ಪುಣೆ ಬಂದ್: ಮಹಾ ವಿಕಾಸ್ ಅಘಾಡಿಯಿಂದ ಮೌನ ಮೆರವಣಿಗೆ - ರಸ್ತೆಗಳು ಬಂದ್
ಪುಣೆ ಡಿಸೆಂಬರ್ 13: ಪುಣೆಯಲ್ಲಿ ಮಹಾವಿಕಾಸ್ ಅಘಾಡಿ ಮತ್ತು ಹಲವಾರು ಸಂಘಟನೆಗಳು ಇಂದು ಬಂದ್‌ಗೆ ಕರೆ ನೀಡಿವೆ. ಮರಾಠ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ.
ರಾಜ್ಯಪಾಲ ಕೊಶ್ಯಾರಿ ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು ಹಳೆಯ ಕಾಲದ ಐಕಾನ್. ಆದರೆ ಈಗ ಡಾ ಬಿಆರ್ ಅಂಬೇಡ್ಕರ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಆಧುನಿಕ ಕಾಲದ ಐಕಾನ್‌ಗಳು ಎಂದು ಕರೆದರು. ಈ ಹೇಳಿಕೆ ಸದ್ಯ ವಿವಾದವನ್ನು ಹುಟ್ಟು ಹಾಕಿದೆ. ಮರಾಠಿ ಐಕಾನ್ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಪ್ರತಿಭಟನೆಯ ಸಂಕೇತವಾಗಿ ಮಂಗಳವಾರ (ಡಿಸೆಂಬರ್ 13) ಬೆಳಗ್ಗೆ ಡೆಕ್ಕನ್ ಜಿಮ್ಖಾನಾದ ಸಂಭಾಜಿ ಮಹಾರಾಜರ ಪ್ರತಿಮೆಯಿಂದ ಲಾಲ್ ಮಹಲ್ ವರೆಗೆ ಮೌನ ಮೆರವಣಿಗೆ ನಡೆಯಲಿದೆ. ಮೌನ ಮೆರವಣಿಗೆ ಸಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹಲವು ಮಾರ್ಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಸಂಚಾರ ಪೊಲೀಸರು ಕೆಲವು ಮಾರ್ಗಗಳನ್ನು ಬದಲಾಯಿಸುವಂತೆ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದ್ದಾರೆ.

ವಿವಾದ ಸೃಷ್ಟಿಸುತ್ತಿರುವ ಮಹಾರಾಷ್ಟ್ರ ರಾಜ್ಯಪಾಲರ ಬಗ್ಗೆ ಬಿಜೆಪಿಯ ಉನ್ನತ ನಾಯಕರು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. "ರಾಜ್ಯಪಾಲ ಕೊಶ್ಯಾರಿ ಅವರಿಗೆ ಛೀಮಾರಿ ಹಾಕಲಾಗುತ್ತಿದ್ದು, ಅವರನ್ನು ಚಿಕ್ಕ ರಾಜ್ಯಕ್ಕೆ ವರ್ಗಾಯಿಸಬಹುದು. ರಾಜ್ಯಪಾಲರು ರಾಜ್ಯದ ನಾಯಕರು ಮತ್ತು ಐಕಾನ್‌ಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಪ್ರತಿಪಕ್ಷಗಳ ಕೈಗೆ ಅಸ್ತ್ರಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ" ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಹಾ ವಿಕಾಸ್ ಅಘಾಡಿಯಿಂದ ಬೃಹತ್ ಮೌನ ಮೆರವಣಿಗೆ ಸಾಗಲಿದ್ದು ಹಲವೆಡೆ ರಸ್ತೆಗಳು ಬಂದ್ ಆಗಲಿವೆ. ಲಕ್ಷ್ಮಿ ರಸ್ತೆ - ಸೋನ್ಯಾ ಮಾರುತಿ ಚೌಕ್‌ನಿಂದ ಅಲ್ಕಾ ಟಾಕೀಸ್ ಚೌಕ್, ಶಿವಾಜಿ ರಸ್ತೆ - ಸ.ಗೋ. ಬಾರ್ವೆ ಚೌಕ್‌ನಿಂದ ಬೆಲ್‌ಬಾಗ್ ಚೌಕ್,
ಬಾಜಿರಾವ್ ರಸ್ತೆ - ಪುರಂ ಚೌಕ್‌ನಿಂದ ಅಪ್ಪಾ ಬಲ್ವಂತ್ ಚೌಕ್, ಗಣೇಶ್ ರಸ್ತೆ - ಫಡ್ಕೆ ಹೌದ್‌ನಿಂದ ಜಿಜಾಮಾತಾ ಚೌಕ್ ವರೆಗೆ ಸಂದರ್ಭಕ್ಕನುಗುಣವಾಗಿ ಮಾರ್ಗ ಬದಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಮೌನ ಮೆರವಣಿಗೆ ಮುಗಿಯುವವರೆಗೆ ಬೆಲ್‌ಬಾಗ್ ಚೌಕ್‌ನಿಂದ ತಿಲಕ್ ಚೌಕ್‌ಗೆ ಯಾವುದೇ ಪಾರ್ಕಿಂಗ್ ಗೆ ಅವಕಾಶವಿಲ್ಲ ಎನ್ನಲಾಗಿದೆ. ಮೌನ ಮೆರವಣಿಗೆಯ ಅವಧಿಯಲ್ಲಿ ಮೇಲೆ ತಿಳಿಸಿದ ಮಾರ್ಗಗಳಲ್ಲಿನ ಸಂಚಾರವನ್ನು ಅಗತ್ಯವಿರುವಂತೆ ಮುಚ್ಚಲಾಗುತ್ತದೆ. ಪ್ರಯಾಣಿಕರು ಬಯಸಿದ ಗಮ್ಯಸ್ಥಾನವನ್ನು ತಲುಪಲು ತಿಲಕ್ ರಸ್ತೆ, ಕೇಳ್ಕರ್ ರಸ್ತೆ ಮತ್ತು ಕುಮ್ತೇಕರ್ ರಸ್ತೆಯನ್ನು ಬಳಸಬೇಕು.












Click it and Unblock the Notifications