ಪಂಜಾಬ್ ಚುನಾವಣೆ: ಭರ್ಜರಿ ಪೈಪೋಟಿಗೆ ಸಾಕ್ಷಿಯಾಗಲಿದೆ 'ಲಂಬಿ'

By: ಅನುಷಾ ರವಿ
Subscribe to Oneindia Kannada

ಚಂಡೀಗಡ, ಜನವರಿ 14: ಪಂಜಾಬ್ ಚುನಾವಣೆಯಲ್ಲಿ ಲಂಬಿ ವಿಧಾನಸಭೆ ಕ್ಷೇತ್ರ ಪೈಪೋಟಿಯ ಕಾದಾಟಕ್ಕೆ ಸಾಕ್ಷಿಯಾಗುವಂತಿದೆ. ಆ ಕ್ಷೇತ್ರದಿಂದ ಹಾಲಿ ಮುಖ್ಯಮಂತ್ರಿ-ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಕಣಕ್ಕಿಳಿಯಲಿದ್ದಾರೆ. ಅವರ ಎದುರು ಕಾಂಗ್ರೆಸ್ ನಿಂದ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ರಣಾಂಗಣಕ್ಕಿಳಿಯುವ ಸಾಧ್ಯತೆ ಇದೆ.

ಪಂಜಾಬ್ ನಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಕಾಂಗ್ರೆಸ್ ಗೆ ಇದರಿಂದ ಅನುಕೂಲ ಆಗುವ ಸಾಧ್ಯತೆ ಇದೆ ಎಂದು ಪಕ್ಷವು ನಂಬಿದೆ. ಈ ಬಗ್ಗೆ ಶನಿವಾರ ಮಾಧ್ಯಮದ ಜತೆ ಮಾತನಾಡಿದ ಅಮರಿಂದರ್ ಸಿಂಗ್, ಕಾಂಗ್ರೆಸ್ ಹೈಕಮಾಂಡ್ ಜತೆಗೆ ಈ ಬಗ್ಗೆ ಚರ್ಚಿಸಿದ್ದೇನೆ. ಸ್ಪರ್ಧೆ ಬಗ್ಗೆ ಅಧಿಕೃತ ಘೋಷಣೆ ಸದ್ಯದಲ್ಲೆ ಹೊರಬೀಳಲಿದೆ ಎಂದಿದ್ದಾರೆ.[ಉಪ್ರ ಚುನಾವಣೆ ಪೋಸ್ಟರ್ ಗಳಲ್ಲಿ ಡಿಂಪಲ್-ಪ್ರಿಯಾಂಕಾ ಕಾರುಬಾರು]

Amarinder singh

"ಬಾದಲ್ ವಿರುದ್ಧ ಸ್ಪರ್ಧಿಸಲು ಅವಕಾಶ ನೀಡುವಂತೆ ನಾನು ಪಕ್ಷದ ಹೈ ಕಮಾಂಡ್ ಗೆ ಮನವಿ ಮಾಡಿದ್ದೇನೆ. ಈತ ಪಂಜಾಬ್ ನ ಪೂರ್ತಿ ಹಾಳುಗೆಡವಿದ್ದಾರೆ" ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಈ ನಿರ್ಧಾರದ ಹಿಂದೆ ಲೆಕ್ಕಾಚಾರವೂ ಇದೆ. ಬಾದಲ್ ಅವರನ್ನು ತವರೂರಿನಲ್ಲೇ ಮಣಿಸುವ ಇರಾದೆ ಇದೆ. ಇದರ ಜೊತೆಗೆ ಸುಖ್ ಬೀರ್ ಸಿಂಗ್ ಬಾದಲ್ ಗೂ ಸವಾಲು ಹಾಕುವ ಸಾಮರ್ಥ್ಯ ಇದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಸೇರುವ ಸಾಧ್ಯತೆ ಇದ್ದು, ಹಾಗೊಂದು ವೇಳೆ ಆದರೆ ಸಿಧು ಪತ್ನಿ ಹೇಳಿರುವಂತೆ ಅಮೃತ್ ಸರ್ ಪೂರ್ವದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾ.ಅಮರಿಂದರ್ ಸಿಂಗ್ ತಿಳಿಸಿದ್ದಾರೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The fight from Lambi constituency of Punjab in the upcoming assembly bill has become interesting with Congress all set to field their state President Capt Amarinder Singh against Punjab Chief Minister Parkash Singh Badal.
Please Wait while comments are loading...