ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರಕ್ಕೆ ಹೊಸ ಟ್ಯಾಗ್ ಲೈನ್ ನೀಡಿದ ರಾಹುಲ್ ಗಾಂಧಿ

|
Google Oneindia Kannada News

Recommended Video

ಮೋದಿ ಸರಕಾರಕ್ಕೆ ಹೊಸ ಟ್ಯಾಗ್ ಲೈನ್ ನೀಡಿದ ರಾಹುಲ್ ಗಾಂಧಿ | Oneindia Kannada

ನವದೆಹಲಿ, ಮಾರ್ಚ್ 7: ರಫೇಲ್ ಹಗರಣ ದಿನದಿಂದ ದಿನಕ್ಕೆ ನರೇಂದ್ರ ಮೋದಿ ಸರಕಾರವನ್ನು ಇಕ್ಕಟ್ಟಿಗೆ ದೂಡುತ್ತಿದ್ದು, ಕಾಂಗ್ರೆಸ್ ಇದರ ಭರ್ಜರಿ ಲಾಭವನ್ನು ಪಡೆದುಕೊಳ್ಳುತ್ತಿದೆ.

ರಕ್ಷಣಾ ಸಚಿವಾಲಯದಿಂದ ಕೆಲವು ಮಹತ್ವದ ದಾಖಲೆಗಳು ಕಳುವಾಗಿದ್ದು, ಇದು ಬಹಳ ಸೂಕ್ಷ್ಮ ವಿಚಾರ, ಈ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸರ್ವೋಚ್ಚ ನ್ಯಾಯಾಲಯದ ಮುಂದೆ, ಬುಧವಾರ (ಮಾ 6) ಹೇಳಿಕೆ ನೀಡಿದ್ದರು.

ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್

ಇದನ್ನು ಕಾಂಗ್ರೆಸ್ ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಳ್ಳೂತ್ತಿದ್ದು, ಮೋದಿ ಸರಕಾರಕ್ಕೆ, ಎಐಸಿಸಿ ಅಧ್ಯಕ್ಷ ಹೊಸ ಟ್ಯಾಗ್ ಲೈನ್ ಅನ್ನು ನೀಡಿದ್ದಾರೆ. "ಗಾಯಬ್ ಹೋಗಯಾ" (ಕಳೆದು ಹೊಗಿದೆ) ಎನ್ನುವ ಟ್ಯಾಗ್ ಲೈನ್ ಅನ್ನು ರಾಹುಲ್ ನೀಡಿದ್ದು, ಇದರ ಅರ್ಥ ಬಹಳಷ್ಟಿದೆ ಎಂದಿದ್ದಾರೆ.

Rafale deal: AICC President Rahul Gandhi given new tagline to Modi government

ಯುವಕರಿಗೆ ಉದ್ಯೋಗ, ರೈತರಿಗೆ ಉತ್ತಮ ಬೆಂಬಲ ಬೆಲೆ, ಪ್ರತಿಯೊಬ್ಬರ ಅಕೌಂಟಿಗೆ ಹದಿನೈದು ಲಕ್ಷ, ರೈತರ ವಿಮೆ, ಅಪನಗದೀಕರಣದ ನಂತರದ ಕಪ್ಪುಹಣ, ದೋಕ್ಲಾಂ ವಿಚಾರ ಮುಂತಾದ ವಿಚಾರಗಳಿಗೆಲ್ಲಾ ಈ ಟ್ಯಾಗ್ ಲೈನ್ ಅನ್ನು ಬಳಸಬಹುದು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ರಫೇಲ್ ಒಪ್ಪಂದದ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಿರಾಕರಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ಹಾ ಅವರೊಂದಿಗೆ ವಕೀಲ ಪ್ರಶಾಂತ್ ಭೂಷಣ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ಮತ್ತೆ ಸುಪ್ರೀಂಕೋರ್ಟ್ ಆರಂಭಿಸಿತ್ತು.

ರಫೇಲ್ ದಾಖಲೆ ಕದ್ದವರ ವಿರುದ್ಧ ಕ್ರಮ ಕೈಗೊಳ್ಳಿ : ರಾಹುಲ್ ಆಗ್ರಹರಫೇಲ್ ದಾಖಲೆ ಕದ್ದವರ ವಿರುದ್ಧ ಕ್ರಮ ಕೈಗೊಳ್ಳಿ : ರಾಹುಲ್ ಆಗ್ರಹ

ಆ ದಾಖಲೆ ಕಳುವಾಗಲು ಯಾರು ಕಾರಣರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ರಫೇಲ್ ಯುದ್ಧ ವಿಮಾನ ಕೊಳ್ಳುವಾಗ ಫ್ರಾನ್ಸ್ ಸರಕಾರದ ಜೊತೆ ಸಮಾನಾಂತರ ಮಾತುಕತೆ ಆರಂಭಿಸಿದ್ದಕ್ಕೆ ಪ್ರಧಾನಿ ಕಚೇರಿಯ ವಿರುದ್ಧ ತನಿಖೆ ನಡೆಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

English summary
The government's admission of theft of Rafale deal documents has supplied the Congress with fresh ammunition. Congress chief Rahul Gandhi jeered at the government, saying "gayeb ho gaya" (it is gone) will be its new "tagline".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X