ನಿತೀಶ್ ಗೆ ಟೋಪಿ ಹಾಕಿದ ಲಾಲೂ, ಮಜವಾದ ಫೋಟೋ ನೋಡಿ...
ಈಗ ರಂಜಾನ್ ಮಾಸ. ಎಲ್ಲೆಲ್ಲೂ ಇಫ್ತಾರ್ ಕೂಟ ನಡೆಯುತ್ತಿದೆ. ಒಂದು ಕಡೆ ಲಾಲೂ ಪ್ರಸಾದ್- ನಿತೀಶ್ ಕುಮಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದಾರೆ. ಅದರಲ್ಲೂ ನಿತೀಶ್ ಕುಮಾರ್ ಗೆ ಲಾಲೂ ಪ್ರಸಾದ್ ಟೋಪಿ ಹಾಕುತ್ತಿರುವ ಫೋಟೋವೊಂದಿದೆ.
ಇನ್ನು ಮೆಕ್ಕಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ಯತ್ನವನ್ನು ಸೌದಿ ಅರೇಬಿಯಾದ ಪೊಲೀಸರು ವಿಫಲಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮೂರು ರಾಷ್ಟ್ರಗಳ ಪ್ರವಾಸಕ್ಕೆ ದೆಹಲಿಯಿಂದ ಹೊರಟಿದ್ದಾರೆ. ಅದರಲ್ಲೂ ಅಮೆರಿಕದಲ್ಲೂ ಟ್ರಂಪ್ ಭೇಟಿ ಬಗ್ಗೆ ತುಂಬ ನಿರೀಕ್ಷೆ ಹಾಗೂ ಕುತೂಹಲವಿದೆ.
ಚೀನಾದಲ್ಲಿ ನಡೆದ ಅವಘಡದಲ್ಲಿ ಕನಿಷ್ಠ ನೂರು ಮಂದಿ ಮೃತಪಟ್ಟಿದ್ದಾರೆ. ಬಾಲಿವುಡ್ ನಟ ರಾಜ್ ಬಬ್ಬರ್ ಮುಂಬೈನಲ್ಲಿ ತಮ್ಮ ಅರವತ್ತೈದನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಆಸಕ್ತಿಕರ ಚಿತ್ರ-ಸುದ್ದಿ ಇಲ್ಲಿದೆ. ರಂಜಾನ್ ಮಾಸದ ಕೊನೆಯ ಹಂತದಲ್ಲಿ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಹೀಗೆ ಇಪ್ಪತ್ನಾಲ್ಕು ಗಂಟೆಯಲ್ಲಿನ ನಡೆದ ನಾನಾ ಘಟನೆಗಳ ಸುದ್ದಿ-ವರದಿ ನಿಮ್ಮ ಮುಂದಿದೆ. ನಿಮ್ಮ ಅಭಿಪ್ರಾಯವನ್ನು ಒಂದೆರಡು ಸಾಲಿನಲ್ಲಿ ತಿಳಿಸಿ.

ಇಫ್ತಾರ್ ಕೂಟದಲ್ಲಿ ನಿತೀಶ್ ಗೆ ಟೋಪಿ
ಇದು ತುಂಬ ಮಜವಾದ ಫೋಟೋ. ಶುಕ್ರವಾರ ಬಿಹಾರದ ಪಾಟ್ನಾದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಆರ್ ಜೆಡಿ ಮುಖ್ಯಸ್ಥರಾದ ಲಾಲೂ ಪ್ರಸಾದ್ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಟೋಪಿ ಹಾಕುತ್ತಿರುವುದು.

ಹೆಣ್ಣಾನೆಗೆ ಐಸ್ ಬಾಂಬ್
ಜರ್ಮನಿಯ ಪ್ರಾಣಿ ಸಂಗ್ರಹಾಲಯದಲ್ಲಿ ಮೂವತ್ನಾಲ್ಕು ವರ್ಷದ ಹೆಣ್ಣಾನೆಯೊಂದು ಹಣ್ಣು, ತರಕಾರಿ ಒಳಗೊಂಡ 'ಐಸ್ ಬಾಂಬ್' ಅನ್ನು ತಿನ್ನುತ್ತಿದೆ. ಅದನ್ನು ತಮಣಿಗೊಳಿಸಲು ಇಂಥ 'ಐಸ್ ಬಾಂಬ್' ಕೊಡಲಾಗುತ್ತದಂತೆ.

ಮೆಕ್ಕಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಕೋರ
ಈ ಫೋಟೋ ಬಿಡುಗಡೆ ಮಾಡಿರುವುದು ಸೌದಿಯ ಪ್ರೆಸ್ ಏಜೆನ್ಸಿ. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಆತ್ಮಹತ್ಯೆ ಬಾಂಬರ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆಯ ದೃಶ್ಯ. ಮೂರಂತಸ್ತಿನ ಕಟ್ಟಡದಲ್ಲಿದ್ದ ಆತ್ಮಹತ್ಯಾ ದಾಳಿಕೋರನ ಮೇಲೆ ಎರಗಲು ಪೊಲೀಸರು ಯತ್ನಿಸುವಾಗ, ಪ್ರತಿ ದಾಳಿ ನಡೆಸಿ, ತನ್ನನ್ನೇ ಸ್ಫೋಟಿಸಿಕೊಂಡಿದ್ದು, ಆಗ ಕಟ್ಟಡ ಕೂಡ ಕುಸಿದಿದೆ.

ಪ್ರವಾಸ ಹೊರಡುವ ಮುನ್ನ
ಪ್ರಧಾನಿ ನರೇಂದ್ರ ಮೋದಿ ಶನಿವಾರ ಮೂರು ರಾಷ್ಟ್ರಗಳ ಪ್ರವಾಸಕ್ಕೆ (ಪೋರ್ಚುಗಲ್, ಅಮೆರಿಕ ಮತ್ತು ನೆದರ್ ಲ್ಯಾಂಡ್ಸ್) ತೆರಳುವ ಮುನ್ನ ನವದೆಹಲಿಯಲ್ಲಿ ಕೈ ಬೀಸಿದರು.

ನೂರಾರು ಮಂದಿ ಸಾವು
ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕ್ಸಿನ್ಮೋ ಎಂಬಲ್ಲಿ ಶನಿವಾರ ಸಂಭವಿಸಿದ ಅನಾಹುತದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆ ಸ್ಥಳದ ದೃಶ್ಯ ಇಲ್ಲಿದೆ.

ರಾಜ್ ಬಬ್ಬರ್ ಜನ್ಮದಿನ
ಬಾಲಿವುಡ್ ನಟ ಹಾಗೂ ರಾಜಕಾರಣಿ ರಾಜ್ ಬಬ್ಬರ್ ತಮ್ಮ ಅರವತ್ತೈದನೇ ಜನ್ಮದಿನವನ್ನು ಮುಂಬೈನಲ್ಲಿ ತಮ್ಮ ಮಕ್ಕಳ ಜತೆ ಆಚರಿಸಿಕೊಂಡರು.

ಇಫ್ತಾರ್ ಕೂಟದಲ್ಲಿ ಕೇಜ್ರಿವಾಲ್
ನವದೆಹಲಿಯಲ್ಲಿ ಶುಕ್ರವಾರ ಇಫ್ತಾರ್ ಕೂಟದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.












Click it and Unblock the Notifications