ಸಿಂಗಾರ-ಬಂಗಾರವಾದ ಪುಟಾಣಿ ಶ್ವಾನಕ್ಕೆ ಸಿಕ್ಕಾಪಟ್ಟೆ ಪ್ರೀತಿ, ಫಸ್ಟ್ ಪ್ರೈಜ್

Posted By:
Subscribe to Oneindia Kannada

ಉತ್ತರ ಪ್ರದೇಶದಲ್ಲಿ ಈಗ ಚುನಾವಣೆ ಬೆಂಕಿ. ದಿನಕ್ಕೊಂದು ಸುದ್ದಿ, ವದಂತಿ, ಆರೋಪ-ಪ್ರತ್ಯಾರೋಪ, ರಾಜಕೀಯ ನಡೆಗೆ ದಾಳ ಉರುಳಿಸುತ್ತಿರುವ ನಾಯಕರು...ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ರಂಗೇರಿದೆ. ಸಮಾಜವಾದಿ ಪಕ್ಷದ ಪ್ರಣಾಳಿಕೆಯನ್ನು ಅಖಿಲೇಶ್ ಯಾದವ್ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಜತೆಗಿನ ದೋಸ್ತಿ ಅಖಿಲೇಶ್ ಗೆ ಹಣ್ಣೋ ಕಾಯೋ ತಿಳಿಯಲು ಇನ್ನೂ ಬಹಳ ಸಮಯ ಇದೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಉತ್ತಮ ತಳಿಯ ಶ್ವಾನಗಳಿಗಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಗೆದ್ದಿರುವ ಶ್ವಾನವನ್ನು ನೋಡಿ, ಹೆರಳು ಹಾಕಿದರೂ ನಡೀತಿತ್ತು ಅನ್ನಿಸದಿದ್ದರೆ ಕೇಳಿ. ಇನ್ನು ಪಂಜಾಬ್ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು ತಮ್ಮ ಪ್ರಚಾರ ಆರಂಭಿಸಿದ್ದಾರೆ. ಕೆಲವೇ ದಿನದ ಹಿಂದಿನವರೆಗೆ ಬಿಜೆಪಿಯಲ್ಲಿದ್ದ ಅವರಿಗೆ ಈಗ ಕಾಂಗ್ರೆಸ್ ಜತೆಗೆ ನಿಖಾ ಆಗಿದೆ.[ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]

ತಮಿಳುನಾಡಿನ ಕೊಯಮತ್ತೂರಿನಲ್ಲಿ ಎತ್ತಿನಬಂಡಿ ಸ್ಪರ್ಧೆ, ಕೋಲ್ಕತ್ತಾದಲ್ಲಿ ಪಂಡಿತ್ ಜಸ್ ರಾಜ್ ಅವರ ಸಂಗೀತ ಕಾರ್ಯಕ್ರಮ, ಬಿಹಾರದಲ್ಲಿ ಮದ್ಯಪಾನ ವಿರೋಧಿ ಅಭಿಯಾನ.. ಈ ಎಲ್ಲದರ ಫೋಟೋಗಳು ಇಲ್ಲಿವೆ. ಒಮ್ಮೆ ಕಣ್ಣು ಹಾಯಿಸಿದರೆ ಭಾರತದಲ್ಲೊಂದು ಸಣ್ಣ ಸುತ್ತು ಹೋಗಿಬಂದಂತೆ ಅನಿಸಬಹುದು. ಹೌದಾ, ಹಾಗನ್ನಿಸ್ತಾ ಎಂಬುದನ್ನು ತಿಳಿಸಿ.

ಉತ್ತಮ ತಳಿ ಶ್ವಾನ

ಉತ್ತಮ ತಳಿ ಶ್ವಾನ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಎಲ್ಲ ತಳಿಯ ಶ್ವಾನಗಳ ಚಾಂಪಿಯನ್ ಶಿಪ್ ಅನ್ನು ಭಾನುವಾರ ಆಯೋಜಿಸಲಾಗಿತ್ತು. ಯಾರ್ಕ್ ಶೈರ್ ತಳಿಯ ಶ್ವಾನಕ್ಕೆ ಅತ್ಯುತ್ತಮ ತಳಿ ಪ್ರಶಸ್ತಿ ದೊರೆಯಿತು.

ಎಲ್ಲೆಲ್ಲೂ ಸಂಗೀತವೇ..

ಎಲ್ಲೆಲ್ಲೂ ಸಂಗೀತವೇ..

ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಎಂದಿನ ತನ್ಮಯತೆಯಿಂದ ಪಂಡಿತ್ ಜಸ್ ರಾಜ್ ಅವರು ಕಂಡುಬಂದಿದ್ದು ಹೀಗೆ.

ಕಾಂಗ್ರೆಸ್ ಪರ ಸಿಧು ಬ್ಯಾಟಿಂಗ್

ಕಾಂಗ್ರೆಸ್ ಪರ ಸಿಧು ಬ್ಯಾಟಿಂಗ್

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಬ್ಯಾಟ್ ಬೀಸುತ್ತಿದ್ದಾರೆ ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು. ಅಮೃತ್ ಸರ್ ನ ರಾಮ್ ಭಾಗ್ ಉದ್ಯಾನದಲ್ಲಿ ಚುನಾವಣೆ ಪ್ರಚಾರದ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಯಾದ ರಾಜ್ಯಸಭಾ ಮಾಜಿ ಸದಸ್ಯ ಸಿಧು.

ಹಳ್ಳಿಗರ ಮದ್ಯನಾಶ

ಹಳ್ಳಿಗರ ಮದ್ಯನಾಶ

ಬಿಹಾರದ ಸಸರಾಂ ಹಳ್ಳಿಯ ಜನರು ಭಾನುವಾರ ಮದ್ಯಪಾನ ವಿರೋಧ ಅಭಿಯಾನದ ಭಾಗವಾಗಿ ಮದ್ಯ ಫರ್ನೇಸ್ ನಾಶಪಡಿಸಿದರು.

ಎತ್ತಿನ ಬಂಡಿ ಸ್ಪರ್ಧೆ

ಎತ್ತಿನ ಬಂಡಿ ಸ್ಪರ್ಧೆ

ಎಐಡಿಎಂಕೆ ನಾಯಕ ಎಸ್ ಪಿ ವೇಲುಮಣಿ ಕೊಯಮತ್ತೂರಿನಲ್ಲಿ ಎತ್ತಿನ ಬಂಡಿ ಸ್ಪರ್ಧೆಯನ್ನು ಉದ್ಘಾಟಿಸಿದರು.

ಸಮಾಜವಾದಿ ಪ್ರಣಾಳಿಕೆ

ಸಮಾಜವಾದಿ ಪ್ರಣಾಳಿಕೆ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಲಖನೌದಲ್ಲಿ ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಖಿಲೇಶ್ ಯಾದವ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A special photo feature with a major theme of Uttar Pradesh and Punjab election.
Please Wait while comments are loading...