ತಮ್ಮ ಸಂಸ್ಥೆಗೆ ಪಡೆದುಕೊಂಡರು.

ವಾಸ್ತವ: ಇದು ಸರ್ಕಾರದ ವಿರುದ್ಧ ದಾಳಿ ನಡೆಸಲು ರಾಹುಲ್ ಗಾಂಧಿ ಬಳಸಿಕೊಳ್ಳುತ್ತಿರುವ ಅಸ್ತ್ರ. ಆದರೆ, ಇದು ಅಸತ್ಯ. ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ ರಫೇಲ್ ಒಪ್ಪಂದದ ಭಾಗವಲ್ಲ. ಅದು ಭಾರತೀಯ ಸೇನೆಗೆ ರಫೇಲ್ ವಿಮಾನ ತಯಾರಿಸುತ್ತಿಲ್ಲ. ಆಪ್‌ಸೆಟ್ ತಯಾರಿಕೆಗಾಗಿ ಡಸಾಲ್ಟ್ ಏವಿಯೇಷನ್ ತಾನೇ ರಿಲಯನ್ಸ್ ಡಿಫೆನ್ಸ್ ಅನ್ನು ಆಯ್ದುಕೊಂಡಿದೆ.

ನಾಲ್ಕು ಸಂಸ್ಥೆಗಳ ಜೊತೆ ಒಪ್ಪಂದ

ನಾಲ್ಕು ಸಂಸ್ಥೆಗಳ ಜೊತೆ ಒಪ್ಪಂದ

ಆರೋಪ: ಅನಿಲ್ ಅಂಬಾನಿ ಅವರಿಗೆ ಈ ಒಪ್ಪಂದದಿಂದ 30 ಸಾವಿರ ಕೋಟಿ ಪಡೆದುಕೊಳ್ಳುತ್ತಾರೆ.

ವಾಸ್ತವ: ಆಫ್‌ಸೆಟ್ ಒಪ್ಪಂದವು ನಾಲ್ಕು ಸಂಸ್ಥೆಗಳ ನಡುವೆ ವಿಭಜನೆಯಾಗಿದೆ. ಏರ್ ಫ್ರೇಮ್ ಮತ್ತು ವಿಮಾನದ ಸಮಗ್ರ ಸಾಧನಗಳನ್ನು ಡಸಾಲ್ಟ್ ವಿವಿಧ ಸಂಸ್ಥೆಗಳಿಂದ ಪಡೆದುಕೊಳ್ಳಲಿದೆ. ಥೇಲ್ಸ್ ಕಂಪೆನಿ ರಾಡಾರ್ಸ್ ಮತ್ತು ಏವಿಯಾನಿಕ್‌ಗಳನ್ನು ತಯಾರಿಸುತ್ತದೆ. ಸಫ್ರಾನ್ ಕಂಪೆನಿ ಎಂಜಿನ್ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದ ಸಾಧನಗಳನ್ನು ಒದಗಿಸುತ್ತದೆ. ಎಂಬಿಡಿಎ ಶಸ್ತ್ರಾಸ್ತ್ರಗಳ ಜವಾಬ್ದಾರಿ ನಿಭಾಯಿಸುತ್ತದೆ. ಈ ಒಪ್ಪಂದವು ಸುಮಾರು 60,000 ಕೋಟಿಯದ್ದು. ಇದರಲ್ಲಿ ಆಫ್‌ಸೆಟ್ ಕೆಲಸಗಳಿಗೆ 30 ಸಾವಿರ ಕೋಟಿ ರೂ ಬೇಕಾಗುತ್ತದೆ. ಒಟ್ಟಾರೆ ಆಫ್‌ಸೆಟ್ ಮೊತ್ತದಲ್ಲಿ ಶೇ 3ರಷ್ಟು ಅಂದರೆ, 845 ಕೋಟಿ ರೂ.ಗಳಷ್ಟು ಹೂಡಿಕೆ ಹಣವನ್ನು ರಿಲಯನ್ಸ್ ಪಡೆದುಕೊಳ್ಳಲಿದೆ.

ರಕ್ಷಣಾ ಸಚಿವಾಲಯ ತಕರಾರು

ರಕ್ಷಣಾ ಸಚಿವಾಲಯ ತಕರಾರು

ಆರೋಪ: ವಿಮಾನದ ಹೊಸ ದರಪಟ್ಟಿಗೆ ರಕ್ಷಣಾ ಸಚಿವಾಲಯ ತಕರಾರು ತೆಗೆದಿತ್ತು.

ವಾಸ್ತವ: ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೊಸ ಬೆಲೆ ಮಾನದಂಡಕ್ಕೆ ಆಕ್ಷೇಪ ದಾಖಲಿಸಿದ್ದರೇ ವಿನಾ ರಫೇಲ್ ವಿಮಾನದ ದರದ ಬಗ್ಗೆಯಲ್ಲ. ಅಧಿಕಾರಿಯ ಆಕ್ಷೇಪದ ವರದಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ನಿರಾಕರಿಸಿದ್ದರು. ಡೈಲಿ ಮೇಲ್ ವರದಿ ಪ್ರಕಾರ ಇಬ್ಬರು ಹಿರಿಯ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಸಮಯದ ಒಪ್ಪಂದಕ್ಕೆ ಆಕ್ಷೇಪಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SwarajMag website explored some things claiming the facts for allegations by Rahul Gandhi on Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more