ಭಾರತ ಸೇರಿ 80 ದೇಶದವರಿಗೆ ಕತಾರ್ ದೇಶಕ್ಕೆ ತೆರಳಲು ವೀಸಾ, ಶುಲ್ಕ ಇಲ್ಲ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 9 : ಭಾರತವೂ ಸೇರಿದ ಹಾಗೆ ಎಂಬತ್ತು ದೇಶಗಳ ನಾಗರಿಕರಿಗೆ ಕತಾರ್ ದೇಶಕ್ಕೆ ತೆರಳಲು ವೀಸಾ ಅಗತ್ಯವಿಲ್ಲ. ಭಾರತ, ಯುನೈಟೆಡ್ ಕಿಂಗ್ ಡಮ್, ಯುಎಸ್, ಕೆನಡಾ, ದಕ್ಷಿಣ ಆಫ್ರಿಕಾ, ಆಸ್ಟೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ ಎಂಬತ್ತು ದೇಶಗಳ ನಾಗರಿಕರಿಗೆ ವೀಸಾ ಅಗತ್ಯ ಇರುವುದಿಲ್ಲ.

ಕತಾರ್ ಗೆ ವಿಮಾನ ಯಾನ ಸೇವೆಯೂ ನೀಡದಿರಲು ನಿರ್ಧಾರ

ಈ ಎಂಬತ್ತು ದೇಶಗಳ ನಾಗರಿಕರು ಕತಾರ್ ಗೆ ಭೇಟಿ ನೀಡಲು ವೀಸಾಗೆ ಅರ್ಜಿ ಹಾಕುವ ಅಗತ್ಯವಿಲ್ಲ ಅಥವಾ ಯಾವುದೇ ಶುಲ್ಕ ಪಾವತಿಸುವುದು ಬೇಕಾಗಿಲ್ಲ ಎಂದು ಕತಾರ್ ನ ಅಧಿಕಾರಿಗಳು ತಿಳಿಸಿದ್ದಾರೆ.

Qatar offers visa-free entry to 80 nations, including India

ಕನಿಷ್ಠ ಆರು ತಿಂಗಳು ಅವಧಿಗೆ ಮಾನ್ಯತೆ ಇರುವ ಪಾಸ್ ಪೋರ್ಟ್ ಅನ್ನು ತೋರಿಸಿದರೆ ಹಾಗೂ ಹಿಂತಿರುಗುವ ಟಿಕೆಟ್ ತೋರಿಸಿದರೆ ಸಾಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯಾವ ದೇಶದ ನಾಗರಿಕರು ಎಂಬುದರ ಆಧಾರದಲ್ಲಿ 30, 90, 180 ದಿನಗಳವರೆಗೆ ಕತಾರ್ ನಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು.

ಎಂಬತ್ತು ದೇಶಗಳ ನಾಗರಿಕರು ವೀಸಾ ಆನ್ ಅರೈವಲ್ ಶುಲ್ಕದಿಂದ ವಿನಾಯ್ತಿ ಪಡೆದಿದ್ದಾರೆ. ಆ ಮೂಲಕ ಈ ಭಾಗದಲ್ಲಿ ಕತಾರ್ ಮುಕ್ತ ದೇಶವಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಕತಾರ್ ಉಚಿತ ಟ್ರಾನ್ಸಿಟ್ ವೀಸಾ ಪರಿಚಯಿಸಲಾಯಿತು. ಬೇರೆ ದೇಶಕ್ಕೆ ಹೋಗುವ ಮಾರ್ಗ ಮಧ್ಯೆ ಕನಿಷ್ಠ ಐದು ಗಂಟೆಯಿಂದ ತೊಂಬತ್ತಾರು ಗಂಟೆ ಉಳಿದುಕೊಳ್ಳಲು ಅವಕಾಶ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Citizens of 80 countries including India can now enter Qatar visa-free. The countries include India, the UK, the US, Canada, South Africa, Seychelles, Australia and New Zealand.
Please Wait while comments are loading...