ಶರದ್ ರಾಜೀನಾಮೆ ಹೇಳಿಕೆ ಬಳಿಕ ಪಕ್ಷದೊಳಗೆ ಬಿರುಗಾಳಿ?

ಮುಂಬೈ: ಶರದ್ ಪವಾರ್ ಎನ್‌ಸಿಪಿ ಅಧ್ಯಕ್ಷ ಪಟ್ಟ ತೊರೆಯುವ ಹೇಳಿಕೆ ನೀಡಿದ ಬಳಿಕ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಬುನಾದಿ ಅಲ್ಲಾಡಿ ಹೋಗಿದೆ. ಒಂದ್ಕಡೆ ಪಕ್ಷ ಛಿದ್ರವಾಗುವ ಆತಂಕ, ಮತ್ತೊಂದ್ಕಡೆ ಮುಂದಿನ ಲೋಕಸಭಾ ಎಲೆಕ್ಷನ್ ವಿಚಾರ. ಇದೆರಡರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಶರದ್ ಪವಾರ್ ಓಡಾಡುವಾಗಲೇ, ರಾಜೀನಾಮೆ ವಿಚಾರವನ್ನ ತಿಳಿಸಿದ್ದಾರೆ. ಹಾಗಾದರೆ ಎನ್‌ಸಿಪಿ ಮುಂದಿನ ಅಧ್ಯಕ್ಷ ಯಾರಾಗ್ತಾರೆ? ತಿಳಿಯೋಣ ಬನ್ನಿ.

ಮಹಾರಾಷ್ಟ್ರ ರಾಜಕಾರಣದಲ್ಲಿ ಒಂದಾನೊಂದು ಕಾಲದಲ್ಲಿ ಪ್ರಬಲ ಪಕ್ಷವಾಗಿ ಗುರುತಿಸಿಕೊಂಡಿದ್ದ ಎನ್‌ಸಿಪಿ, ಕೇಂದ್ರ ಸರ್ಕಾರ ರಚನೆಯಲ್ಲೂ ಪ್ರಭಾವ ಬೀರುವಷ್ಟು ಬಲವಾಗಿ ಬೆಳೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಎನ್‌ಸಿಪಿ ಸ್ಥಿತಿ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಎನ್‌ಸಿಪಿ ಅಧ್ಯಕ್ಷ ಪಟ್ಟ ತೊರೆಯುವ ಹೇಳಿಕೆ ನೀಡಿದ್ದಾರೆ ಶರದ್ ಪವಾರ್. ಈ ಸಮಯದಲ್ಲಿ ಎನ್‌ಸಿಪಿ ಮುಂದಿನ ಅಧ್ಯಕ್ಷರು ಯಾರು? ಎಂಬ ಪ್ರಶ್ನೆ ಮೂಡಿದ್ದು, ಶರದ್‌ ಸೋದರ ಸಂಬಂಧಿ ಅಜಿತ್‌ ಪವಾರ್‌ ಅಥವಾ ಶರದ್‌ ಪುತ್ರಿ ಸುಪ್ರಿಯಾ ಸುಳೆ ಎನ್‌ಸಿಪಿ ಪಟ್ಟ ಪಡೆಯುತ್ತಾರಾ? ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

Questions are raised after Sharads announcement to give resignation for NCP chief post

ಅಜಿತ್, ಸುಪ್ರಿಯಾ ಸುಳೆ ಒತ್ತಾಯ!

ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ನೀಡಿರುವ ರಾಜೀನಾಮೆ ವಾಪಸ್ ಪಡೆಯುವಂತೆ ಅಜಿತ್‌ ಪವಾರ್‌ ಹಾಗೂ ಸುಪ್ರಿಯಾ ಸುಳೆ ಒತ್ತಾಯಿಸುತ್ತಿದ್ದಾರೆ. ಇಷ್ಟೆಲ್ಲಾ ಒತ್ತಾಯ ಕೇಳಿಬಂದರೂ ಶರದ್‌ ಪವಾರ್ ತಮ್ಮ ನಿಲುವು ಬದಲಿಸಿಲ್ಲ. ಜೊತೆಗೆ ಹೊಸ ಅಧ್ಯಕ್ಷರ ನೇಮಕಕ್ಕೆ ಕಮಿಟಿ ರಚಿಸಬೇಕೆಂದು ಆಗ್ರಹಿಸಿರುವ ಶರದ್‌ ಪವಾರ್, ಆ ಕಮಿಟಿ ಅಧಿಕೃತವಾಗಿ ಹೊಸ ನಾಯಕನ ಆಯ್ಕೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆಯುತ್ತಿರುವ ಹೊತ್ತಲ್ಲೇ ಶರದ್ ಪವಾರ್ ಒಂದು ಗಟ್ಟಿ ನಿಲುವು ತೆಗೆದುಕೊಂಡಿದ್ದಾರೆ.

ವಿಪಕ್ಷಗಳಿಗೆ ದೊಡ್ಡ ಹಿನ್ನಡೆ?

ಹೌದು, 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಮೈತ್ರಿ ರೂಪಿಸಲು ಪ್ರಯತ್ನ ಸಾಗಿದೆ. ಇದರ ಮುಂದಾಳತ್ವ ವಹಿಸಿಕೊಂಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ವಿರೋಧ ಪಕ್ಷದ ಪ್ರತಿಯೊಬ್ಬ ನಾಯಕರನ್ನೂ ಭೇಟಿ ಮಾಡಿ, ಸಭೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶರದ್ ಪವಾರ್ ಬೆಂಬಲ ವಿಪಕ್ಷಗಳಿಗೆ ಅಗತ್ಯವಾಗಿತ್ತು. ಆದರೆ ಇದೀಗ ದಿಢೀರ್ ಶರದ್ ಪವಾರ್ ಎನ್‌ಸಿಪಿ ಅಧ್ಯಕ್ಷ ಪಟ್ಟ ತೊರೆಯುವ ಹೇಳಿಕೆ ನೀಡಿದ್ದಾರೆ. ಇನ್ನೊಂದು ಕಡೆ ಎನ್‌ಸಿಪಿ ಅಧ್ಯಕ್ಷ ಪಟ್ಟಕ್ಕಾಗಿ ಪಕ್ಷದ ಒಳಗೆ ತಿಕ್ಕಾಟ ಶುರುವಾಗಿದೆ ಎನ್ನಲಾಗುತ್ತಿದೆ.

Questions are raised after Sharads announcement to give resignation for NCP chief post

ಶರದ್ & ರಾಹುಲ್ ಗಾಂಧಿ ಭೇಟಿ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಧ್ಯೆ ಕೆಲದಿನಗಳ ಹಿಂದೆ ವಿಪಕ್ಷಗಳ ಒಗ್ಗಟ್ಟಿನ ವಿಚಾರವಾಗಿ ಗಂಭೀರ ಚರ್ಚೆ ನಡೆದಿತ್ತು. ಸಂಸತ್‌ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ಹೆಣೆಯುವ ಸಲುವಾಗಿ ಎನ್‌ಸಿಪಿ ವರಿಷ್ಠ ಪವಾರ್ ಭೇಟಿ ನೀಡಿ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಸಮಾನ ಮನಸ್ಕ ಪಕ್ಷಗಳು ಒಗ್ಗೂಡಬೇಕು ಎಂಬ ವಿಷಯ ಮೊದಲಿನಿಂದ ಚರ್ಚೆಯಲ್ಲಿತ್ತು. ಹೊಂದಾಣಿಕೆಯ ಪ್ರಕ್ರಿಯೆ ನಡೆಯುತ್ತಿರುವಾಗಲೇ ಶರದ್ ಪವಾರ್ ಎನ್‌ಸಿಪಿ ಮುಖ್ಯಸ್ಥನ ಸ್ಥಾನವನ್ನೇ ತೊರೆಯುತ್ತಿದ್ದಾರೆ.

ಒಟ್ನಲ್ಲಿ 2024ರ ಲೋಕಸಭಾ ಚುನಾವಣೆಗೆ ಮುನ್ನ ವಿಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸುವ ಚರ್ಚೆ ನಡೆಯುತ್ತಿದೆ. ಅತ್ತ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿಪಕ್ಷಗಳ ಸಂಘಟನೆ ಕಾರ್ಯ ಭರದಿಂದ ಸಾಗಿದೆ. ಕಾಂಗ್ರೆಸ್ ನಾಯಕರು ಶರದ್ ಪವಾರ್ ಜೊತೆ ಚುನಾವಣಾ ಪೂರ್ವ ಮೈತ್ರಿಗೂ ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೂಡ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಆದರೆ ಎನ್‌ಸಿಪಿ ಪಕ್ಷದಲ್ಲೇ ಈಗ ಬಿರುಗಾಳಿ ಎದ್ದಿದೆ. ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೂ ಗೊಂದಲಗಳಿಗೆ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+