ಶಾಕಿಂಗ್ ವಿಡಿಯೋ: ಗಾಯಕ ಸಿಧು ಮೂಸೆವಾಲಾ ಹತ್ಯೆ ನಂತರ ಸಂಭ್ರಮಾಚರಿಸಿದ್ದ ಹಂತಕರು
ನವದೆಹಲಿ, ಜುಲೈ 04: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಂತಕರು ಗನ್ ಹಿಡಿದು ಸಂಭ್ರಮಾಚರಣೆ ನಡೆಸುತ್ತಿರುವು ವಿಡೀಯೋ ಈಗ ಪತ್ತೆಯಾಗಿದೆ. ಬಂಧಿತ ಶೂಟರ್ ಗಳಲ್ಲಿ ಒಬ್ಬನ ಮೊಬೈಲ್‌ನಲ್ಲಿ ಈ ವಿಡಿಯೋ ಪತ್ತೆಯಾಗಿದೆ.
ಕಾರಿನಲ್ಲಿರುವ ಐವರು ಪಂಜಾಬಿ ಸಂಗೀತ ಕೇಳುತ್ತಾ ಗನ್‌ಗಳನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ. ಅವರೆಲ್ಲರೂ ಜಯದ ಚಿನ್ಹೆಯನ್ನು ತೋರಿಸುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಶೂಟರ್‌ಗಳಲ್ಲಿ ಕಿರಿಯ ಆರೋಪಿ ಅಂಕಿತ್ ಸಿರ್ಸಾ ಫೋನ್ ಅನ್ನು ಸ್ಕ್ಯಾನ್ ಮಾಡಿದ ನಂತರ ವೀಡಿಯೊ ಪತ್ತೆಯಾಗಿದೆ. ಇದೀಗ ಡಿಲೀಟ್ ಮಾಡಿರುವ ಆತನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
18 ವರ್ಷದ ಅಂಕಿತ್ ಸಿರ್ಸಾನನ್ನು ಭಾನುವಾರ ರಾತ್ರಿ ದೆಹಲಿಯ ಬಸ್ ಟರ್ಮಿನಲ್‌ನಿಂದ ಬಂಧಿಸಲಾಗಿದೆ. ಆತ ಶಿಕ್ಷೆಗೊಳಗಾದ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಕೊಲೆಯ ಪ್ರಮುಖ ಶೂಟರ್ ಎಂದು ಪೊಲೀಸರು ಬಣ್ಣಿಸಿದ್ದಾರೆ.

ಅಂಕಿತ್ ಸಿರ್ಸಾ ಗಾಯಕ ಸಿಧು ಮೂಸೆವಾಲ ಸಮೀಪ ಹೋಗಿ ಆರು ಗುಂಡುಗಳನ್ನು ಹಾರಿಸಿದ್ದಾನೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ. ಆತನ ಸಹಚರ ಸಚಿನ್ ವೀರಮಾನಿಯನ್ನೂ ಸಹ ಬಂಧಿಸಲಾಗಿದೆ.
Video of #SidhuMooseWala's killers, Priyavrat Fauji, Sachin Bhiwani & Ankit making video with holding guns in their hands. All are arrested by Delhi Police. pic.twitter.com/BLJqc7Pa2w
— Nikhil Choudhary (@NikhilCh_) July 4, 2022
ಮೇ 29ರಂದು ನಡೆದಿದ್ದ ಹತ್ಯೆ
ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪಂಜಾಬಿ ಸಮುದಾಯಗಳಲ್ಲಿ ಜನಪ್ರಿಯ ಸಂಗೀತಗಾರನಾಗಿದ್ದ ಸಿಧು ಮೂಸೆ ವಾಲಾ ಅವರನ್ನು ಮೇ 29 ರಂದು ಪಂಜಾಬ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುವ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಮುಖ ಆರೋಪಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೊಲೆಯ ಮಾಸ್ಟರ್ ಮೈಂಡ್ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಪೊಲೀಸರ ವಿಶೇಷ ದಳವು ಕಳೆದ ತಿಂಗಳು ಗುಜರಾತ್‌ನ ಕಚ್‌ನಲ್ಲಿ ಮೂವರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಯಿಂದ ಎಂಟು ಗ್ರೆನೇಡ್‌ಗಳು, 9 ಎಲೆಕ್ಟ್ರಿಕ್ ಡಿಟೋನೇಟರ್‌ಗಳು, 3 ಪಿಸ್ತೂಲ್‌ಗಳು ಮತ್ತು ಒಂದು ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಫೇಸ್‌ಬುಕ್ ಪೋಸ್ಟ್ ಮಾಡುವ ಮೂಲಕ ಗಾಯಕನ ಹತ್ಯೆಯನ್ನು ಸಂಘಟಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.












Click it and Unblock the Notifications