ಪುಲ್ವಾಮಾ 'ಮ್ಯಾಚ್ ಫಿಕ್ಸಿಂಗ್': ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ವಿವಾದಕಾರಿ ಹೇಳಿಕೆ
ನಾವೆಲ್ಲಾ ಕೇಂದ್ರ ಸರಕಾರದ ಜೊತೆಗಿದ್ದೇವೆ, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್ ನಾಯಕರ ಅಸಂಬದ್ದ ಹೇಳಿಕೆಗಳು ಮುಂದುವರಿದಿದೆ.
Recommended Video

ನಾವೆಲ್ಲಾ ಕೇಂದ್ರ ಸರಕಾರದ ಜೊತೆಗಿದ್ದೇವೆ, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್ ನಾಯಕರ ಅಸಂಬದ್ದ ಹೇಳಿಕೆಗಳು ಮುಂದುವರಿದಿದೆ. ಈ ಸಾಲಿಗೆ, ಹಿರಿಯ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಸೇರ್ಪಡೆಯಾಗಿದ್ದಾರೆ.
ಸದಾ ವಿವಾದಕಾರಿ ಹೇಳಿಕೆ ನೀಡುವಲ್ಲಿ ಮಂಚೂಣಿಯಲ್ಲಿ ಬರುವ ಹರಿಪ್ರಸಾದ್, ಪುಲ್ವಾಮಾ ಘಟನೆ ಒಂದು 'ಮ್ಯಾಚ್ ಫಿಕ್ಸಿಂಗ್' ಎನ್ನುವ ಹೇಳಿಕೆಯನ್ನು ನೀಡುವ ಮೂಲಕ, ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಹಿಂದೆ ಹಂದಿಜ್ವರದಿಂದ ಬಳಲುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಹರಿಪ್ರಸಾದ್, ಹಂದಿಜ್ವರದ ಜತೆ ವಾಂತಿ ಬೇಧಿನೂ ಆಗುತ್ತೆ ಅಂತ ವಿಕೃತ ವ್ಯಂಗ್ಯವಾಡಿದ್ದರು.
ದನದ ಮಾಂಸ ಪತ್ತೆ ಹಚ್ಚುವ ಕೇಂದ್ರ ಸರಕಾರಕ್ಕೆ, ಮುನ್ನೂರೈವತ್ತು ಕೆಜಿ ಆರ್ಡಿಎಕ್ಸ್ ಪತ್ತೆಹಚ್ಚಲು ಸಾಧ್ಯವಾಗಲಿಲ್ಲವೇ ಎಂದು ನಾಲಿಗೆ ಹರಿಯ ಬಿಟ್ಟಿರುವ ಹರಿಪ್ರಸಾದ್, ರಫೇಲ್ ವಿಚಾರದಲ್ಲಿ ಕೇಂದ್ರ ಸರಕಾರದ ಬಣ್ಣ ಬಯಲಾಗಲಿದೆ ಎಂದು ಹೇಳಿದ್ದಾರೆ. ಪುಲ್ವಾಮಾ ಘಟನೆಯ ಬಗ್ಗೆ ಹರಿಪ್ರಸಾದ್ ಹೇಳಿದ್ದು, ಮುಂದೆ ಓದಿ

ದನದ ಮಾಂಸವನ್ನು ಪತ್ತೆಹಚ್ಚುವ ನರೇಂದ್ರ ಮೋದಿ ಸರಕಾರ
ಅಕ್ಲಾಕ್ ಮನೆಯಲ್ಲಿ, ಕೇರಳದ ಮನೆಮನೆಗಳಲ್ಲಿ ದನದ ಮಾಂಸವನ್ನು ಪತ್ತೆಹಚ್ಚುವ ನರೇಂದ್ರ ಮೋದಿ ಸರಕಾರಕ್ಕೆ ಅಷ್ಟೊಂದು ಅಗಾಧ ಪ್ರಮಾಣದಲ್ಲಿ ಬಾಂಬ್ ಸ್ಪೋಟಕಗಳು ದೇಶದೊಳಗೆ ಬಂದಿರುವುದು ಗೊತ್ತಾಗಲಿಲ್ಲವೇ, ಇದು ಗುಪ್ತಚರ ವೈಫಲ್ಯ ಅಲ್ಲವೇ ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಮೋದಿ ಮತ್ತು ಇಮ್ರಾನ್ ಖಾನ್ ನಡುವಿನ 'ಮ್ಯಾಚ್ ಫಿಕ್ಸಿಂಗ್'
ಪುಲ್ವಾಮಾ ಘಟನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಡುವಿನ 'ಮ್ಯಾಚ್ ಫಿಕ್ಸಿಂಗ್' ಎನ್ನುವ ತೀರಾ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಫಿಕ್ಸಿಂಗ್ ನಡೆಯದೇ ಇದ್ದಲ್ಲಿ, ಪುಲ್ವಾಮಾ ಘಟನೆ ನಡೆಯುತ್ತಿರಲಿಲ್ಲ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಬೈಪಾಸ್ ನಲ್ಲಿ ಬಾಂಬ್ ಸ್ಫೋಟಕಗಳು ಇದ್ದದ್ದು ಗೊತ್ತಾಗಲಿಲ್ಲವೇ
ದೇಶದ ಭದ್ರತೆಯ ಬಗ್ಗೆ ಗಂಟೆಗಟ್ಟಲೇ ಭಾಷಣ ಮಾಡುವ ನಮ್ಮ ಪ್ರಧಾನಿಗೆ, 350 ಕೆಜಿ ಆರ್ಡಿಎಕ್ಸ್ ಬಂದಿದ್ದು ಗೊತ್ತಾಗಲಿಲ್ಲವೇ? ಅಖ್ಲಾಕ್ ಮನೆಯಲ್ಲಿ ಎರಡು ಕೆಜಿ ದನದ ಮಾಂಸ ಇದ್ದದ್ದು ಗೊತ್ತಾಯಿತು, ಬೈಪಾಸ್ ನಲ್ಲಿ ಬಾಂಬ್ ಸ್ಫೋಟಕಗಳು ಇದ್ದದ್ದು ಗೊತ್ತಾಗಲಿಲ್ಲವೇ ಎಂದು ಬಿ ಕೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

ಪ್ರತಿಕ್ರಿಯೆಗೆ ಯೋಗ್ಯವಾದುದಲ್ಲ, ರವಿಶಂಕರ್ ಪ್ರಸಾದ್
ಹರಿಪ್ರಸಾದ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಗೆ ದೇಶದ ಕಾನೂನಿನ ಮೇಲೆ ಏನು ಬೆಲೆಯಿಲ್ಲವೋ, ಅದೇ ರೀತಿ ಅವರ ಪಕ್ಷದವರಿಗೂ ಕೂಡಾ.. ರಫೇಲ್ ನಲ್ಲಿ ಆರ್ಥಿಕ ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂಕೋರ್ಟ್ ಹಿಂದೆ ಹೇಳಿದ ಮೇಲೂ ಬೇಕಾಬಿಟ್ಟಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಪುಲ್ವಾಮಾ ಘಟನೆಯ ಬಗ್ಗೆ ಹರಿಪ್ರಸಾದ್ ನೀಡಿರುವ ಹೇಳಿಕೆ, ಪ್ರತಿಕ್ರಿಯೆಗೆ ಯೋಗ್ಯವಾದುದಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಪುಲ್ವಾಮಾ ಘಟನೆಯನ್ನು ಶಂಕಿಸುತ್ತಾ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆಯ ವೇಳೆಯೇ ಕೇಂದ್ರ ಸರಕಾರ ಯುದ್ದ ಸಾರಲು ಮುಂದಾಗಿದೆಯೇ? ಪುಲ್ವಾಮಾ ಘಟನೆಯನ್ನು ಇಟ್ಟುಕೊಂಡು ಬಿಜೆಪಿ ಮತ್ತು ಸಂಘ ಪರಿವಾರ, ದೇಶದಲ್ಲಿ ಕೋಮು ಅಶಾಂತಿ ಸೃಷ್ಟಿಸಲು ಮುಂದಾಗಿದೆಯೇ ಎಂದು ಮಮತಾ ಶಂಕೆ ವ್ಯಕ್ತಪಡಿಸಿದ್ದರು.












Click it and Unblock the Notifications