ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಕಳ್ಳಸಾಗಣೆದಾರರಿಗೆ ಗಲ್ಲು ಶಿಕ್ಷೆ, ಪಂಜಾಬ್ ಸರಕಾರದ ತೀರ್ಮಾನ

By Sachhidananda Acharya
|
Google Oneindia Kannada News

ಚಂಡೀಗಢ, ಜುಲೈ 2: ಮಾದಕ ವಸ್ತುಗಳ ಬಳಕೆ ಮಿತಿ ಮೀರಿರುವ ಪಂಜಾಬ್ ನಲ್ಲಿ ಡ್ರಗ್ಸ್ ಕಳ್ಳಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಲ್ಲಿನ ಕಾಂಗ್ರೆಸ್ ಸರಕಾರ ತೀರ್ಮಾನಿಸಿದೆ.

ಮಾದಕ ವಸ್ತು ಕಳ್ಳ ಸಾಗಣೆ ಮತ್ತು ದಂಧೆ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋರಿ ಪಂಜಾಬ್ ಸಂಪುಟ ಸಭೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, "ಡ್ರಗ್ಸ್ ದಂಧೆಯಲ್ಲಿರುವವರು ಮತ್ತು ಕಳ್ಳ ಸಾಗಣೆದಾರರಿಗೆ ಮರಣದಂಡನೆ ನೀಡಲು ನಿರ್ಧರಿಸಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುವುದು," ಎಂದು ಮಾಹಿತಿ ನೀಡಿದ್ದಾರೆ.

Punjab govt sends recommendation to center for death penalty to drug smugglers

"ಮಾದಕ ವ್ಯಸನ ದಂಧೆ ತಲೆಮಾರುಗಳನ್ನೇ ನಾಶ ಮಾಡುತ್ತಿರುವುದರಿಂದ ಈ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಅರ್ಹವಾಗಿದೆ. ಮಾದಕ ಪದಾರ್ಥ ಮುಕ್ತ ಪಂಜಾಬ್ ನಿರ್ಮಾಣ ಮಾಡಲು ನಾನು ಬದ್ಧವಾಗಿದ್ದೇನೆ," ಎಂದು ಸಿಂಗ್ ಪುನರುಚ್ಛರಿಸಿದ್ದಾರೆ.

ಪಂಜಾಬ್ ನಿಂದ ಮಾದಕ ವಸ್ತುಗಳನ್ನು ನಿರ್ಮೂಲನ ಮಾಡುತ್ತೇವೆ ಎಂಬ ಆಶ್ವಾಸನೆ ಮೇಲೆಯೇ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಇದೀಗ ಇದೇ ದಾರಿಯಲ್ಲಿ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಿಂಗ್ ಸರಕಾರ ಮುಂದಾಗಿದೆ.

English summary
Punjab Cabinet decides to send a formal recommendation to the Centre over death penalty for drug peddlers and smugglers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X