ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ : ಸ್ಫೋಟಕ್ಕೆ ಪಾಕ್‌ ಸೈನ್ಯದಿಂದ ಆರ್‌ಡಿಎಕ್ಸ್‌ ಪೂರೈಕೆ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Pulwama : ಪುಲ್ವಾಮಾ ದಾಳಿಗೆ ಆರ್‍ಡಿಎಕ್ಸ್ ಪೂರೈಕೆ ಮಾಡಿದವರು ಇವರೇ... | Oneindia Kannada

ಬೆಂಗಳೂರು, ಫೆಬ್ರವರಿ 25 : ಪುಲ್ವಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಯೋಧರು ಸಂಚರಿಸುತ್ತಿದ್ದ ಬಸ್ಸಿನ ಮೇಲೆ ದಾಳಿ ಮಾಡಲು ಪಾಕಿಸ್ತಾನದಿಂದ ಆರ್‌ಡಿಎಕ್ಸ್‌ಗಳನ್ನು ತರಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಒನ್ ಇಂಡಿಯಾ ಜೊತೆಗೆ ಮಾತನಾಡಿದ ಎನ್‌ಐಎ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ. ಫೆ.14ರಂದು ನಡೆದ ಪುಲ್ವಮಾ ದಾಳಿಗೂ ಒಂದು ವಾರ ಮೊದಲೇ ಪಾಕಿಸ್ತಾನದಿಂದ ಆರ್‌ಡಿಎಕ್ಸ್‌ ಅನ್ನು ಕಳ್ಳಸಾಗಣೆ ಮೂಲಕ ತರಲಾಗಿತ್ತು ಎಂದು ಹೇಳಿದ್ದಾರೆ.

ಕಾಶ್ಮೀರಿ ಯುವಕರು ಬಾಯ್ಬಿಟ್ಟರು ಸ್ಫೋಟಕ ಮಾಹಿತಿಕಾಶ್ಮೀರಿ ಯುವಕರು ಬಾಯ್ಬಿಟ್ಟರು ಸ್ಫೋಟಕ ಮಾಹಿತಿ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪುರ್‌ನಲ್ಲಿ ಉಗ್ರರು ಸೇನಾ ವಾಹನದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸೇನಾ ವಾಹನಕ್ಕೆ ಸ್ಫೋಟಕಗಳನ್ನು ತುಂಬಿಸಿದ್ದ ಕಾರನ್ನು ಡಿಕ್ಕಿ ಹೊಡೆಸಿದ್ದ.

ಪುಲ್ವಾಮಾ ದಾಳಿ: ಸಿಸಿಟಿವಿ ಫೂಟೇಜ್ ನಲ್ಲಿ ಸ್ಫೋಟಕ್ಕೆ ಬಳಸಿದ ಕಾರು ಪತ್ತೆಪುಲ್ವಾಮಾ ದಾಳಿ: ಸಿಸಿಟಿವಿ ಫೂಟೇಜ್ ನಲ್ಲಿ ಸ್ಫೋಟಕ್ಕೆ ಬಳಸಿದ ಕಾರು ಪತ್ತೆ

ಕೆಂಪು ಬಣ್ಣದ ಮಾರುತಿ ಇಕೋ ಕಾರನ್ನು ದಾಳಿಗೆ ಬಳಸಲಾಗಿತ್ತು. ಎನ್‌ಐಎ ತನಿಖೆಯ ವೇಳೆ ಇನ್ನೂ ಇಬ್ಬರು ಉಗ್ರ ಆದಿಲ್ ಅಹ್ಮದ್ ದಾರ್‌ಗೆ ಸಹಾಯ ಮಾಡಿದ್ದರು ಎಂಬುದು ಪತ್ತೆಯಾಗಿದೆ. ಸರ್ವೀಸ್ ರಸ್ತೆಯ ಮೂಲಕ ಸ್ಫೋಟಕ ತುಂಬಿದ್ದ ಕಾರನ್ನು ಅಹ್ಮದ್ ಹೆದ್ದಾರಿಗೆ ತೆಗೆದುಕೊಂಡು ಬಂದಿದ್ದ.

ಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆಕಾಶ್ಮೀರದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರ ಹತ್ಯೆ

ಜೈಷ್‌-ಎ-ಮೊಹಮ್ಮದ್ ಸಂಘಟನೆ

ಜೈಷ್‌-ಎ-ಮೊಹಮ್ಮದ್ ಸಂಘಟನೆ

ಪುಲ್ವಮಾ ದಾಳಿಗೆ ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆ ಭಾರತದಿಂದ ಆರ್‌ಡಿಎಕ್ಸ್ ಸಂಗ್ರಹ ಮಾಡಿಲ್ಲ. ಪಾಕಿಸ್ತಾನದ ಸೇನೆ ಆರ್‌ಡಿಎಕ್ಸ್ ಪೂರೈಕೆ ಮಾಡಿದ್ದು ದಾಳಿಗೂ ಒಂದು ವಾರದ ಮೊದಲು ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯರು ಪ್ರವಾಸಿಗರ ಸೋಗಿನಲ್ಲಿ ಸ್ಫೋಟಕಗಳನ್ನು ಗಡಿಯ ಮೂಲಕ ಕಾಶ್ಮೀರಕ್ಕೆ ತಂದಿದ್ದಾರೆ.

ಉಚಿತವಾಗಿ ನೀಡುತ್ತದೆ ಪಾಕ್ ಸೇನೆ

ಉಚಿತವಾಗಿ ನೀಡುತ್ತದೆ ಪಾಕ್ ಸೇನೆ

ಉಗ್ರ ಸಂಘಟನೆ ದಾಳಿಗಳನ್ನು ನಡೆಸಲು ಸ್ಫೋಟಕಗಳನ್ನು ಪಾಕ್ ಸೈನ್ಯ ಉಚಿತವಾಗಿ ನೀಡುತ್ತದೆ. ಜೈಷ್‌-ಎ-ಮೊಹಮ್ಮದ್ ಸಂಘಟನೆಗೆ ಬೆಂಬಲ ನೀಡುವ ಹಲವು ಜನರು ಕಾಶ್ಮೀರದಲ್ಲಿಯೂ ಇದ್ದು, ಅವರ ಬೆಂಬಲ ಪಡೆದು ಆರ್‌ಡಿಎಕ್ಸ್‌ ಅನ್ನು ಕಾಶ್ಮೀರಕ್ಕೆ ತರಲಾಗಿದೆ. ಯಾವ ಪ್ರದೇಶದಿಂದ ಸ್ಫೋಟಕ ಸಾಗಣೆಯಾಗಿದೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

ಮೂರು ಜನರ ತಂಡದಿಂದ ದಾಳಿ

ಮೂರು ಜನರ ತಂಡದಿಂದ ದಾಳಿ

ಪುಲ್ವಮಾದಲ್ಲಿ ಫೆ.14ರಂದು ನಡೆದ ದಾಳಿ ಹಿಂದೆ ಮೂವರ ಕೈವಾಡವಿದೆ. ಜೈಷ್‌-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ್ದ ಕೆಂಪು ಮಾರುತಿ ಇಕೋ ಕಾರನ್ನು 5ನೇಯ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಸಿ ತನ್ನನ್ನು ಸ್ಫೋಟಿಸಿಕೊಂಡಿದ್ದ. ಉಳಿದ ಇಬ್ಬರು ಉಗ್ರ ಆದಿಲ್ ಅಹ್ಮದ್‌ಗೆ ಸಹಾಯ ಮಾಡಿದ್ದರು.

ಹಲವರ ಮೇಲೆ ಎನ್‌ಐಎ ಕಣ್ಣು

ಹಲವರ ಮೇಲೆ ಎನ್‌ಐಎ ಕಣ್ಣು

ಜೈಷ್‌-ಎ-ಮೊಹಮ್ಮದ್ ಕಾಶ್ಮೀರದಲ್ಲಿ ಹಲವು ಯುವಕರನ್ನು ತನ್ನ ತಳ ಮಟ್ಟದ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದೆ. ದಾಳಿ ನಡೆಸುವ ಸಂದರ್ಭದಲ್ಲಿ ಈ ಯುವಕರು ಉಗ್ರ ಸಂಘಟನೆಗಳಿಗೆ ಅಗತ್ಯ ವಸ್ತು ಪೂರೈಕೆಯಲ್ಲಿ ಸಹಾಯ ಮಾಡುತ್ತಾರೆ. ಎನ್‌ಐಎ ಕಾಶ್ಮೀರದ ಹಲವು ಯುವಕರ ಮೇಲೆ ಈಗಾಗಲೇ ನಿಗಾ ಇಟ್ಟಿದ್ದು, ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.

English summary
National Investigation Agency said that Pakistan military provided the RDX and that was moved into Kashmir from across the border weeks before the Pulwama attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X