ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾನಿಯಾ, ಮೊದಲು ನಿಮ್ಮ ದೇಶಪ್ರೇಮ ಸಾಬೀತುಪಡಿಸಿ : ಟ್ವೀಟ್ಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 18 : ಪಾಕಿಸ್ತಾನದ ಸೊಸೆ, ಭಾರತದ ಹೆಮ್ಮೆಯ ಟೆನಿಸ್​ ತಾರೆ ಸಾನಿಯಾ ಮಿರ್ಜಾ ಅವರು ಪುಲ್ವಾಮಾ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ ಎಂದಿದ್ದಾರೆ.

ಸಾನಿಯಾ ಅವರು ಈ ಕುರಿತಂತೆ ಭಾನುವಾರದಂದು ಸುದೀರ್ಘವಾದ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಹಾಗೂ ಅವರ ಕುಟುಂಬದ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

ನಮ್ಮ ದೇಶವನ್ನು ರಕ್ಷಿಸುವ ಯೋಧರು ನಿಜವಾದ ಹೀರೋಗಳು ಎಂದು ಹೇಳಿದಾರೆ. ಇಂಥ ದುರಂತ, ಇಂಥ ದಿನ ಮತ್ತೊಮ್ಮೆ ನೋಡುವ ದಿನ ಬಾರದಿರಲಿ ಎಂದಿದ್ದಾರೆ.

ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳುಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು

ಪಾಕಿಸ್ತಾನದ ಸೊಸೆಯಾದ್ರೂ, ಭಾರತದ ಪರ ಟೆನಿಸ್ ಆಡುತ್ತಿದ್ದ ಸಾನಿಯ ಮಿರ್ಜಾ ಅವರ ದೇಶಪ್ರೇಮದ ಬಗ್ಗೆ ಅನೇಕ ಬಾರಿ ಟೀಕೆಗಳು ಕೇಳಿ ಬಂದರೂ ಎದೆಗುಂದದೆ ದಿಟ್ಟ ಉತ್ತರ ನೀಡುತ್ತಾ ಬಂದಿದ್ದಾರೆ.

ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?
ಪುಲ್ವಾಮಾ ದಾಳಿ ಬಗ್ಗೆ ಟ್ವೀಟ್ ಮಾಡಿದ ಸಾನಿಯಾರನ್ನು ಮತ್ತೊಮ್ಮೆ ನಿಮ್ಮ ದೇಶ ಪ್ರೇಮವನ್ನು ಸಾಬೀತುಪಡಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದೀರ್ಘವಾದ ಟ್ವೀಟ್ ಮಾಡಿದ್ದಾರೆ

ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ ಎಂದಿದ್ದಾರೆ. ಸಾನಿಯಾ ಅವರು ಈ ಕುರಿತಂತೆ ಭಾನುವಾರದಂದು ಸುದೀರ್ಘವಾದ ಟ್ವೀಟ್ ಮಾಡಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಸೈನಿಕರು ಹಾಗೂ ಅವರ ಕುಟುಂಬದ ಪರವಾಗಿ ನಿಲ್ಲುತ್ತೇನೆ ಎಂದಿದ್ದಾರೆ.

ನಾವು ಭಯೋತ್ಪಾದನೆ ವಿರುದ್ಧ ಇದ್ದೇವೆ

ನಾವು ಭಯೋತ್ಪಾದನೆ ವಿರುದ್ಧ ಇದ್ದೇವೆ. ಯಾರು ಅದನ್ನು ಹರಡುತ್ತರೋ ಅವರ ವಿರುದ್ಧವಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ. ಯಾವ ವ್ಯಕ್ತಿ ತಮ್ಮ ಮನಸ್ಸಿನಲ್ಲಿ ಭಯೋತ್ಪಾದನೆಯನ್ನು ವಿರೋಧಿಸುತ್ತಾನೆಯೋ, ಆತನಿಲ್ಲದಿದ್ದರೆ, ಅದೇ ಸಮಸ್ಯೆಯಾಗುತ್ತದೆ ಎಂದು ಟೀಕಾಕಾರರಿಗೆ ಸಾನಿಯಾ ಉತ್ತರ ನೀಡಿದ್ದಾರೆ.

ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ

ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ

ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಬದಲಾಗಿ ನೀವು ಹೆಚ್ಚು ದ್ವೇಷ ಹರಡುತ್ತಿದ್ದೀರಿ. ಇತರರನ್ನು ಟ್ರೋಲ್​ ಮಾಡಿ ನೀವು ಏನನ್ನು ಸಾಧಿಸುವುದಿಲ್ಲ. ಒಂದು ಕಡೆ ಕುಳಿತು ಜನರನ್ನು ಜಡ್ಜ್​ ಮಾಡುವ ಬದಲಿಗೆ ದೇಶಕ್ಕೆ ಸೇವೆ ಸಲ್ಲಿಸಿ, ಆಗ ಭಯೋತ್ಪಾದನೆಗೆ ಎಲ್ಲಿಯ ಜಾಗವಿರುವುದಿಲ್ಲ ಎಂದಿದ್ದಾರೆ.

ಪಾಕಿಸ್ತಾನದ ಹೆಸರು ಬಳಸದೆ ಲೇಖನ

ಸಾನಿಮಾ ಮೇಡಂ, ಭಯೋತ್ಪಾದನೆ ಕುರಿತಂತೆ ದೊಡ್ಡ ಲೇಖನ ಬರೆದಿದ್ದೀರಿ ಆದರೆ, ಪಾಕಿಸ್ತಾನದ ಹೆಸರು ಎಲ್ಲೂ ಬಳಸದೆ ಚಾಣಾಕ್ಷತನ ಮೆರೆದಿದ್ದೀರಿ ಎಂದು ಸಾರ್ವಜನಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕವಾಗಿ ದಾಳಿಯನ್ನು ಖಂಡಿಸುವುದಾಗಲಿ, ಸಾಮಾಜಿಕ ಜಾಲತಾಣದಲ್ಲಾಗಲಿ ಹಾಗೂ ಕಟ್ಟಡ ಮೇಲ್ಛಾವಣಿಗೆ ಹೋಗಿ ನಾನು ಭಯೋತ್ಪಾದನೆ ವಿರುದ್ಧ ಎಂದು ಕಿರುಚುವುದು ನನಗೂ ಅವಶ್ಯವಿಲ್ಲ. ಎಂದು ಸೆಲೆಬ್ರಿಟಿಗಳು ಎಲ್ಲಾ ವಿಷಯಕ್ಕೂ ಪ್ರತಿಕ್ರಿಯಿಸಬೇಕು ಎಂಬ ಕೂಗಿಗೆ ಉತ್ತರಿಸಿದ್ದಾರೆ.

English summary
Sania Mirza, India's ace tennis professional, on Sunday posted a heartfelt message for the CRPF soldiers, who lost their lives in the Pulwama terror attack. Calling 14th February a "black day for India", Sania Mirza offered her support for the soldiers and their families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X