ನಿಪಾಹ್ ವೈರಸ್ ಭೀತಿ: ಪುದುಚೇರಿಯಾದ್ಯಂತ ಕಟ್ಟೆಚ್ಚರ!

ಪುದುಚೇರಿ, ಮೇ 26: ದೇಶದ ಜನರ ನಿದ್ದೆಕೆಡಿಸಿರುವ ನಿಪಾಹ್ ವೈರಸ್ ಭೀತಿಗೆ ಮುನ್ನೆಚ್ಚರಿಕೆ ಕ್ರಮದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈಗಾಗಲೇ 11 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಈ ಮಾರಣಾಂತಿಕ ಕಾಯಿಲೆಯ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಪುದುಚೇರಿಯಲ್ಲಿ ಸೂಚಿಸಲಾಗಿದೆ.

ಕೇರಳ ರಾಜ್ಯದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕೇರಳದ ಗಡಿಭಾಗದ ರಾಜ್ಯಗಳು ಜಾಗರೂಕವಾಗಿವೆ. ಈ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿಯೂ ಸಾಕಷ್ಟು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.

ಈ ಕುರಿತು ಈಗಾಗಲೇ ಇಲ್ಲಿನ ಎಲ್ಲಾ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೂ ಸೂಚನೆ ನೀಡಲಾಗಿದೆ. ಇದುವರೆಗೂ ಈ ವೈರಸ್ ನಿಂದಾಗಿ 11 ಜನರು ಮೃತರಾಗಿದ್ದು, ಮಲೇಶ್ಯಾದ ಕಾಡುಗಳಲ್ಲಿ ಕಂಡುಬರುವ ಒಂದು ರೀತಿಯ ಬಾವಲಿಗಳಿಂದ ಈ ಕಾಯಿಲೆ ಹರಡುತ್ತದೆ ಎಂಬುದು ಈಗಾಗಲೇ ತಿಳಿದುಬಂದಿದೆ.

Puducherry Collector issues precautionary steps for Nipah

ಆದ್ದರಿಂದ ಬೇರೆ ಬೇರೆ ದೇಶಗಳಿಂದ ಆಗಮಿಸುವ ಪ್ರವಾಸಗರನ್ನು, ಪ್ರಯಾಣಿಕರನ್ನು ವಿಶೇಷ ತಪಾಸಣೆಗೊಳಪಡಿಸಲಾಗುತ್ತಿದೆ. ಸದ್ಯಕ್ಕೆ ಈ ಕಾಯಿಲೆಗೆ ಯಾವುದೇ ರೀತಿಯ ಚಿಕಿತ್ಸೆ ಲಭ್ಯವಿಲ್ಲ. ಮುನ್ನೆಚ್ಚರಿಕೆಯೊಂದೇ ರೋಗದಿಂದ ಪಾರಾಗುವ ಉಪಾಯವೆನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+