ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಟು ದೆಹಲಿ: ನೆಚ್ಚಿನ ಯೂಟ್ಯೂಬರ್ ಭೇಟಿಗೆ ಬಾಲಕನ 250 ಕಿ.ಮೀ ಸೈಕಲ್ ಸವಾರಿ

|
Google Oneindia Kannada News

ದೆಹಲಿ ಅಕ್ಟೋಬರ್ 8: ಯೂಟ್ಯೂಬ್ ಕ್ರೇಜ್ ನಿಂದಾಗಿ 8ನೇ ತರಗತಿಯ ಬಾಲಕನೊಬ್ಬ ಪಂಜಾಬ್ ನಿಂದ ದೆಹಲಿಗೆ 250 ಕಿಲೋಮೀಟರ್ ಸೈಕಲ್‌ನಲ್ಲಿ ಪ್ರಯಾಣಿಸಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 13 ವರ್ಷದ ಬಾಲಕ ಹಠಾತ್ತನೆ ನಾಪತ್ತೆಯಾಗಿದ್ದು, ಆತನ ಪೋಷಕರು ಹಾಗೂ ಪೊಲೀಸರು 3 ದಿನಗಳಿಂದ ಹುಡುಕಾಟ ನಡೆಸಿದ್ದು, ಬಾಲಕ ಕೊನೆಗೆ ದೆಹಲಿಯಲ್ಲಿ ಪತ್ತೆಯಾಗಿದ್ದಾನೆ.

ಸಾಮಾಜಿಕ ಮಾಧ್ಯಮಗಳು ಪ್ರಬಲವಾಗಿರುವ ಇಂದಿನ ಯುಗದಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ಅಪ್‌ಲೋಡ್ ಮಾಡುವ ಮೂಲಕ ಮತ್ತು ಲಕ್ಷಾಂತರ ಚಂದಾದಾರರನ್ನು ಪಡೆಯುವ ಮೂಲಕ ಹಣ ಸಂಪಾದಿಸಲು ಸಾಧ್ಯವಿದೆ. ಹೀಗಾಗಿ ಹಲವಾರು ಜನ ಯೂಟ್ಯೂಬ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸುವ ಮೂಲಕ ಜನಪ್ರಿಯರಾಗುತ್ತಿದ್ದಾರೆ. ದೇಶಾದ್ಯಂತ ಇಂತಹ ಅನೇಕ ಯೂಟ್ಯೂಬರ್‌ಗಳು ಇದ್ದಾರೆ. ಸದಾ ಕೈಯಲ್ಲಿ ಸೆಲ್ ಫೋನ್ ಇಟ್ಟುಕೊಂಡಿರುವ ಇಂದಿನ ಪೀಳಿಗೆ ಇಂತಹ ಯೂಟ್ಯೂಬರ್ ಗಳನ್ನು ಅತಿಯಾಗಿ ಬೆಳೆಸಿ ಪೋಷಿಸುತ್ತಿದ್ದಾರೆ. ಮಾತ್ರವಲ್ಲದೆ ಅವರನ್ನು ತಮ್ಮ ನೆಚ್ಚಿನ ನಾಯಕನನ್ನಾಗಿ ಮಾಡಿಕೊಂಡಿದ್ದಾರೆ.

ಪಂಜಾಬ್‌ನಿಂದ ದೆಹಲಿಗೆ ಸೈಕಲ್‌ನಲ್ಲಿ ಪ್ರಯಾಣಿಸಿದ ಬಾಲಕ

ಪಂಜಾಬ್‌ನಿಂದ ದೆಹಲಿಗೆ ಸೈಕಲ್‌ನಲ್ಲಿ ಪ್ರಯಾಣಿಸಿದ ಬಾಲಕ

ಯೂಟ್ಯೂಬರ್‌ಗಳನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುವ ಕೆಲವು ಮಕ್ಕಳು ತಮ್ಮ ಕುಟುಂಬಗಳಿಗೆ ತಿಳಿಯದೆ ವಿಕೃತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪಂಜಾಬ್‌ನ ಪಾಡಿಯಾಲಾ ಪ್ರದೇಶದಲ್ಲಿ ವಾಸಿಸುವ 13 ವರ್ಷದ ಬಾಲಕನೊಬ್ಬ ಮನೆಯಲ್ಲಿ ಯಾರಿಗೂ ತಿಳಿಯದಂತೆ 'ಟ್ರಿಗರ್ಡ್ ಇನ್ಸಾನ್' ಯೂಟ್ಯೂಬ್ ಚಾನೆಲ್‌ನ ನಿಶ್ಚಯ್ ಮಲ್ಹಾನ್‌ ವೀಕ್ಷಿಸಲು ಪಂಜಾಬ್‌ನಿಂದ ದೆಹಲಿಗೆ 250 ಕಿಮೀ ಸೈಕಲ್‌ನಲ್ಲಿ ಹೋಗಿದ್ದು ಹೀಗೆ.

ಮನೆಯವರಿಗೆ ತಿಳಿಸದೇ ಬಾಲಕ ದೆಹಲಿಗೆ ಪ್ರಯಾಣ

ಮನೆಯವರಿಗೆ ತಿಳಿಸದೇ ಬಾಲಕ ದೆಹಲಿಗೆ ಪ್ರಯಾಣ

ನಿಸಾಯಿ ಮಲ್ಹಾನ್ ಅವರು ತಮ್ಮ ಯೂಟ್ಯೂಬ್ ಪೇಜ್ ಟ್ರಿಗರ್ಡ್ ಇನ್ಸಾನ್‌ನಲ್ಲಿ ಅನೇಕ ಹಾಸ್ಯಮಯ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ. ಅವರು ಯೂಟ್ಯೂಬ್‌ನಲ್ಲಿ 1.7 ಕೋಟಿ ಚಂದಾದಾರರನ್ನು ಹೊಂದಿದ್ದಾರೆ. 13ರ ಹರೆಯದ ಬಾಲಕನೊಬ್ಬ ಇವರ ಅಪ್ಪಟ ಅಭಿಮಾನಿ. ಬಾಲಕ ಅವರನ್ನು ನೋಡಲು ತನ್ನ ಮನೆಗೆ ಗೊತ್ತಿಲ್ಲದೆ ದೆಹಲಿಗೆ ಹೋಗಿದ್ದಾನೆ. 8ನೇ ತರಗತಿಯ ಈ ಬಾಲಕ ನ.4ರಂದು ಏಕಾಏಕಿ ಹೊರಟು ಹೋಗಿದ್ದು, ಪೋಷಕರು ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ.

ಹುಡುಗನಿಗೆ ಏನಾಯಿತು..

ಹುಡುಗನಿಗೆ ಏನಾಯಿತು..

ಮನೆಯಲ್ಲಿದ್ದ ಬಾಲಕ ಏಕಾಏಕಿ ನಾಪತ್ತೆಯಾದ ಕಾರಣ ಬಾಲಕನಿಗೆ ಏನಾಗಿದೆ ಎಂದು ತಲೆ ಕೆಡಿಸಿಕೊಂಡ ಪೋಷಕರು ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ವಿಚಾರಣೆ ನಡೆಸಿದ್ದಾರೆ. ಆತನ ಸೈಕಲ್ ಕೂಡ ನಾಪತ್ತೆಯಾಗುತ್ತಿದ್ದಂತೆ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳ ಮೂಲಕ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕ ಸೈಕಲ್ ಮೇಲೆ ಎಲ್ಲೋ ಹೋಗಿರಬಹುದು ಎಂದು ಹೇಳಿದರು.

ಪಂಜಾಬ್‌ನಿಂದ ದೆಹಲಿಗೆ ಸೈಕಲ್‌ನಲ್ಲಿ ತೆರಳಿದ ಬಾಲಕ

ಪಂಜಾಬ್‌ನಿಂದ ದೆಹಲಿಗೆ ಸೈಕಲ್‌ನಲ್ಲಿ ತೆರಳಿದ ಬಾಲಕ

ಬಾಲಕ ಯೂಟ್ಯೂಬ್‌ನಲ್ಲಿ ಸಾಕಷ್ಟು ನಿಶ್ಚಯ್ ಮಲ್ಹಾನ್‌ ವಿಡಿಯೊಗಳನ್ನು ವೀಕ್ಷಿಸುತ್ತಿದ್ದ ಎಂದು ಪೊಲೀಸರಿಗೆ ತಿಳಿದುಬಂದಿದೆ. ಇದರಿಂದ ಎಚ್ಚೆತ್ತ ಪೊಲೀಸರು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರು ನಿಶ್ಚಯ್ ಮಲ್ಹಾನ್‌ ವಾಸವಿದ್ದ ಫ್ಲ್ಯಾಟ್‌ಗೂ ತೆರಳಿದ್ದನು. ಅದು ಅಲ್ಲಿನ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ. ಈ ವಿಚಾರ ನಿಶ್ಚಯ್ ಮಲ್ಹಾನ್‌ ಅವರಿಗೂ ತಿಳಿಸಲಾಯಿತು ಮತ್ತು ಬಾಲಕನಿಗೆ ತನ್ನ ಮನೆಗೆ ತೆರಳುವಂತೆ ವಿನಂತಿಸಿದರು.

ಕೊನೆಗೂ ಬಾಲಕನನ್ನು ಪತ್ತೆ ಮಾಡಿದ ದೆಹಲಿ ಪೊಲೀಸ್

ಕೊನೆಗೂ ಬಾಲಕನನ್ನು ಪತ್ತೆ ಮಾಡಿದ ದೆಹಲಿ ಪೊಲೀಸ್

ಅಪಾರ್ಟ್ ಮೆಂಟ್ ನಲ್ಲಿರುವ ಮಲ್ಹಾನ್ ಮನೆಗೆ ಬಾಲಕ ಹೋದಾಗ ಆತ ದುಬೈಗೆ ಹೋಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಅಪಾರ್ಟ್ ಮೆಂಟ್ ಸುತ್ತಲು ಶೋಧ ಮುಂದುವರಿಸಿದ್ದಾರೆ. ಆ ವೇಳೆ ನಿಶ್ಚಯ್ ಮಲ್ಹಾನ್‌ ನನ್ನು ಭೇಟಿಯಾಗದೆ ನಿರಾಸೆಯಿಂದ ಪಾರ್ಕ್ ಪ್ರದೇಶದಲ್ಲಿ ನಿಂತಿದ್ದ ಬಾಲಕನನ್ನು ಪೊಲೀಸರು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ತಂದೆ-ತಾಯಿಗೆ ಹೇಳದೆ ಏಕಾಂಗಿಯಾಗಿ ಸೈಕಲ್ ನಲ್ಲಿ 250 ಕಿಲೋಮೀಟರ್ ಪ್ರಯಾಣಿಸಿದ ಬಾಲಕನಿಗೆ ಪೊಲೀಸರು ಸಲಹೆ ನೀಡಿದ್ದಾರೆ. ಬಾಲಕನ ಮನೆಯವರು ದೆಹಲಿಗೆ ಬಂದು ಬಾಲಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಬಾಲಕನ ತಾಯಿಯ ಅಜ್ಜ ಕೃತಜ್ಞತೆ ಸಲ್ಲಿಸಿದ್ದಾರೆ. "ಒಳ್ಳೆಯ ಸುದ್ದಿ ಜನರೇ. ಹುಡುಗ ಪತ್ತೆಯಾಗಿದ್ದಾನೆ. ದೇವರಿಗೆ ಧನ್ಯವಾದಗಳು" ಎಂದು ಯೂಟ್ಯೂಬರ್ ಟ್ವೀಟ್ ಮಾಡಿದ್ದಾರೆ.

English summary
An incident has come to light where a 8th class boy traveled 250 kilometers from Punjab to Delhi on a cycle to meet his favorite YouTuber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X