ಮೂಢನಂಬಿಕೆಯ ಪರಮಾವಧಿ ಅಂದರೆ ಇದೇನಾ?

ಜಲಂಧರ್, ಜೂನ್, 14: ಇದನ್ನು ಮೂಢನಂಬಿಕೆಯ ಪರಮಾವಧಿ ಎಂದರೂ ತಪ್ಪಿಲ್ಲ. ಗಂಭೀರ ಗಾಯಗೊಂಡ ಆರು ವರ್ಷದ ಹುಡುಗನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಕೊಡುವುದೇ ಬೇಡ ಎಂದು ತಂದೆ-ತಾಯಿಯೇ ಹೇಳುತ್ತಿದ್ದಾರೆ.

ಕೆಂಡ ಹಾಯುವಾಗ ತಂದೆಯ ಹೆಗಲ ಮೇಲೆ ಇದ್ದ ಮಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಉರಿಯುತ್ತಿರುವ ಕೆಂಡದ ಮೇಲೆ ಬಿದ್ದ ಆರು ವರ್ಷದ ಕಾರ್ತಿಕ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. [ಉಡ್ತಾ ಪಂಜಾಬ್‌ಗೆ ಒಂದೇ ಕತ್ತರಿ ಸಾಕೆಂದ ಮುಂಬೈ ಹೈಕೋರ್ಟ್]

punjab

ಪಂಜಾಬ್ ನ ಜಲಂಧರ್ ಮಾ ಮಾರಿಯಮ್ಮಾ ಹಬ್ಬದಲ್ಲಿ ಸಂಪ್ರದಾಯದಂತೆ ಕೆಂಡ ಹಾಯುವ ವೇಳೆ ದುರ್ಘಟನೆ ಸಂಭವಿಸಿದೆ. ದೇವರ ಕಾರ್ಯದ ವೇಳೆ ಅವಘಡವಾಗಿದೆ, ದೇವರೇ ಬಂದು ಮಗುವನ್ನು ರಕ್ಷಣೆ ಮಾಡುತ್ತಾನೆ. ಮಗುವನ್ನು ಆಸ್ಪತ್ರೆಗೆ ಸೇರಿವುದೇ ಬೇಡ ಎಂದು ತಂದೆ-ತಾಯಿ ಪಟ್ಟು ಹಿಡಿದು ಕುಳಿತುಕೊಂಡಿದ್ದರು. ಆದರೆ ಸೇರಿದ್ದ ಜನರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.[ತುಮಕೂರು : ಕೊಂಡ ಹಾಯುವ ವೇಳೆ 30 ಜನರಿಗೆ ಗಾಯ]

ಕಳೆದ ಮಾರ್ಚ್ ತಿಂಗಳಿನಲ್ಲಿ ಕೆಂಡ ಹಾಯುವ ವೇಳೆ ಆಯ ತಪ್ಪಿ ಬಿದ್ದ ಯುವಕನನ್ನು ರಕ್ಷಣೆ ಮಾಡಲು ಹೋಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ತುಮಕೂರಿನಲ್ಲಿ ನಡೆದಿತ್ತು. ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಗ್ರಾಮದ ಗ್ರಾಮ ದೇವತೆ ಜಾತ್ರೆಯ ವೇಳೆ ಈ ದುರ್ಘಟನೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+